ಇಂದು ಅಶ್ವರ್ಯಸೂರ್ಯ ಲೆಗಸಿ ಅಭಿವೃದ್ಧಿ ಪಡಿಸಿದ ನಿವೇಶನಗಳ ಉದ್ಘಾಟನೆ| Ashwasurya legacy

ವಿಜಯವಾಣಿ - 2025-11-08T082400.601
Published on

ಬೆಂಗಳೂರು: ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತನ್ನದೇ ಆದ ಖ್ಯಾತಿ ಗಳಿಸಿರುವ 'ಅಶ್ವಸೂರ್ಯ ಲೆಗಸಿ'(Ashwasurya legacy) ನೆಲಮಂಗಲ-ದೊಡ್ಡಬಳ್ಳಾಪುರ ಹೆದ್ದಾರಿಯಲ್ಲಿ ನಿವೇಶನಗಳನ್ನು ಅಭಿವೃದ್ಧಿ ಮಾಡಿದ್ದು ಇಂದು(ನ. 08) ಉದ್ಘಾಟನೆಯಾಗಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ. 'ಅಶ್ವಸೂರ್ಯ ಲೆಗಸಿ ಪ್ರೀಮಿಯಂ ಪ್ಲಾಟ್‌ಗಳನ್ನು ಹೊಂದಿದೆ. ಇದು ನೆಲಮಂಗಲ ಮತ್ತು ದೊಡ್ಡಬಳ್ಳಾಪುರ ಹೆದ್ದಾರಿಯಲ್ಲಿದ್ದು ವಿವಿಧ ಸೌಲಭ್ಯಗಳ ಲಭ್ಯ ಇವೆ. ಪ್ರದೇಶವೂ 16 ಎಕರೆ ವಿಸ್ತೀರ್ಣ ಹೊಂದಿದೆ. ಒಟ್ಟು 245 ಪ್ಲಾಟ್‌ಗಳು ಲಭ್ಯ ಇವೆ.

ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಮೂಲಸೌಕರ್ಯದೊಂದಿಗೆ ಉನ್ನತ ಬೆಳವಣಿಗೆಯ ಕಾರಿಡಾರ್‌ನಲ್ಲಿ ನೂತನ ಯೋಜನೆ ಕಾರ್ಯಗತಗೊಂಡಿದೆ. ಆಶಸೂರ್ಯ ರಿಯಾಲಿಟೀಸ್‌ನ ನಿರ್ದೇಶಕರಾದ ಎಸ್. ರಂಜಿತ್ ಕುಮಾರ್ ಮತ್ತು ಜಿ. ಗೀತಾಂಜಲಿ ನೇತೃತ್ವದಲ್ಲಿ ' ಉದ್ಯಮ ಯಶಸ್ವಿಯಾಗಿ ನಡೆಯುತ್ತಿದೆ.

ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಅಶ್ವಸೂರ್ಯ ರಿಯಾಲಿಟೀಸ್ 7 ವರ್ಷಗಳಿಗೂ ಹೆಚ್ಚು ಕಾಲ ಅತ್ಯುತ್ತಮ ಸೇವೆ ಸಲ್ಲಿಸಿದೆ. ಆಧುನಿಕ ಜೀವನವನ್ನು ಜೀವನವನ್ನು ಪ್ರಕೃತಿಯೊಂದಿಗೆ ಸರಾಗವಾಗಿ ಬೆರೆಯುವ ಪ್ರೀಮಿಯಂ ಪ್ಲಾಟ್ ಅಭಿವೃದ್ಧಿ ಮಾಡುವಲ್ಲಿ ಖ್ಯಾತಿ ಗಳಿಸಿದೆ.

''ಸಂಸ್ಥೆಯ ಬಿಎಂಆ‌ರ್ ಡಿಎ ಅನುಮೋದಿತ ಎ- ಖಾತಾ ಯೋಜನೆಗಳು ಅಪಾರ ಮೆಚ್ಚುಗೆ ಗಳಿಸಿದ್ದು, ಸುರಕ್ಷಿತ ಎಂದು ಹೆಸರು ಗಳಿಸಿವೆ. ಅಲ್ಲದೇ ಇಲ್ಲಿ ಹೆಚ್ಚಿನ ಮೌಲ್ಯದ ಹೂಡಿಕೆಗೂ ಬದ್ದ ಸಂಸ್ಥೆ ಮಾಡುವ ಪ್ರತಿಯೊಂದರಲ್ಲೂ ಗ್ರಾಹಕರ ನಿರೀಕ್ಷೆಗಳನ್ನು ಮೀರಲು ಮತ್ತು ಶಾಶ್ವತ ಸಂಬಂಧಗಳನ್ನು ಬೆಸೆಯುವಲ್ಲಿ ಶ್ರಮಿಸುತ್ತಿದೆ. ಗ್ರಾಹಕರು ಮತ್ತು ಪಾಲುದಾರರೊಂದಿಗೆ ಪ್ರತಿ ಹಂತದಲ್ಲೂ ಮುಕ್ತ ಮತ್ತು ಪ್ರಾಮಾಣಿಕ ಸಂವಹನ ನಡೆಸಲಾಗುತ್ತದೆ ಎಂದು ಕಂಪನಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net