ಮರ್ಯಾದಾ ಹತ್ಯೆ ಪ್ರಕರಣ; ಅನ್ಯಜಾತಿ ಯುವಕನ ಜತೆ ಫೋನಿನಲ್ಲಿ ಮಾತನಾಡಿದ್ದಕ್ಕೆ ಅಪ್ರಾಪ್ತ ವಯಸ್ಕಳ ಕೊಲೆ

honour killing
Published on

ಲಖನೌ: ಶಂಕಿತ ಮರ್ಯಾದಾ ಹತ್ಯೆ ಪ್ರಕರಣ ಒಂದರಲ್ಲಿ ಅನ್ಯ ಜಾತಿಯ ಯುವಕನೊಂದಿಗೆ ಫೋನಿನಲ್ಲಿ ಮಾತನಾಡುತ್ತಿದ್ದಳು ಎಂಬ ಕಾರಣಕ್ಕೆ ಅಪ್ರಾಪ್ತ ವಯಸ್ಕಳನ್ನು ಆಕೆಯ ಕುಟುಂಬಸ್ಥರು ಹೊಡೆದು ಕೊಲೆ ಮಾಡಿರುವ ಘಟನೆ ಉತ್ತರಪ್ರದೇಶದ ಘಾಜಿಯಾಬಾದ್​ ಜಿಲ್ಲೆಯ ಕೌಶಂಬಿ ಎಂಬ ಪ್ರದೇಶದಲ್ಲಿ ನಡೆದಿದೆ.

ಪ್ರಕರಣ ಸಂಬಂಧ ಪೊಲೀಸರು ಅಪ್ರಾಪ್ತ ವಯಸ್ಕಳ ತಂದೆ ಹಾಗೂ ಆಕೆಯ ಇಬ್ಬರು ಸಹೋದರರನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣದ ಹಿನ್ನಲೆ

ಸಂತ್ರಸ್ತೆ 11ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಕಾಲೇಜು ಮುಗಿಸಿಕೊಂಡು ಬಂದ ನಂತರ ಹೆಚ್ಚಿನ ಸಮಯವನ್ನು ಪೋನಿನಲ್ಲಿ ಮಾತನಾಡುತ್ತ ಕಾಲ ಕಳೆಯುತ್ತಿದ್ದಳು. ಇದನ್ನು ಗಮನಿಸಿದ ಕುಟುಂಬದ ಸದಸ್ಯರು ಆಕೆ ಅನ್ಯ ಜಾತಿ ಯುವಕನನ್ನು ಪ್ರೀತಿಸುತ್ತಿದ್ದಾಳೆ ಎಂದು ಶಂಕಿಸಿದ್ದಾರೆ.

honour killing

ಪೋನಿನಲ್ಲಿ ಮಾತನಾಡದಂತೆ ಕುಟುಂಬಸ್ಥರು ಆಕೆಗೆ ನಿರ್ಭಂಧ ಹೇರಿದ್ದು, ಇದನ್ನು ಲೆಕ್ಕಿಸದೆ ಆಕೆ ಮೊಬೈಲ್​ ಜೊತೆ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದಳು. ಇದರಿಂದ ಕುಪಿತಗೊಂಡ ಆಕೆಯ ತಂದೆ ಮತ್ತು ಇಬ್ಬರು ಸಹೋದರರು ಪೋನಿನಲ್ಲಿ ಮಾತನಾಡುತ್ತಿರುವುದನ್ನು ಗಮನಿಸಿದಾಗ ಆಕೆಯನ್ನು ಹೊಡೆದು ಕೊಲೆ ಮಾಡಿದ್ದಾರೆ.

ಸಂತ್ರಸ್ತೆಯ ಚೀರಾಟ ಕೇಳಿದ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಆರೋಪಿಗಳು ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ಘಾಜಿಯಾಬಾದ್​ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net