ಫೆ.10ರಂದು ಹವಾನಿಯಂತ್ರಿತ ಬಂಟರ ಭವನ ಉದ್ಘಾಟನೆ

shimogga bantara bhavana press meet
ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಡಾ. ಎ.ಸತೀಶ್‌ಕುಮಾರ್ ಶೆಟ್ಟಿ ಮಾತನಾಡಿದರು.
Published on

ಶಿವಮೊಗ್ಗ: ನಗರದ ಗೋಪಾಲಗೌಡ ಬಡಾವಣೆಯ ಬಿ ಬ್ಲಾಕ್‌ನಲ್ಲಿ ಬಂಟರ ಯಾನೆ ನಾಡವರ ಸಂಘದಿಂದ 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸಂಪೂರ್ಣ ಹವಾನಿಯಂತ್ರಿತ ಬಂಟರ ಭವನದ ಉದ್ಘಾಟನಾ ಸಮಾರಂಭ ಫೆ.10ರಂದು ಸಂಜೆ 4ಕ್ಕೆ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಡಾ. ಎ.ಸತೀಶ್‌ಕುಮಾರ್ ಶೆಟ್ಟಿ ತಿಳಿಸಿದರು.

2016ರಲ್ಲಿ ಬಂಟರ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದು ಇದೀಗ ಪೂರ್ಣಗೊಂಡು ಉದ್ಘಾಟನೆಗೆ ಸಜ್ಜಾಗಿದೆ. 800 ಆಸನವುಳ್ಳ ಸಭಾಂಗಣ, 12 ಕೊಠಡಿಗಳಿವೆ. 400 ಜನ ಕುಳಿತು ಊಟ ಮಾಡುವ ಭೋಜನಾಲಯವಿದೆ. ಸರ್ಕಾರದಿಂದ 4.50 ಕೋಟಿ. ರೂ. ಅನುದಾನ ಬಂದಿದ್ದು, ಉಳಿದ ಹಣವನ್ನು ಸಮಾಜದ ಮುಖಂಡರು ಭರಿಸಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೆಂಗಳೂರಿನ ಎಂಆರ್‌ಜಿ ಗ್ರೂಪ್‌ನ ಚೇರ್ಮನ್ ಕೆ.ಪ್ರಕಾಶ್‌ಶೆಟ್ಟಿ ಮತ್ತು ಎಂಎಲ್‌ಸಿ ಮಂಜುನಾಥ್ ಭಂಡಾರಿ ತಲಾ 50 ಲಕ್ಷ ರೂ. ದೇಣಿಗೆ ನೀಡಿದ್ದು ಸಭಾಭವನವನ್ನು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸುವರು. ಭೋಜನಾಲಯವನ್ನು ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ, ಸಭಾ ಕಾರ್ಯಕ್ರಮವನ್ನು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಫೋಟೋ ಗ್ಯಾಲರಿಯನ್ನು ಬೆಂಗಳೂರಿನ ದಾನಿ ಕೆ.ಪ್ರಕಾಶ್‌ಶೆಟ್ಟಿ ಹಾಗೂ ಆಡಳಿತ ಕಚೇರಿಯನ್ನು ಎಂಎಲ್‌ಸಿ ಮಂಜುನಾಥ್ ಭಂಡಾರಿ ಉದ್ಘಾಟಿಸುವರು ಎಂದರು.
ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಶಾಸಕ ಎಸ್.ಎನ್.ಚನ್ನಬಸಪ್ಪ, ಎಂಎಲ್‌ಸಿಗಳಾದ ಎಸ್.ರುದ್ರೇಗೌಡ, ಡಿ.ಎಸ್.ಅರುಣ್ ಮುಖ್ಯ ಅತಿಥಿಗಳಾಗಿರುವರು. ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಗುರುರಾಜಶೆಟ್ಟಿ ಗಂಟಿಹೊಳೆ, ಹರೀಶ್ ಪೂಂಜಾ, ಅಶೋಕ್ ರೈ, ಎಂಎಲ್‌ಸಿ ಭಾರತಿ ಶೆಟ್ಟಿ, ಮುಂಬೈನ ಕೈಗಾರಿಕೋದ್ಯಮಿ ಮಂಡಗದ್ದೆ ಅಡ್ಡಮನೆ ಪ್ರಕಾಶ್‌ಶೆಟ್ಟಿ, ಚಿಕ್ಕಮಗಳೂರಿನ ಲ್ೈಲೈನ್ ಫೀಡ್ಸ್ ಪ್ರೈ.ಲಿ. ಚೇರ್ಮನ್ ಕಿಶೋರ್‌ಕುಮಾರ್ ಹೆಗಡೆ ಸೇರಿ ಸಂಘದ ಮಹಾ ಪೋಷಕರು ಹಾಗೂ ಪದಾಧಿಕಾರಿಗಳು ಭಾಗವಹಿಸುವರು ಎಂದರು.
ಸಂಘದ ಗೌರವಾಧ್ಯಕ್ಷ ಎಂ.ಕೆ. ಸುರೇಶ್‌ಕುಮಾರ್, ಪ್ರಮುಖರಾದ ದಿವಾಕರ್ ಶೆಟ್ಟಿ, ವೈ.ವಿ.ಶೆಟ್ಟಿ, ಸುರೇಶ್ ಶೆಟ್ಟಿ, ಸುರೇಶ್‌ಕುಮಾರ್ ಶೆಟ್ಟಿ, ಮಹೇಶ್ ಶೆಟ್ಟಿ, ರಾಜೀವ್ ಶೆಟ್ಟಿ, ಪುಷ್ಪಾ ಶೆಟ್ಟಿ, ರಾಘವೇಂದ್ರ ಶೆಟ್ಟಿ, ರಾಜ್ ಮೋಹನ್ ಹೆಗ್ಡೆ, ರಮೇಶ ಶೆಟ್ಟಿ, ಕುಶಾಲ್ ಶೆಟ್ಟಿ, ಪರಮೇಶ್ವರ ಶೆಟ್ಟಿ, ಮಂಜುನಾಥ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net