

| ಪಂಕಜ ಕೆ.ಎಂ. ಬೆಂಗಳೂರುಭಾರತದಲ್ಲಿ ಬೃಹತ್ ಅಭಿಯಾನ: ಕರೊನಾ ವೈರಸ್ನ ಮೊದಲ ಸೋಂಕು ಪ್ರಕರಣ 2020ರ ಜ. 30 ರಂದು ವರದಿಯಾಗಿತ್ತು. ಕರ್ನಾಟಕದಲ್ಲಿ ಮಾ. 8ರಂದು ಮೊದಲ ಪ್ರಕರಣ ದೃಢಪಟ್ಟಿತ್ತು. ಅದಾದ ಹತ್ತು ತಿಂಗಳಲ್ಲಿ ಭಾರತ ಸ್ವದೇಶಿ ಕರೊನಾ ಲಸಿಕೆ ಕಂಡುಕೊಳ್ಳುವಲ್ಲಿ ಯಶಸ್ವಿಯಾಯಿತು. ಹಲವು ಪ್ರಾಯೋಗಿಕ ಪರೀಕ್ಷೆ ಮುಗಿದ ನಂತರ ದೇಶದಲ್ಲಿ 2021 ಜ. 16ರಂದು ಕೋವಿಡ್ ಲಸಿಕೆ ಅಭಿಯಾನ ಆರಂಭಿಸಲಾಯಿತು.
ಭಾರತದಲ್ಲಿ ಜಗತ್ತಿನ ಅತಿ ದೊಡ್ಡ ಕರೊನಾ ಲಸಿಕೆ ಅಭಿಯಾನಕ್ಕೆ ಜನವರಿ 16ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಈ ವರೆಗೆ ಸುಮಾರು 2.99 ಕೋಟಿ ಜನರಿಗೆ ಲಸಿಕೆ ಹಾಕಲಾಗಿದೆ. 54,60,000 ಮಂದಿ ಎರಡೂ ಡೋಸ್ ಲಸಿಕೆ ಪಡೆದಿದ್ದಾರೆ. ಭಾರತದಲ್ಲಿ ಕೋವಿಡ್-19 ಚುಚ್ಚುಮದ್ದು ಪಡೆದವರಲ್ಲಿ ಆರೋಗ್ಯ ಸಿಬ್ಬಂದಿ, ಮುಂಚೂಣಿ ಕಾರ್ಯಕರ್ತರು ಮೊದಲಾದವರಿದ್ದಾರೆ.
ಕರ್ನಾಟಕದಲ್ಲಿ ಲಸಿಕೆ ನೀಡಿಕೆ: ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಹಾಗೂ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡಲಾಯಿತು. 2ನೇ ಹಂತದಲ್ಲಿ 60 ವರ್ಷ ಮೇಲ್ಪಟ್ಟ ಹಾಗೂ 45-60 ವರ್ಷದ ವರೆಗಿನ ನಾನಾ ಆರೋಗ್ಯ ಸಮಸ್ಯೆ ಹೊಂದಿರುವವರಿಗೆ ಲಸಿಕೆ ನೀಡಲಾಗುತ್ತಿದೆ. ರಾಜ್ಯದಲ್ಲಿ ಈವರೆಗೆ 14,96,755 ಮಂದಿ ಲಸಿಕೆ ಪಡೆದುಕೊಂಡಿದ್ದಾರೆ. ಈ ಪೈಕಿ 7.79 ಲಕ್ಷ ಆರೋಗ್ಯ ಕಾರ್ಯಕರ್ತರು, 1.89 ಲಕ್ಷ ಮುಂಚೂಣಿ ಕಾರ್ಯಕರ್ತರು, 4.29 ಲಕ್ಷ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ 87,985 ಮಂದಿ 45-60 ವರ್ಷ ವಯೋಮಾನದ ನಾನಾ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಲಸಿಕೆ ಪಡೆದುಕೊಂಡಿದ್ದಾರೆ.
ಲಸಿಕಾ ದಿನ ಯಾಕೆ?: ಎಳೆಯ ವಯಸ್ಸಿನಲ್ಲೇ ಲಸಿಕೆ ಹಾಕಿಸುವ ಮೂಲಕ ಪೋಲಿಯೋ, ದಡಾರ, ಸಿಡುಬು, ಟೆಟೆನೆಸ್, ಅಮ್ಮ (ಚಿಕನ್ಪಾಕ್ಸ್), ಮೀಸಲ್ಸ್, ರುಬೆಲ್ಲಾ ಸೇರಿದಂತೆ ಹಲವು ಕಾಯಿಲೆಗಳು ಬಾರದಂತೆ ತಡೆಯಬಹುದು ಇಲ್ಲವೆ ಆ ಕಾಯಿಲೆಯ ತೀವ್ರತೆಯನ್ನು ಕಡಿಮೆ ಮಾಡಬಹುದು. ನವಜಾತ ಶಿಶುಗಳಿಂದ ಆರಂಭವಾಗುವ ಈ ಲಸಿಕೆ ಹಾಕಿಸುವ ಪ್ರಕ್ರಿಯೆ 16 ವರ್ಷದ ವರೆಗೂ ಮುಂದುವರಿಯುತ್ತದೆ. ಭಾರತದಲ್ಲಿ 1995ರ ಮಾರ್ಚ್ 16ರಂದು ಮೊದಲ ಬಾರಿಗೆ ಓರಲ್ ಪೋಲಿಯೋ ಲಸಿಕೆ ನೀಡಲಾಯಿತು. ಅಂದಿನಿಂದ ಈ ದಿನವನ್ನು ರಾಷ್ಟ್ರೀಯ ಲಸಿಕಾ ದಿನವನ್ನಾಗಿ ಆಚರಿಸುತ್ತಾ ಬಂದಿದೆ. ಇದನ್ನು ರಾಷ್ಟ್ರೀಯ ರೋಗನಿರೋಧಕ ದಿನವನ್ನಾಗಿ ಆಚರಿಸಲಾಗುತ್ತದೆ.
ತಯಾರಿಕಾ ಕಂಪನಿಗಳು: ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಅಂಗಸಂಸ್ಥೆ ವ್ಯಾಕ್ಸಿಟೆಕ್ ಅಭಿವೃದ್ಧಿಪಡಿಸಿರುವ ಅಸ್ಟ್ರಾಜೆನೆಕಾ (ಕೋವಿಶೀಲ್ಡ್)ಲಸಿಕೆಗೆ ಭಾರತದ ಔಷಧ ನಿಯಂತ್ರಣ ಪ್ರಾಧಿಕಾರದಿಂದ ಮಾನ್ಯತೆ ದೊರೆತಿದ್ದು, ಪುಣೆಯ ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಕೋವಿಶೀಲ್ಡ್ ಲಸಿಕೆಯನ್ನು ಉತ್ಪಾದಿಸಿ ಪೂರೈಸುತ್ತಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮತ್ತು ರಾಷ್ಟ್ರೀಯ ವೈರಾಣು ಸಂಸ್ಥೆ ಸಹಯೋಗದಲ್ಲಿ ಪುಣೆಯ ಭಾರತ್ ಬಯೋಟೆಕ್ ಕಂಪನಿ ಅಭಿವೃದ್ಧಿಪಡಿಸಿದ ಮೊದಲ ದೇಶಿಯ ಲಸಿಕೆ ಕೊವ್ಯಾಕ್ಸಿನ್ ತುರ್ತು ಅಥವಾ ಷರತ್ತುಬದ್ಧ ಬಳಕೆಗಾಗಿ ಭಾರತದ ಡ್ರಗ್ ಕಂಟ್ರೋಲರ್ ಜನರಲ್ನಿಂದ ಅನುಮೋದನೆ ಪಡೆದುಕೊಂಡಿದೆ. ಮೂರು ಹಂತಗಳಲ್ಲಿ (25,800 ಜನರ ಮೇಲೆ) ಇದರ ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿದ್ದು, ಶೇ. 81ರಷ್ಟು ಪರಿಣಾಮಕಾರಿ ಫಲಿತಾಂಶ ನೀಡಿದೆ.
ವ್ಯಾಕ್ಸಿನ್ ಪಡೆಯುವುದು ಹೇಗೆ?: ಕೋವಿಡ್ ಲಸಿಕೆ ಪಡೆಯಲು ಅರ್ಹ ಫಲಾನುಭವಿಗಳು ಮೊದಲು ಕೋವ್ಯಾಕ್ಸಿನ್ ಪೋರ್ಟಲ್ ಡಿಡಿಡಿ.ಟಡಿಜ್ಞಿ್ಝಜಟಡ.ಜ್ಞಿ ಗೆ ಲಾಗಿನ್ ಆಗಬೇಕು. ನಂತರ ಸ್ಥಳ ಮತ್ತು ಮೊಬೈಲ್ ಸಂಖ್ಯೆಗೆ ಬರುವ ಓಟಿಪಿ ಭರ್ತಿ ಮಾಡಬೇಕು. ಬಳಿಕ ಹೆಸರು, ವಯಸ್ಸು, ಲಿಂಗ ಮತ್ತು ಗುರುತಿನ ಚೀಟಿ ದಾಖಲೆಯನ್ನು ಅಪ್ಲೋಡ್ ಮಾಡಬೇಕು. 45 ವರ್ಷದ ಮೇಲ್ಪಟ್ಟವರು ಅನಾರೋಗ್ಯಗಳಿದ್ದರೆ, ಆ ಬಗ್ಗೆ ವೈದ್ಯರ ದೃಢೀಕರಣ ಪತ್ರ ಅಪ್ಲೋಡ್ ಮಾಡಿ, ಕೇಂದ್ರ ಮತ್ತು ದಿನಾಂಕಗಳನ್ನು ಆಯ್ಕೆ ಮಾಡಬೇಕು. ಲಸಿಕೆ ಪಡೆಯಲು 4 ಅವಕಾಶ (ಅಪಾಯಿಂಟ್ವೆುಂಟ್) ನೀಡಲಾಗುತ್ತದೆ. ತಂತ್ರಜ್ಞಾನದ ಅರಿವಿನ ಕೊರತೆ ಇದ್ದವರು ನೇರವಾಗಿ ಹತ್ತಿರದ ಲಸಿಕಾ ಕೇಂದ್ರದಲ್ಲಿ ನೋಂದಣಿ ಮಾಡಿಸಬಹುದು. ಹೆಚ್ಚಿನ ವಿವರಗಳಿಗೆ 104ಗೆ ಕರೆ ಮಾಡಬಹುದು.