ರೋಣದಲ್ಲಿ ರಥದ ಗಾಲಿಗೆ ಸಿಲುಕಿ ಭಕ್ತರಿಬ್ಬರ ದುರ್ಮಮರಣ

18 RON JATRE
Published on

ಗದಗ: ರಥ ಎಳೆಯುವ ಸಂದರ್ಭದಲ್ಲಿ ನೂಕುನುಗ್ಗಲು ಉಂಟಾಗಿ ರಥದ ಗಾಲಿಗೆ ಸಿಲುಕಿ ಭಕ್ತರಿಬ್ಬರು ಸಾವನ್ನಪ್ಪಿದ ಘಟನೆ ಜಿಲ್ಲೆಯ ರೋಣ ಪಟ್ಟಣದಲ್ಲಿ ಶನಿವಾರ ಸಂಜೆ ಸಂಭವಿಸಿದೆ.
ಮೃತ ಭಕ್ತರು ರೋಣ ಮೂಲದ ನಿವಾಸಿಗಳು. ಒಬ್ಬರು ಮಲ್ಲಪ್ಪ ಲಿಂಗನಗೌಡ್ರ (55), ಮತ್ತೊಬ್ಬ ಭಕ್ತನ ಹೆಸರು ತಿಳಿದುಬಂದಿಲ್ಲ.
ಮುಖದ ಮೇಲೆ ರಥದ ಗಾಲಿ ಹರಿದು ಗುರುತು ಸಿಗದಂತಾಗಿದೆ. ಪಟ್ಟಣದ ವೀರಭದ್ರೇಶ್ವರ ರಥೋತ್ಸವ ವೇಳೆ ಈ ಅವಘಡ ನಡೆದಿದೆ. ಅವಘಡದ ನಂತರ ಸೇರಿದ್ದ ಅಪಾರ ಭಕ್ತ ಸಮೂಹವನ್ನು ಚದುರಿಸಲು ಪೊಲೀಸರು ಹರಸಾಹಸಪಟ್ಟರು. ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net