ಪಾರ್ಟ್‌ಟೈಮ್ ಜಾಬ್ ಹೆಸರಿನಲ್ಲಿ ಮಹಿಳೆಗೆ ಲಕ್ಷಾಂತರ ರೂ. ವಂಚನೆ

cybe crime
Published on

ಬೆಂಗಳೂರು: ಪಾರ್ಟ್‌ಟೈಮ್ ಜಾಬ್ ಕೊಡುವುದಾಳಿ ಹೇಳಿ ಗೃಹಿಣಿಯೊಬ್ಬರನ್ನು ನಂಬಿಸಿ ಅವರ ಖಾತೆಯಿಂದ ಲಕ್ಷಾಂತರ ರೂ. ಲಪಟಾಯಿಸಿರುವ ಘಟನೆ ನಡೆದಿದೆ.
ಈ ಸಂಬಂಧ ೩೩ ವರ್ಷದ ಗೃಹಿಣಿಯೊಬ್ಬರು ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಲ್ಸನ್ ಗಾರ್ಡ್‌ನ ನಿವಾಸಿಯಾದ ಮಹಿಳೆಯಗೆ ಅ.೨೫ ರಂದು ವಾಟ್ಸ್ ಆ್ಯಪ್ ಮೂಲಕ ಅಪರಿಚಿತ ವ್ಯಕ್ತಿಯೊಬ್ಬ ಸಂಪರ್ಕಿಸಿ ಪಾರ್ಟ್‌ಟೈಮ್ ಜಾಬ್ ಕೊಡುವುದಾಗಿ ಹೇಳಿ, ತಾವು ಕಳುಹಿಸಿರುವ ವಿಡಿಯೋಗಳನ್ನು ಲೈಕ್,ಶೇರ್, ರಿವ್ಯೆವ್ ಕೊಟ್ಟರೆ ಹಣವನ್ನು ಕೊಡುವುದಾಗಿ ತಿಳಿಸಿದ್ದಾನೆ. ಇದನ್ನು ನಂಬಿದ ಮಹಿಳೆ ಅಪರಿಚಿರ ವ್ಯಕ್ತಿ ಕಳುಹಿಸಿದ ವಿಡಿಯೋಗಳನ್ನು ಲೈಕ್,ಶೇರ್ ಮಾಡಿದ್ದಾಗ ಮಹಿಳೆಯ ಖಾತೆಗೆ ಒಂದಿಷ್ಟು ಹಣ ಜಮೆ ಆಗುತ್ತದೆ. ನಂತರ ಟೆಲಿಗ್ರಾಮ್ ಗ್ರೂಪ್‌ಗೆ ಸೇರಿಸಿಕೊಳ್ಳಲು ತಿಳಿಸಿ ಹಣ ಹೂಡಿಕೆ ಮಾಡಿದರೆ ನಿಮ್ಮ ಹಣಕ್ಕೆ ಲಾಭ ನೀಡುತ್ತೇವೆ ಎಂದು ನಂಬಿಸಿ ಮಹಿಳೆಯ ಬೇರೆ ಬೇರೆ ಮೂರು ಬ್ಯಾಂಕ್ ಖಾತೆಯಿಂದ ಒಟ್ಟು ೫.೭೦ ಲಕ್ಷ ರೂ. ಹಣವನ್ನು ಯುಪಿಐ ಮುಖಾಂತರ ಹಣವನ್ನು ವರ್ಗಾಯಿಸಿಕೊಂಡು ಸಂರ್ಪಕಕ್ಕೆ ಸಿಗದೆ ವಂಚಿಸಿದ್ದಾನೆ. ತಾನು ಮೋಸ ಹೋಗಿರುವುದಾಗಿ ತಿಳಿದ ಮಹಿಳೆ ಈ ಸಂಬಂಧ ಕೇಂದ್ರ ವಿಭಾಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net