ತಪ್ಪು ಮಾಡಿದ ಶಿಕ್ಷಕರಿಗೆ 'ಬೆಡ್​ ಪರ್ಫಾಮೆನ್ಸ್ ನೀಡಿ' ಎಂದು​​ ಶಿಕ್ಷೆ ವಿಧಿಸಿದ ಸರ್ಕಾರ; ವಿಚಿತ್ರ ಎನಿಸಿದರೂ ಇದು ನಿಜ

TEACHER
Published on

ಪಟ್ನಾ: ವಿದ್ಯಾರ್ಥಿಗಳಿಗೆ ಶತಾಯಗತಾಯ ಕಲಿಕೆಯತ್ತ ಆಸಕ್ತಿ ತಾಳುವಂತೆ ಮಾಡುವ ವ್ಯಕ್ತಿ ಇಡೀ ವಿಶ್ವದಲ್ಲಿ ಯಾರಾದರೂ ಇದ್ದರೆ ಎಂದು ಹೇಳಿದರೆ ತಪ್ಪಾಗಲಾರದು. ಆದರೆ, ಶಿಕ್ಷಕರು ತಪ್ಪು ಮಾಡಿದರೆ ಯಾರು ಹೊಣೆ ಮತ್ತು ಅವರಿಗೆ ಶಿಕ್ಷೆ ನೀಡುವುದು ಯಾರು ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ, ಬಿಹಾರದಲ್ಲಿ ತಪ್ಪು ಮಾಡಿದ ಶಿಕ್ಷಕರಿಗೆ ಸರ್ಕಾರ ಬೆಡ್​ ಪನಿಷ್​ಮೆಂಟ್​ ನೀಡಿರುವ ಘಟನೆ ಬೆಳಕಿಗೆ ಬಂದಿದೆ.

ವಿಲಕ್ಷಣ ಅನ್ನಿಸಿದರೂ ಇದು ನಿಜ. ಬಿಹಾರದ ಜಮುಯಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಸರ್ಕಾರದ ನಡೆಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಕಾರ್ಯಕ್ಷಮತೆ ತೋರದ ಶಿಕ್ಷಕರ ಸಂಬಳವನ್ನು ತಡೆ ಹಿಡಿಯುವುದು ಅಥವಾ ಕೆಲಸದಿಂದ ತೆಗೆದುಹಾಕುವುದನ್ನು ನೋಡಿದ್ದೇವೆ ಇದ್ಯಾವುದು ಬೆಡ್​ ಪನಿಷ್​ಮೆಂಟ್​ ಎಂದು ನೆಟ್ಟಿಗರು ಕಮೆಂಟ್​ ಮಾಡುತ್ತಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು, ಕಳೆದ ವಾರ ಜಮುಯಿ ಜಿಲ್ಲೆಯ ವಿವಿಧ ಶಾಲೆಗಳಿಗೆ ಅಧಿಕಾರಿಗಳು ದಿಢೀರ್​ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು. ಈ ಸಂದರ್ಭದಲ್ಲಿ ಹಲವು ಶಿಕ್ಷಕರು ಗೈರು ಹಾಜರಾಗಿರುವುದು ಗಮನಕ್ಕೆ ಬಂದಿದೆ. ಕೆಲವು ಶಿಕ್ಷಕರ ಕಾರ್ಯನಿರ್ವಹಣೆಯೂ ತೃಪ್ತಿಕರವಾಗಿರಲಿಲ್ಲ ಎಂಬುದು ದಾಳಿಯ ವೇಳೆ ಕಂಡು ಬಂದಿತ್ತು.

ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥ ಶಿಕ್ಷಕರ ವಿರುದ್ಧ ಕಠಿಣ ಕ್ರಮ ಜರುಗಿಸುವ ಸಲುವಾಗಿ ಅವರ ಸಂಬಳವನ್ನು ತಡೆ ಹಿಡಿದಿರುವ ವಿಚಾರವಾಗಿ ಆದೇಶವನ್ನು ಹೊರಡಿಸಲಾಗಿದೆ. ಆದರೆ, ಟೈಪ್​ ಮಾಡುವಾಗ ಅಧಿಕಾರಿಗಳು ತಪ್ಪು ಮಾಡಿದ ಕಾರಣ ಬ್ಯಾಡ್​ ಬದಲಾಗಿ ಬೆಡ್​ ಪರ್ಫಾಮೆನ್ಸ್​​ ಎಂದು ನಮೂದಿಸಲಾಗಿದೆ. ಇದು ತಡವಾಗಿ ನಮ್ಮ ಗಮನಕ್ಕೆ ಬಂದಿದ್ದು, ತಪ್ಪನ್ನು ಸರಿಪಡಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟನೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net