

ಹಾವೇರಿ: ಬಿಜೆಪಿ ಅವರಿಗೆ ಹೋರಾಟ ಮಾಡೋದು ಬಿಟ್ಟರೆ ಏನು ಕೆಲಸ ಇದೆ ಹೇಳಿ.? ಒಂದು ಸಲನಾದರೂ ಅಭಿವೃದ್ಧಿ ಬಗ್ಗೆ ಮಾತಾಡ್ತಾರಾ. ಬಸ್ ದರ ಪಕ್ಕದ ಆಂಧ್ರದಲ್ಲಿ ನಮಗಿಂತಲೂ ಹೆಚ್ಚಿದೆ. ತಮಿಳುನಾಡಿನಲ್ಲೂ ನಮಗಿಂತ ಹೆಚ್ಚಿದೆ. ನಮ್ಮದೆ ಚೀಪೆಸ್ಟ್ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.
ನಗರದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಕ್ತಿ ಯೋಜನೆಯಲ್ಲಿ ಜನರನ್ನು ಓಡಾಡಿಸುತ್ತಿದ್ದೇವೆ ಅಂದರೆ ಅಟ್ಲೀಸ್ಟ್ ನೋ ಪ್ರಾಪಿಟ್ ನೋ ಲಾಸ್ನಲ್ಲಿ ಆದರೂ ಉಳಿಸಬೇಕು ಅನ್ನುವ ಉದ್ದೇಶವಿದೆ ಅಷ್ಟೆ ಎಂದರು.
ಹೆಣ್ಣು ಮಕ್ಕಳಿಗೆ, ಬಡವರಿಗೆ ಏನು ಕೊಡಬೇಕೋ ಅದನ್ನು ಮ್ಯಾಕ್ಸಿಮಮ್ ಕೊಟ್ಟೀದಿವಿ. ದುಡಿಯುವ ಗಂಡಮಕ್ಕಳಿಗೆ ಶೇ. 15ರಷ್ಟು ಭಾರ ಆಗಬಹುದು ನಾನು ಇಲ್ಲ ಅಂತ ಹೇಳಲ್ಲ.್ಲ ನಿತ್ಯವೂ ಓಡಾಡುತ್ತಿರುವವರು ಹೆಣ್ಣು ಮಕ್ಕಳೇ ಇದ್ದಾರೆ. ಗಂಡುಮಕ್ಕಳು ಓಡಾಡಲ್ಲ, ನೀವು ಉಲ್ಟಾ ಹೇಳ್ತೀದಿರಿ ಎಂದರು.
ಕಾಂಗ್ರೆಸ್ನಲ್ಲಿ ಪುನಃ ಅಧಿಕಾರ ಹಂಚಿಕೆ ವಿಚಾರದ ಬಗ್ಗೆ ಕೇಳಿದಾಗ ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಯಾರು ಸಿಎಂ ಇರಬೇಕು. ಡಿಸಿಎಂ ಇರಬೇಕು ಅದನ್ನು ವರಿಷ್ಟರು ತೀರ್ಮಾನ ಮಾಡಬೇಕು. ಈ ಬಗ್ಗೆ ಸಿಎಲ್ಪಿನಲ್ಲಿ ನಿರ್ಣಯ ಆಗುತ್ತೆ. ದಿನ ಅದರ ಬಗ್ಗೆ ಕೇಳಿದರೆ ಏನು ಹೇಳೋದು .? ಬಿಜೆಪಿಯವರು ಎರಡು ವರ್ಷಗಳಿಂದ ಇದನ್ನೇ ಹೇಳುತ್ತಿದ್ದಾರೆ. ನೀವೂ ಅದನ್ನೇ ಕೇಳ್ತೀದ್ದಿರಿ ಬಿಟ್ ಬಿಡಿ ಅದನ್ನ ಎಂದರು.