ಐಎಂಎ ಬಹುಕೋಟಿ ಹಗರಣ, ಮನ್ಸೂರ್​ಗೆ ಮತ್ತೆ ಜೈಲೇ ಗತಿ

IMA
Published on

ಬೆಂಗಳೂರು: ಐ ಮಾನಿಟರಿ ಅಡ್ವಸರಿ (ಐಎಂಎ) ಬಹುಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮೊಹಮದ್​ ಮನ್ಸೂರ್​ ಖಾನ್​ಗೆ ಸದ್ಯ ಜೈಲೇ ಗತಿ!

ಒಂದು ವರ್ಷದಿಂದ ಜೈಲಿನಲ್ಲಿರುವ ಮನ್ಸೂರ್​ ಖಾನ್​ ಜಾಮೀನಿಗಾಗಿ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ. ಅನಾರೋಗ್ಯದ ನೆಪವೊಡ್ಡಿ ಜಾಮೀನು ನೀಡುವಂತೆ ಅರ್ಜಿಯಲ್ಲಿ ಕೋರಿಕೊಂಡಿದ್ದ. ಕೆಲ ದಿನಗಳಿಂದ ಅರ್ಜಿ ವಿಚಾರಣೆ ನಡೆಸುತ್ತಿರುವ ಸಿಬಿಐ ವಿಶೇಷ ನ್ಯಾಯಾಲಯವು ಮಂಗಳವಾರ (ಆ.18)ಕ್ಕೆ ತೀರ್ಪು ಕಾಯ್ದಿರಿಸಿತ್ತು. ಮನ್ಸೂರ್​ ಖಾನ್​ ಜಾಮೀನು ಅರ್ಜಿಯನ್ನು ನ್ಯಾಯಾಲಯ ಮಂಗಳವಾರ ವಿಚಾರಣೆ ನಡೆಸಿತು.

ಹೆಚ್ಚಿನ ಬಡ್ಡಿಯ ಆಮಿಷವೊಡ್ಡಿ ಸಾವಿರಾರು ಜನರಿಂದ ಹಣ ಪಡೆದಿದ್ದ ಐಎಂಎ ಕಂಪನಿಯು ಗ್ರಾಹಕರಿಗೆ ಹಣ ಮರಳಿಸಿದೆ ಕೋಟ್ಯಂತರ ರೂ. ವಂಚನೆ ಎಸಗಿದೆ. ಈ ಹಿನ್ನೆಲೆಯಲ್ಲಿ ಪ್ರಮುಖ ಆರೋಪಿ ಮನ್ಸೂರ್​ಗೆ ಜಾಮೀನು ನೀಡಬಾರದು ಎಂದು ಸಿಬಿಐ ಪರ ಸರ್ಕಾರಿ ಹಿರಿಯ ಅಭಿಯೋಜಕ ಸುದರ್ಶನ್​ ವಾದ ಮಂಡಿಸಿದ್ದರು. ನ್ಯಾಯಾಲಯವು ಜಾಮೀನು ಅಜಿರ್ಯನ್ನು ವಜಾಗೊಳಿಸಿದ್ದು, ಮನ್ಸೂರ್​ ಖಾನ್​ಗೆ ಇನ್ನು ಜೈಲೇ ಗತಿಯಾಗಿದೆ.

ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದು, ಇನ್ನಷ್ಟು ಸಾಕ್ಷಿಗಾಗಿ ಶೋಧ ನಡೆಸುತ್ತಿದ್ದಾರೆ. ದೆಹಲಿ ಇಡಿ ಅಧಿಕಾರಿಗಳು ಮನ್ಸೂರ್​ ಹೊಂದಿರುವ ಇನ್ನಷ್ಟು ಆಸ್ತಿಯನ್ನು ಪತ್ತೆಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net