ಕೇಂದ್ರ ಬಜೆಟ್​ 2020: ವಿದೇಶಿ ಪಾದರಕ್ಷೆ, ಪೀಠೋಪಕರಣಗಳ ಮೇಲಿನ ಸುಂಕ ಹೆಚ್ಚಳ; ಸಚಿವೆ ನಿರ್ಮಲಾ ಸೀತಾರಾಮನ್​ ಮಾಹಿತಿ

FURNITURE
Published on

ನವದೆಹಲಿ: ವಿದೇಶಿ ಪಾದರಕ್ಷೆ ಮತ್ತು ಪೀಠೋಪಕರಣಗಳ ಮೇಲಿನ ಸುಂಕ ಹೆಚ್ಚಳಗೊಳಿಸಲಾಗಿದೆ ಎಂದು ಬಜೆಟ್​ ಭಾಷಣದಲ್ಲಿ ವಿತ್ತ ಸಚಿವರು ತಿಳಿಸಿದ್ದಾರೆ.

ಇದರೊಂದಿಗೆ ವಿದೇಶಿ ವೈದ್ಯಕೀಯ ಉಪಕರಣಗಳ ಮೇಲಿನ ಸುಂಕವನ್ನೂ ಹೆಚ್ಚಿಸಲಾಗಿದೆ. ಇದರಿಂದ ಸ್ಥಳೀಯವಾಗಿ ಉತ್ಪಾದನೆ ಮಾಡಲು ಸಹಕಾರಿಯಾಗಲಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್​ ಅಭಿಪ್ರಾಯ ಪಟ್ಟರು.

ವೈದ್ಯಕೀಯ ಉಪಕರಣಗಳ ಉತ್ಪಾದನೆ ಮಾಡುತ್ತಿರುವ ಉದ್ಯಮಗಳಿಗೆ ಹೆಚ್ಚು ಒತ್ತು ಕೊಡುವ ಅವಶ್ಯವಿದೆ. ಆಯುಷ್ಮಾನ್​ ಭಾರತ ಯೋಜನೆಯಿಂದ ವೈದ್ಯಕೀಯ ಉಪಕರಣಗಳ ಉತ್ಪಾದನೆ ಹೆಚ್ಚಳಕ್ಕೆ ಸಹಕಾರಿಯಾಗಿದೆ ಎಂದರು.

ಹೀಗೆ ಹೆಚ್ಚು ಮಾಡಿರುವ ಸೆಸ್‌ನಿಂದ ಬರುವ ಆದಾಯವನ್ನು ಜಿಲ್ಲೆಗಳಲ್ಲಿ ಆರೋಗ್ಯ ಸೇವೆ ನೀಡಲು, ಮತ್ತು ಅದಕ್ಕಾಗಿ ಮೂಲಸೌಕರ್ಯಗಳನ್ನು ಒದಗಿಸಲು ಬಳಸಲಾಗುತ್ತದೆ ಎಂದು ಮಾಹಿತಿ ನೀಡಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net