ರಾಜ್ಯದಲ್ಲಿ ಕಾಂಗ್ರೆಸ್​ ಆಡಳಿತ ಅಂತ್ಯವಾಗಲಿದೆ; ಬಸವರಾಜ ಬೊಮ್ಮಾಯಿ

29-RNR-03A
Published on

ರಾಣೆಬೆನ್ನೂರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅಂಬೇಡ್ಕರ್​ ಸಂವಿಧಾನ ಬೇಕಾ, ಇಂದಿರಾ ಗಾಂಧಿ ಸಂವಿಧಾನ ಬೇಕಾ ಎಂದು ಹೇಳಬೇಕು. ರಾಜ್ಯದಲ್ಲಿಯೂ ಅಘೋಷಿತ ತುರ್ತುಪರಿಸ್ಥಿತಿ ಜಾರಿಯಲ್ಲಿದೆ. ಇತಿಹಾಸದಲ್ಲಿ ಯಾವ ರೀತಿ ತುರ್ತು ಪರಿಸ್ಥಿತಿಯ ಕರಾಳವಾಗಿ ಅಂತ್ಯವಾಗಿತ್ತೋ ಅದೇ ರೀತಿ ರಾಜ್ಯ ಕಾಂಗ್ರೆಸ್​ ಆಡಳಿತವೂ ಅಂತ್ಯವಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಭವಿಷ್ಯ ನುಡಿದರು.

ನಗರದಲ್ಲಿ ಶನಿವಾರ ರಾತ್ರಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ರ್ಖಗೆಯವರು ಕಾಂಗ್ರೆಸ್​ ಸಂಸದ ಶಶಿ ತರೂರ ಅವರ ಬಗ್ಗೆ ಕೆಲವರಿಗೆ ದೇಶಕ್ಕಿಂತ ಬೇರೆ ವಿಷಯ ಮಹತ್ವ ಎಂದು ಹೇಳಿದ್ದಾರೆ. ನಿಮಗೆ ರಾಹುಲ್​ ಗಾಂಧಿ ದೇಶಕ್ಕಿಂತ ಮೊದಲು, ಇದು ಗುಲಾಮಗಿರಿ ಸಂಕೇತ.

ಸಿದ್ದರಾಮಯ್ಯ ಮಾತೆತ್ತಿದರೆ ಸಂವಿಧಾನ ಎನ್ನುತ್ತಾರೆ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಇಂದಿರಾ ಗಾಂಧಿ ವಿರುದ್ಧ ಹೋರಾಟ ಮಾಡಿದ್ದರು. ಕೇವಲ ಅಧಿಕಾರಕ್ಕಾಗಿ ತಮ್ಮ ಕುಚಿರ್ಗಾಗಿ ತಮ್ಮ ವೈಚಾರಿಕತೆಯನ್ನು ಸ್ವಾಭಿಮಾನ ಬಿಟ್ಟು ಆ ಕುಟುಂಬದ ರಕ್ಷಣೆಗೆ ನಿಂತಿದ್ದಾರೆ. ರಾಹುಲ್​ ಗಾಂಧಿ ಸಂವಿಧಾನ ಹಿಡಿದುಕೊಂಡು ತಿರುಗಾಡುತ್ತಿದ್ದಾರೆ. ಯಾವ ಸಂವಿಧಾನ ಕಗ್ಗೊಲೆ ಮಾಡಿದ್ದರೋ ಅವರು ಸಂವಿಧಾನದ ಬಗ್ಗೆ ಮಾತನಾಡುತ್ತಿದ್ದಾರೆ.

1973 ರಲ್ಲಿ ಕೇಶವಾನಂದ ಭಾತಿರ್ ಪ್ರಕರಣದಲ್ಲಿ 9 ನ್ಯಾಯಮೂತಿರ್ಗಳನ್ನೊಳಗೊಂಡ ಸಂವಿಧಾನಿಕ ಪೀಠ ಸಂವಿಧಾನದ ಮೂಲ ಸ್ವರೂಪಕ್ಕೆ ಯಾವುದೇ ಬದಲಾವಣೆ ತರಬಾರದು ಎಂದು ಆದೇಶ ಮಾಡಿದೆ. ಆ ಮೇಲೆ ಇಂದಿರಾಗಾಂಧಿ ಸಂವಿಧಾನ ತಿದ್ದು ಪಡಿ ಮೂಲಕ ಜ್ಯಾತ್ಯತಿತ ಮತ್ತು ಸಮಾಜವಾದಿ ಪದಗಳನ್ನು ಸೇರಿಸಿದ್ದಾರೆ. ತುಷ್ಠಿಕರಣ ರಾಜಕಾರಣ ಮಾಡುವ ಮೂಲಕ ಓಟ್​ ಬ್ಯಾಂಕ್​ ಆಗಿ ಪರಿವರ್ತನ ಮಾಡಿಕೊಳ್ಳುತ್ತಾರೆ. ನಮಗೆ ಅಂಬೇಡ್ಕರ್​ ಅವರು ಬರೆದಿರುವ ಸಂವಿಧಾನ ಇರಬೇಕು ಎಂದು ಆರ್​ಎಸ್​ಎಸ್​ ಸಹ ಸರಸಂಘಚಾಲಕ ದತ್ತಾತ್ರೆಯ ಹೊಸಬಾಳೆ ಹೇಳಿದ್ದಾರೆ. ಅದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಗ್ಗೆ ಪಧಾನಿ ನರೇಂದ್ರ ಮೋದಿಯವರ ನಿಲುವು ಏನು ಎಂದು ಕೇಳಿದ್ದಾರೆ. ಸಿದ್ದರಾಮಯ್ಯ ಅವರಿಗೆ ಅಂಬೇಡ್ಕರ್​ ಅವರ ಸಂವಿಧಾನ ಬೇಕಾ, ಇಂದಿರಾ ಗಾಂಧಿ ಸಂವಿಧಾನ ಬೇಕಾ ಎಂದು ಹೇಳಬೇಕು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net