

ವಿಜಯಪುರ: ಗುಮ್ಮಟ ನಗರಿ ವಿಜಯಪುರದಲ್ಲಿ ಫೆಬ್ರುವರಿ 24ರಿಂದ 26ರ ವರೆಗೆ ಮೂರು ದಿನಗಳ ಕಾಲ 3ನೇ ರಾಜ್ಯಮಟ್ಟದ ವಿಶ್ವಕರ್ಮ ವಧು-ವರರ ಅನ್ವೇಷಣಾ ಸಾಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಪ್ರಮೋದ ಬಡಿಗೇರ ತಿಳಿಸಿದ್ರು. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ನಗರದ ಶಿವಗಿರಿ ಬಳಿ ಇರುವ ಜಯ ಶಾಂತಲಿಂಗೇಶ್ವರ ವಿಶ್ವಶಾಂತಿ ಭವನದಲ್ಲಿ ಅನ್ವೇಷಣಾ ಸಾಮವೇಶ ನಡೆಯಲಿದೆ ಎಂದರು. ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ರಾಜ್ಯ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಆಗಿರುವ ಕೆ ಪಿ ನಂಜುಂಡಿ ಅವರ ನೇತ್ರತ್ವದಲ್ಲಿ ಈ ಸಮಾವೇಶ ನಡೆಸಲಾಗುವುದು ಎಂದು ಅವರು ಹೇಳಿದ್ರು. 2017 ಹಾಗೂ 2022ರಲ್ಲಿ ಎರಡು ಬಾರಿ ಬೆಂಗಳೂರಿನಲ್ಲಿ ಈ ಸಮಾವೇಶ ನಡೆಸಲಾಗಿತ್ತು. ಅದೇ ರೀತಿ ಉತ್ತರ ಕರ್ನಾಟಕ ಭಾಗದ ವಿಶ್ವಕರ್ಮ ಸಮಾಜ ಬಂಧುಗಳಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಈ ಬಾರಿ ವಿಜಯಪುರದಲ್ಲಿ ರಾಜ್ಯಮಟ್ಟದ ವಧು-ವರರ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಅಪೇಕ್ಷಿತ ವಧು-ವರರು ನೋಂದಣಿ ಮಾಡಿಕೊಳ್ಳಬಹುದಾಗಿದ್ದು, ಈ ಕಾರ್ಯಕ್ರಮ ಸಂಪೂರ್ಣವಾಗಿ ಉಚಿತವಾಗಿ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಬಾಳು ಗಿರಗಾವಕರ, ಸಂತೋಷ ವಿಶ್ವಕರ್ಮ, ವಿನಾಯಕ ವಿಜಾಪುರಕರ, ಈರಣ್ಣ ಪತ್ತಾರ, ಶ್ರೀಕಾಂತ ಕುಂದನಗಾರ, ಪ್ರದೀಪ ಪತ್ತಾರ, ಮೀನಾ ಕುಂದನಗಾರ, ಕೆ ಸುನಂದಾ, ರೇಖಾ ಪಂಡೀತ ಸೇರಿದಂತೆ ವಿಶ್ವಕರ್ಮ ಸಮಾಜದ ಮುಖಂಡರು ಉಪಸ್ಥಿತಿ ಇದ್ದರು.
ನೋಂದಣಿಗಾಗಿ ಪ್ರಮೋದ ಬಡಿಗೇರ: 9448035713 ಹಾಗೂ ಬಾಳಿ ಗಿರಗಾವಕರ: 9901740472 ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಬಹುದಾಗಿದೆ.