ಚಿನ್ನದ ಹುಡುಕಾಟದಲ್ಲಿ ವಜ್ರ ಕಳೆದುಕೊಂಡವರೆಷ್ಟೋ?; ಇಲ್ಲಿವೆ ಆ ಚಿನ್ನ-ವಜ್ರಗಳು...

Gold
Published on

ಬೆಂಗಳೂರು: ಬಹಳಷ್ಟು ಜನರು ಚಿನ್ನದ ಹುಡುಕಾಟದಲ್ಲಿ ವಜ್ರಗಳನ್ನು ಕಳೆದುಕೊಂಡಿದ್ದು ಕಳೆದ ಒಂದೆರಡು ದಿನಗಳಿಂದ ಬೆಳಕಿಗೆ ಬರುತ್ತಿದೆ. ಆ ಬಗ್ಗೆ ಹಲವರು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿಕೊಳ್ಳುತ್ತಿದ್ದು, ಅದೇ ಒಂದು ಟ್ರೆಂಡ್‌ ಕೂಡ ಆಗಿದೆ.

ಅಂದಹಾಗೆ ಇದು ಸೋಷಿಯಲ್‌ ಮೀಡಿಯಾದಲ್ಲಿ ಒಂದೆರಡು ದಿನಗಳಿಂದ ನಡೆಯುತ್ತಿರುವ ಟ್ರೆಂಡ್.‌ ಈ ಟ್ರೆಂಡ್‌ ಹಲವರನ್ನು ಹಳೆಯ ಕಾಲವನ್ನು, ಆ ದಿನಗಳ ಸುಂದರ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡಿದೆ. ಮತ್ತೊಂದೆಡೆ ಈ ಟ್ರೆಂಡ್‌ ಓಲ್ಡ್‌ ಈಸ್‌ ಗೋಲ್ಡ್‌ ಎಂಬುದನ್ನೇ ಸುಳ್ಳಾಗಿಸುವಂತೆ ಮಾಡಿದೆ. ಏಕೆಂದರೆ 'ಇನ್‌ ಸರ್ಚ್‌ ಆಫ್‌ ಗೋಲ್ಡ್‌ ವೀ ಲಾಸ್ಟ್‌ ಡೈಮಂಡ್‌' ಎಂಬ ಸ್ಲೋಗನ್‌/ಹ್ಯಾಷ್‌ಟ್ಯಾಗ್‌ನೊಂದಿಗೆ ಬಹಳಷ್ಟು ಜನ ಹಳೆಯ ಸುಂದರ ದಿನಗಳನ್ನು, ವಸ್ತು, ವಿಷಯಗಳನ್ನು ಹಂಚಿಕೊಂಡಿದ್ದಾರೆ. ಆ ಮೂಲಕ ಬದುಕು ಎಷ್ಟು ಬದಲಾಗಿದೆ, ಈ ಬದಲಾವಣೆಯ ಹಾದಿಯಲ್ಲಿ ನಾವೇನು ಮಿಸ್‌ ಮಾಡಿಕೊಂಡಿದ್ದೇವೆ ಎಂಬ ಗಂಭೀರ ವಿಷಯಗಳ ಜತೆಗೆ ಕೆಲವೊಂದು ತಮಾಷೆಯ ಸಮಾಚಾರಗಳನ್ನು ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net