

ಕೋಲಾರ: ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಮಾನವೀಯ ಗುಣಗಳು ಇಲ್ಲವಾಗಿದ್ದು, ಸಾಂಸತಿಕ ದಿವಾಳಿತನ ಹೆಚ್ಚಾಗುತ್ತಿದೆ ಎಂದು ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ದಾಸ್ ಕಳವಳವ್ಯಕ್ತಪಡಿಸಿದರು.
ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ವತಿಯಿಂದ ಶುಕ್ರವಾರ ಮಂಗಸಂದ್ರದ ಸ್ನಾತಕೋತ್ತರ ಕೇಂದ್ರದಲ್ಲಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ರ 133ನೇ ಜಯಂತಿ ಉದ್ಘಾಟಿಸಿ ಮಾತನಾಡಿ, ಯುವಕರು ಬುದ್ಧಿವಂತರಾಗುತ್ತಿದ್ದಾರೆಯೇ ಹೊರತು ಮಾನವೀಯ ಗುಣಗಳು ಅವರಲ್ಲಿ ಕಾಣುತ್ತಿಲ್ಲ ಎಂದರು.
ಸಂವಿಧಾನ ಉಳಿಸಿಕೊಳ್ಳಬೇಕಾದರೆ ಬುದ್ಧಿವಂತರಿಗಿಂತಲೂ ಹೆಚ್ಚಾಗಿ ಮಾನವೀಯತೆ, ಸಹೃದಯ, ಸುಸಂಸತ ಗುಣಗಳನ್ನು ಹೊಂದಿರುವ ಯುವಕರ ಬೇಕಾಗಿದ್ದು, ಇಂತಹ ಯುವಕರಿಂದ ಮಾತ್ರವೇ ಸಂವಿಧಾನವನ್ನು ಕಾಪಾಡಲು ಸಾಧ್ಯಎಂದು ಅಭಿಪ್ರಾಯಪಟ್ಟರು.
ಅಂಬೇಡ್ಕರ್ ಒಂದು ಸಮುದಾಯಕ್ಕೆ ಸೇರಿವರಲ್ಲ!:
ಬಹುತೇಕರಲ್ಲಿ ಅಂಬೇಡ್ಕರ್ ಎಂದರೆ ದಲಿತರು. ಅಂಬೇಡ್ಕರ್ ಎಂದರೆ ಮೀಸಲಾತಿ ಎಂಬ ತಪ್ಪು ಕಲ್ಪನೆಯಿದ್ದು, ಅಂಬೇಡ್ಕರ್ ಯಾವುದೇ ಜಾತಿ, ಧರ್ಮ, ವರ್ಗಕ್ಕೆ ಸೇರಿದರಲ್ಲ. ಅವರು ಇಡೀ ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಬೇಕಾದವರು ಎಂಬುದನ್ನು ತಿಳಿಯಬೇಕಿದೆ ಎಂದರು. ವೈಸ್ರಾಯ್ ಸಂಪುಟದಲ್ಲಿ ಕಾನೂನು ಸಚಿವರಾಗಿದ್ದಂತಹ ಅಂಬೇಡ್ಕರ್ ಅವರು ಕಾರ್ಮಿಕರ ಕೆಲಸದ ಅವಧಿಯನ್ನು 14 ರಿಂದ 8 ಗಂಟೆಗೆ ಇಳಿಸಿದರು. ವೇತನ ಸಹಿತ ರಜೆ, ಮಹಿಳೆಯರಿಗೆ ಹೆರಿಗೆ ರಜೆ ನೀಡಿದರು. ಅಂಬೇಡ್ಕರ್ ಅಂದು ಫ್ಯಾಕ್ಟರಿ ಕಾನೂನು ತರದಿದ್ದರೆ ಇಂದು ಕಾರ್ಮಿಕರಿಗೆ ಯಾವುದೇ ಹಕ್ಕುಗಳು ದೊರೆಯುತ್ತಿರಲಿಲ್ಲ ಎಂದು ನಾಗಮೋಹನ್ದಾಸ್ ಹೇಳಿದರು.
ಸಂವಿಧಾನಕ್ಕೆ ಪರ್ಯಾಯವೇನು?
ಕೆಲವು ಅಾನಿಗಳು ಸಂವಿಧಾನದಲ್ಲಿರುವ ಅಂಶಗಳು ಸರಿಯಿಲ್ಲ, ದೋಷದಿಂದ ಕೂಡಿವೆ ಎಂದು ಹೇಳಿಕೆ ನೀಡುತ್ತಾರೆ. ಸರಿ ಆಯ್ತು, ಸಂವಿಧಾನ ಸರಿಯಿಲ್ಲ, ಸಂವಿಧಾನಕ್ಕೆ ಪರ್ಯಾಯವೇನು ಎನ್ನುವುದಕ್ಕೆ ಅವರ ಬಳಿ ಉತ್ತರವಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಪರ್ಯಾಯವಾಗಿ ಯಾವ ವ್ಯವಸ್ಥೆ ನೀವು ತರುತ್ತೀರಿ ಎಂದು ಪ್ರಶ್ನಿಸಿದರು. ಯುವಕರು ಅಂಬೇಡ್ಕರ್ ಅವರನ್ನು ಏ.14ರ ಆಚರಣೆಗೆ ಸೀಮಿತಗೊಳಿಸದೆ, ಪ್ರತಿದಿನ ಪ್ರತಿ ಣ ಅವರ ತತ್ವಗಳನ್ನು ಅನುಸರಿಸಿಕೊಂಡು ಹೋದಾಗ ಸಂವಿಧಾನದ ಮಹತ್ವ ಏನು ಎಂಬುದು ಎಲ್ಲರಿಗೂ ತಿಳಿಯಲು ಸಾಧ್ಯ ಎಂದು ತಿಳಿಸಿದರು.
ದೇಶ ತಿಳಿದರೆ ಮಾತ್ರವೇ ಸಂವಿಧಾನ ಅರ್ಥವಾಗುತ್ತದೆ:
ದೇಶದ ಎಂದರೆ ಕೇವಲ ಅದು ಮಣ್ಣಲ್ಲ, ಜನರು. ದೇಶದ ಎಲ್ಲ ಭಾಗಗಳಲ್ಲಿನ ಜನರು, ಆಚರಣೆ, ಆಹಾರ ಪದ್ಧತಿ, ಭಾಷೆ, ಆರ್ಥಿಕ, ಸಾಮಾಜಿಕ, ರಾಜಕೀಯ ಪರಿಸ್ಥಿತಿಗಳನ್ನು ತಿಳಿಸಿದಾಗ ಮಾತ್ರವೇ ನಮಗೆ ಸಂವಿಧಾನ ಅರ್ಥವಾಗುತ್ತದೆ. ಅನ್ಯಾಯ, ಅಸಮಾನತೆಯ ಕಲ್ಪನೆ ಇಲ್ಲದವರಿಗೆ ಸಾಮಾಜಿಕ ನ್ಯಾಯ ಎಂದರೆ ಏನು ತಿಳಿಯುತ್ತದೆ ಎಂದು ನಾಗಮೋಹನ್ದಾಸ್ ಪ್ರತಿಪಾದಿಸಿದರು.
ಕಾರ್ಯಕ್ರಮ ಸಂಯೋಜಕ ಡಾ.ಆರ್.ಮಂಜುನಾಥ್, ಉಪನ್ಯಾಸಕರಾದ ಡಾ.ಗುಂಡಪ್ಪ, ಡಾ.ಸತೀಶ್, ಶಿವರಾಜ್, ಡಾ.ರೂಪಾ, ಲೋಕೇಶ್, ಮಮತಾ, ಮೈತ್ರಿ, ಶ್ರೀಲತಾ, ಸುಷ್ಮಾ, ಡಾ.ಶಿಲ್ಪಾ ಇದ್ದರು.
ಕೋಟ್..
ಅಂಬೇಡ್ಕರ್ ಅವರನ್ನು ದೈವೀಕರಿಸುವ ಕೆಲಸ ಹೆಚ್ಚಾಗಿ ನಡೆಯುತ್ತಿದ್ದು, ಅವರ ತತ್ವಾದರ್ಶಗಳನ್ನು ಬೆಳೆಸಿಕೊಳ್ಳುವುದು ಕಡಿಮೆಯಿದೆ. ಅಂಬೇಡ್ಕರ್ ಪ್ರತಿಯೊಬ್ಬರಿಗೂ ಅರಿವಾಗಬೇಕೇ ಹೊರತು, ಅಮಲಾಗಬಾರದು. ಯುವಕರು ಬುದ್ಧಿವಂತರಾಗಿದ್ದರೂ ಪರವಾಗಿಲ್ಲ. ಆದರೆ, ಅವರಲ್ಲಿ ಮಾನವೀಯ ಗುಣಗಳನ್ನು ಬೆಳೆಸುವಂತಹ ಕೆಲಸವನ್ನು ವಿಶ್ವವಿದ್ಯಾಲಯಗಳು ಮಾಡಬೇಕಿವೆ. - ಪೊ.ನಿರಂಜನ ವಾನಳ್ಳಿ, ಕುಲಪತಿಗಳು, ಬೆಂ.ಉತ್ತರ ವಿವಿ.
ಬಾಕ್ಸ್..
ಅಮ್ಮನ ಕಣ್ಣಿನಿಂದ ಅಂಬೇಡ್ಕರ್ ನೋಡಿ:
ಬಹುತ್ವ ಭಾರತದ ಭವಿಷ್ಯ ಎಂದರೆ ಅದು ಸಂವಿಧಾನ ಮಾತ್ರ. ಅಂಬೇಡ್ಕರ್ ಅವರನ್ನು ಅಮ್ಮನ ಕಣ್ಣಿನಿಂದ ನೋಡಿದಾಗ ಮಾತ್ರವೇ ಸಂವಿಧಾನದ ಮಹತ್ವ ನಮಗೆ ತಿಳಿಯುತ್ತದೆ. ಜಾತಿ, ಧರ್ಮ, ವರ್ಗ, ಭಾಷೆಯ ಕಣ್ಣಿನಿಂದ ನೋಡಿದರೆ ಅಂಬೇಡ್ಕರ್ ಅರ್ಥವಾಗುವುದಿಲ್ಲ ಎಂದು ಜನಪದ ಅಕಾಡೆಮಿ ಅಧ್ಯ ಗೊಲ್ಲಹಳ್ಳಿ ಶಿವಪ್ರಸಾದ್ ಹೇಳಿದರು.