ಯಗವಕೋಟೆಯ ಗಾಯತ್ರಿ ಭವನ ಉದ್ಘಾಟನೆ

Published on

ಚಿಂತಾಮಣಿ: ತಾಲೂಕಿನ ಯಗವಕೋಟೆ ಗ್ರಾಮದಲ್ಲಿ ಶ್ರೀ ವೀರನಾರಾಯಣಸ್ವಾಮಿ ಬ್ರಾಹ್ಮಣ ಸೇವಾ ಸಂಘ, ತಾಲೂಕು ಬ್ರಾಹ್ಮಣರ ಸಂಘದಿಂದ ಗಾಯತ್ರಿ ಭವನ ಉದ್ಘಾಟನಾ ಸಮಾರಂಭ ಆ.24 ರಂದು ಹಮ್ಮಿಕೊಳ್ಳಲಾಗಿದೆ. ಮುಂಜಾನೆ 3 ಗಂಟೆಗೆ ಗಣಹೋಮ, ವಾಸ್ತುದೇವತಾ, ಲಕ್ಷ್ಮೀನಾರಾಯಣಹೋಮ, ಗೋಪೂಜೆ ಪೂರ್ಣಾಹುತಿ. ಬೆಳಗ್ಗೆ 11ಗಂಟೆ ನಂತರ ಗಾಯತ್ರಿ ಭವನದ ಉದ್ಘಾಟನೆ, ಮಧ್ಯಾಹ್ನ ಅನ್ನದಾನದ ವ್ಯವಸ್ಥೆ ಮಾಡಲಾಗಿದೆ. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎಸ್​.ರಘುನಾಥ್​ ಭವನ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷರು, ಯಗವಕೋಟೆ ಶ್ರೀ ವೀರನಾರಾಯಣಸ್ವಾಮಿ ಬ್ರಾಹ್ಮಣ ಸೇವಾ ಸಂಘ ಅಧ್ಯಕ್ಷ ಆರ್​.ಲಕ್ಷ್ಮೀಕಾಂತ್​, ಕೆ.ಜನಾರ್ಧನರಾವ್​, ನೇತ್ರ ತಜ್ಞ ಡಾ.ರಾಜಶೇಖರ್​, ಎಸ್​.ನಾಗರಾಜ, ಕೆ.ನಾಗ ಭೂಷಣರಾವ್​, ಜಿಲ್ಲಾ ಪ್ರತಿನಿಧಿ ಪಿ.ಆರ್​.ಪ್ರಕಾಶ್​, ಹಿರಿಯ ವಕೀಲ ಬಿ.ಆರ್​.ಶ್ರೀನಾಥ್​, ಆಂಧ್ರ ಪ್ರದೇಶದ ಸನಗರಂ ಪಟ್ಟಾಭಿರಾಮಯ್ಯ, ರಾಘವೇಂದ್ರ, ವಿ.ಶ್ರೀನಿವಾಸಕುಮಾರ್​, ಎಚ್​.ಆರ್​.ವೆಂಕಟೇಶ ಮೂರ್ತಿ ಆಗಮಿಸಲಿದ್ದಾರೆ ಎಂದು ಸಂಘದ ಪದಾಧಿಕಾರಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net