ವ್ಯಾನ್ ಡಿಕ್ಕಿ ಹೊಡೆದು ಬಾಲಕ ಮೃತಪಟ್ಟ, ಸಿಟ್ಟಿಗೆದ್ದ ಸ್ಥಳೀಯರು ಚಾಲಕನನ್ನೇ ಕೊಂದರು....

crime
Published on

ಲಖನೌ: ಬೈಸಿಕಲ್ ಮೇಲೆ ಹೋಗುತ್ತಿದ್ದ ಇಬ್ಬರು ಬಾಲಕರಿಗೆ ವ್ಯಾನ್ ಡಿಕ್ಕಿ ಹೊಡೆದು ಒಬ್ಬ ಬಾಲಕ ಸಾವಿಗೀಡಾಗಿದ್ದಕ್ಕೆ ಕೋಪಗೊಂಡ ಸ್ಥಳೀಯರು ವ್ಯಾನ್ ಚಾಲಕನ ಮೇಲೆ ಹಲ್ಲೆ ನಡೆಸಿ ಆತ ಕೊಲೆಗೈದ ಘಟನೆ ಶನಿವಾರ ನಡೆದಿದೆ.
ಉತ್ತರ ಪ್ರದೇಶದ ಫಿಲಿಬಿತ್ ಜಿಲ್ಲೆಯ ಮಹದ್​ಖಾಸ್ ಗ್ರಾಮದ, ಡುರಿಯಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಶನಿವಾರ ಸಂಜೆ 7 ಗಂಟೆಗೆ ನಡೆದಿದೆ.


ಮಾಹಿತಿ ತಲುಪಿದ ತಕ್ಷಣ ಪೊಲೀಸ್ ವರಿಷ್ಠಾಧಿಕಾರಿ ಜೈ ಪ್ರಕಾಶ್ ಸೇರಿ ಹಿರಿಯ ಪೊಲೀಸ್ ಅಧಿಕಾರಿಗಳ ತಂಡ ಸ್ಥಳಕ್ಕೆ ಧಾವಿಸಿದೆ.
ಮೃತ ಚಾಲಕನನ್ನು ಶಿವನಗರ ಗ್ರಾಮದ ನಿವಾಸಿ ರಾಮ್ ಸಿಂಗ್ ಮತ್ತು ಮೃತ ಬಾಲಕನನ್ನು ಇಟೌರಿಯಾ ಗ್ರಾಮದ ಪ್ರಶಾಂತ್ ವರ್ಮಾ ಎಂದು ಗುರುತಿಸಲಾಗಿದೆ. ಗಾಯಗೊಂಡ ಆತನ ಸ್ನೇಹಿತ ದೀಪಾಂಶು ಪ್ರಸ್ತುತ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಮೃತ ಬಾಲಕನ ಚಿಕ್ಕಪ್ಪ ರಾಮಔತಾರ್ ವರ್ಮಾ ನೀಡಿದ ದೂರಿನಲ್ಲಿ, ಪ್ರಶಾಂತ್ ಮತ್ತು ಆತನ ಸ್ನೇಹಿತ ದೀಪಾಂಶು ಇಬ್ಬರೂ ಸೇರಿ ಶನಿವಾರ ಸಂಜೆ ಬೈಸಿಕಲ್‌ನಲ್ಲಿ ಪಕ್ಕದ ಮಹಾದ್‌ಖಾಸ್ ಗ್ರಾಮಕ್ಕೆ ಹೊರಟಿದ್ದಾಗ ವ್ಯಾನ್ ಡಿಕ್ಕಿ ಹೊಡೆದಿತ್ತು ಎಂದು ತಿಳಿಸಿದ್ದಾರೆ.


“ಅಪಘಾತದ ನಂತರ, ಸ್ಥಳೀಯರು ಚಾಲಕನ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿ ಟಾಟಾ ಮ್ಯಾಜಿಕ್ ವಾಹನವನ್ನು ಧ್ವಂಸಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡ ಚಾಲಕ ಜಿಲ್ಲಾ ಆಸ್ಪತ್ರೆಗೆ ಸಾಗಿಸುವಾಗ ತಪಟ್ಟಿದ್ದಾನೆ. ಹಲ್ಲೆಕೋರರ ಶೋಧ ಕಾರ್ಯ ನಡೆದಿದ್ದು, ಶೀಘ್ರವೇ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಸ್‌ಪಿ ತಿಳಿಸಿರುವುದಾಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಎರಡು ಎಫ್‌ಐಆರ್ ದಾಖಲಿಸಲಾಗಿದೆ. ಮೃತ ಬಾಲಕನ ಚಿಕ್ಕಪ್ಪ ನೀಡಿದ ದೂರಿನ ಆಧಾರದ ಮೇಲೆ ಮೃತ ಚಾಲಕನ ವಿರುದ್ಧ ಮೊದಲ ಎಫ್‌ಐಆರ್ ದಾಖಲಿಸಲಾಗಿದೆ. ಮೃತ ಚಾಲಕನ ತಂದೆ ನೀಡಿದ ದೂರಿನ ಮೇರೆಗೆ ಪೊಲೀಸರು ಸ್ಥಳೀಯ ವ್ಯಕ್ತಿಗಳ ವಿರುದ್ಧ ಎರಡನೇ ಎಫ್ಐಆರ್ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net