ದೇವಿಯ ಬ್ರಹ್ಮರಥದ ಗದ್ದುಗೆ ಉದ್ಘಾಟನೆ

brahmaratha
ಕಡೂರು ತಾಲೂಕು ಪಟ್ಟಣಗೆರೆ ಗ್ರಾಮದಲ್ಲಿ ಕಟ್ಟೆಹೊಳೆಯಮ್ಮ ದೇವಾಲಯದ ಬ್ರಹ್ಮರಥದ ಗದ್ದುಗೆ ಉದ್ಘಾಟಿಸಲಾಯಿತು. ಎಸ್.ಬಿ.ಹನುಮಂತಪ್ಪ, ಲೋಕೇಶ್, ಮಲ್ಲೇಶಪ್ಪ, ಲಚ್ಚಾನಾಯ್ಕ, ಅಣ್ಣಯ್ಯ ಇತರರಿದ್ದರು.
Published on

ಕಡೂರು: ತಾಲೂಕಿನ ಪಟ್ಟಣಗೆರೆ ಗ್ರಾಮದ ಕಟ್ಟೆಹೊಳೆಯಮ್ಮ ದೇವಿ ಬ್ರಹ್ಮರಥದ ಗದ್ದುಗೆ ಹಾಗೂ ದೇವಾಲಯದ ನೂತನ ಕಚೇರಿಯನ್ನು ಭಾನುವಾರ ಉದ್ಘಾಟಿಸಲಾಯಿತು.
ಕಟ್ಟೆಹೊಳೆಯಮ್ಮ ದೇವಿಯ 14 ಗ್ರಾಮಗಳ ಒಕ್ಕಲುಗಳು ಮತ್ತು ಗುಡಿಗೌಡರ ಉಪಸ್ಥಿತಿಯಲ್ಲಿ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಿದವು. ಸುತ್ತಮುತ್ತಲಿನ ಗ್ರಾಮಗಳ ವಿವಿಧ ದೇವರನ್ನು ಕರೆತರಲಾಗಿತ್ತು.
ಜಾತ್ರಾ ಸಮಿತಿ ಅಧ್ಯಕ್ಷ ಎಸ್.ಬಿ.ಹನುಮಂತಪ್ಪ ಮಾತನಾಡಿ, ಸಮಿತಿಯಿಂದ ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಲಾಗಿದೆ. ಇನ್ನೂ ಬಹಳಷ್ಟು ಕಾರ್ಯಗಳು ಆಗಬೇಕಿದ್ದು ಹಂತ ಹಂತವಾಗಿ ಅವುಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಭಕ್ತರ ಸಹಕಾರ ಕೋರಲಾಗುವುದು ಎಂದರು.
ಸಮಿತಿ ಕಾರ್ಯದರ್ಶಿ ಮಹೇಶ್ವರಪ್ಪ, ಅಂಗಡಿ ಲೋಕೇಶ್, ಕುರುಬಗೆರೆ ಮಲ್ಲೇಶಪ್ಪ, ಎನ್.ಜಿ.ಕೊಪ್ಪಲು ಲಚ್ಚಾನಾಯ್ಕ, ದೊಡ್ಡಪಟ್ಟಣಗೆರೆ ಅಣ್ಣಯ್ಯ, ಎರೇಹಳ್ಳಿ ಜಿ.ತಿಮ್ಮರಾಯಪ್ಪ, ಜಿಗಣೇಹಳ್ಳಿ ಅಜ್ಜಯ್ಯ, ಬಸಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net