ಕ್ಷತ್ರಿಯ ಮರಾಠ ಹಾಸ್ಟೆಲ್ ಉದ್ಘಾಟನೆ ಮೇ 26ಕ್ಕೆ

ramesh
ಸುದ್ದಿಗೋಷ್ಠಿಯಲ್ಲಿ ಎಚ್.ಬಿ.ರಮೇಶ್ ಬಾಬು ಜಾದವ್ ಮಾತನಾಡಿದರು. ಎಚ್.ಸಿದ್ಧೋಜಿರಾವ್ ಜಾಧವ್, ಆರ್.ಚಂದ್ರರಾವ್ ಘಾರ್ಗೆ, ಕಾರ್ಯಾಧ್ಯಕ್ಷ ಇ.ಚೂಡಾಮಣಿ ಪವಾರ್, ಜಗತಾಪ್ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.
Published on

ಶಿವಮೊಗ್ಗ: ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಶಿವಮೊಗ್ಗ ಜಿಲ್ಲಾ ಶಾಖೆಯಿಂದ ಜೆ.ಎಚ್.ಪಟೇಲ್ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಿರುವ ವಿದ್ಯಾರ್ಥಿ ನಿಲಯದ ಉದ್ಘಾಟನೆ ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ಕಾರ್ಯಕ್ರಮ ಮೇ 26ರಂದು ಬೆಳಗ್ಗೆ 10.30ಕ್ಕೆ ನಡೆಯಲಿದೆ ಎಂದು ಜಿಲ್ಲಾ ಉಪಾಧ್ಯಕ್ಷ ಎಚ್.ಬಿ.ರಮೇಶ್ ಬಾಬು ಜಾಧವ್ ಹೇಳಿದರು.

ಬೆಂಗಳೂರು ಗೋಸಾಯಿ ಮರಾಠ ಮಠದ ಶ್ರೀ ಮಂಜುನಾಥ ಭಾರತೀ ಸ್ವಾಮೀಜಿ ಸಾನಿಧ್ಯವಹಿಸಿ ವಿದ್ಯಾರ್ಥಿ ನಿಲಯ ಉದ್ಘಾಟಿಸಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕ್ಷತ್ರಿಯ ಪರಿಷತ್ ಗೌರ‌್ನಿಂಗ್ ಕೌನ್ಸಿಲ್ ಚೇರ್ಮನ್ ಎಸ್.ಆರ್.ಸಿಂಧ್ಯಾ, ಪ್ರಧಾನ ಕಾರ್ಯದರ್ಶಿ ಟಿ.ಆರ್. ಸುನೀಲ್ ಚವ್ಹಾಣ್, ಖಜಾಂಚಿ ಟಿ.ಆರ್.ವೆಂಕಟರಾವ್ ಚವ್ಹಾಣ್, ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ಪ್ರಕಾಶ್ ಆರ್. ಪಾಗೋಜಿ ಭಾಗವಹಿಸುವರು. ಇಂದಿರಾಬಾಯಿ ಲಕ್ಷ್ಮೀಕಾಂತ್ ಪವಾರ್ ಹಾಗೂ ಮಿಥುನ್ ಜೆ. ಜಗದಾಳೆ ಅವರನ್ನು ಸನ್ಮಾನಿಸಲಾಗುವುದು ಎಂದರು.
ಛತ್ರಾಪತಿ ಶಿವಾಜಿ ಮರಾಠ ಟ್ರಸ್ಟ್ ಅಧ್ಯಕ್ಷ ಎಚ್.ಸಿದ್ಧೋಜಿರಾವ್ ಜಾಧವ್, ಶಿವಮೊಗ್ಗದ ಕ್ಷತ್ರಿಯ ಮರಾಠ ಸಹಕಾರ ಸಂಘದ ಆರ್.ಬಿ.ಸುರೇಶ್ ಬಾಬು ಮೋರೆ, ಪರಿಷತ್ ನಗರಾಧ್ಯಕ್ಷ ಬಿ.ಕೆ.ದಿನೇಶ್ ರಾವ್ ಚವ್ಹಾಣ್, ಶಿವಮೊಗ್ಗ ತಾಲೂಕು ಗ್ರಾಮಾಂತರ ಅಧ್ಯಕ್ಷ ಎಂ.ಡಿ.ದೇವರಾಜ್ ಶಿಂಧೆ ಪಾಲ್ಗೊಳ್ಳಲಿದ್ದಾರೆ. ಪರಿಷತ್ ಅಧ್ಯಕ್ಷ ಎಸ್.ಸುರೇಶ್‌ರಾವ್ ಸಾಠೆ ಅಧ್ಯಕ್ಷತೆ ವಹಿಸುವರು ಎಂದು ಹೇಳಿದರು.
ಪರಿಷತ್‌ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ಬಿ.ಸುರೇಶ್‌ಬಾಬು ಮೋರೆ ಮಾತನಾಡಿ, ಸೂಡಾದಿಂದ ಖರೀದಿಸಿದ್ದ ನಿವೇಶನದಲ್ಲಿ ಸುಮಾರು 4 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ವಿದ್ಯಾರ್ಥಿ ನಿಲಯದಲ್ಲಿ 29 ಕೊಠಡಿಗಳಿವೆ. ಈಗ ಉಳಿದಿರುವ ಜಾಗದಲ್ಲಿ ಸಮುದಾಯ ಭವನ ನಿರ್ಮಿಸಲಾಗುವುದು ಎಂದು ತಿಳಿಸಿದರು.
ಪರಿಷತ್ ಜಿಲ್ಲಾಧ್ಯಕ್ಷ ಆರ್.ಚಂದ್ರರಾವ್ ಘಾರ್ಗೆ, ಕಾರ್ಯಾಧ್ಯಕ್ಷ ಇ.ಚೂಡಾಮಣಿ ಪವಾರ್, ಉಪಾಧ್ಯಕ್ಷ ಎಚ್.ಸಿದ್ಧೋಜಿರಾವ್ ಜಾಧವ್, ಪ್ರಮುಖರಾದ ಡಿ.ಎಂ.ರಾಜ್‌ಕುಮಾರ್ ಜಗತಾಪ್, ಬಿ.ಕೆ.ದಿನೇಶ್‌ರಾವ್ ಚವ್ಹಾಣ್, ಡಿ.ತುಕಾರಾಂ ಮಾನೆ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net