ಮುಂಬೈನ ಮೆರೈನ್ ಡ್ರೈವ್‌ನಲ್ಲಿ ಪ್ರಧಾನಿ ಮೋದಿಯ ಬೆಳಕಿನ ಚಿತ್ತಾರ!|Technology

untitled-design-2025-09-18t111232925-68cb9bd801f09
Published on

Technology: ಪ್ರಧಾನಿ ನರೇಂದ್ರ ಮೋದಿ 75 ನೇ ಹುಟ್ಟುಹಬ್ಬದ ಅಂಗವಾಗಿ ಮುಂಬೈನ ಮೆರೈನ್ ಡ್ರೈವ್‌ನಲ್ಲಿ ನೂರಾರು ಡ್ರೋನ್‌ಗಳು ಆಕಾಶದಲ್ಲಿ ಬೆಳಕನ್ನು ಚೆಲ್ಲುವುದರ ಮೂಲಕ ಅಗ್ರಗಣ್ಯ ನಾಯಕನಿಗೆ ವಿಶೇಷವಾಗಿ ಜನ್ಮದಿನದ ಶುಭಾಶಯವವನ್ನು ತಿಳಿಸಿದವು.

ಪ್ರಧಾನಿ ಜನ್ಮ ಅಮೃತ ಮಹೋತ್ಸವದ ಹಿನ್ನಲೆಯಲ್ಲಿ ಮುಂಬೈ ನಗರದ ಅನೇಕ ಕಡೆಗಳಲ್ಲಿ ಜನರು ಗೌರವ ಸಲ್ಲಿಸುವ ನಿಟ್ಟಿನಲ್ಲಿ ತಮ್ಮದೇ ಆದ ರೀತಿಯಲ್ಲಿ ಶುಭಾಶಯ ಸಲ್ಲಿಸಿದ್ದು, ಟ್ರೈಡೆಂಟ್ ಹೋಟೆಲ್ ಮತ್ತು ಏರ್ ಇಂಡಿಯಾ ಕಟ್ಟಡವು ಪ್ರಧಾನಿ ಮೋದಿಯವರ ಚಿತ್ರವನ್ನು ಆಕಾಶದಲ್ಲಿ ಬೆಳಕಿನ ಪ್ರಕ್ಷೇಪಣೆಯಿಂದ ಬೆಳಗಿಸಲ್ಪಟ್ಟಿದ್ದರು. ಹಾಗೆಯೇ, ಬಾಂದ್ರಾ-ವರ್ಲಿಯಲ್ಲಿ ತ್ರಿವರ್ಣ ಧ್ವಜದ ಬೆಳಕಿನೊಂದಿಗೆ ಶುಭಾಶಯವನ್ನು ತಿಳಿಸಿದ್ದಾರೆ. ಒಟ್ಟಾರೆಯಾಗಿ ಡ್ರೋನ್​ಗಳ ಅದ್ಬುತ ಕಲಾತ್ಮಕತೆಯು ಉತ್ತಮ ಪ್ರದರ್ಶನಗಳು ನೀಡಿದ್ದು, ನೋಡುಗರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿವೆ.

ಪುಣೆಯಲ್ಲಿ ನಡೆದ ಆಚರಣೆ

ಪ್ರಧಾನಿಯವರ ಜನ್ಮ ದಿನದ ಆಚರಣೆಯು ಮುಂಬೈನಾದ್ಯಂತ ಪ್ರಸರಿಸಲ್ಪಟ್ಟಿದೆ. ಪುಣೆಯ ಎಸ್​ಪಿ ಕಾಲೇಜಿನ ಆವರಣದಲ್ಲಿ ಸುಮಾರು 1000 ಡ್ರೋನ್​ಗಳನ್ನು ಬಳಸಿ "ಜ್ಯೋತಿನೆ ತೇಜಚಿ ಆರತಿ" ಎಂಬ 3D ಪ್ರದರ್ಶನವನ್ನು 45 ನಿಮಿಷಗಳ ಕಾಲ ಏರ್ಪಡಿಸಿದ್ದರು. ಇದು ಮೋದಿಯವರಿಗೆ ಗೌರವ ಸಲ್ಲಿಸುವ ಮೂಲಕ ಅವರ ಸರ್ಕಾರದ ಸಾಧನೆಗಳನ್ನು ಎತ್ತಿ ತೋರಿಸಿವೆ.

ಈ ಪ್ರದರ್ಶನಗಳು ಹೆಚ್ಚು ಜನಸಂದಣಿಯನ್ನು ಹೊಂದಿದ್ದವು ಈ ಪ್ರದರ್ಶನಗಳೊಂದಿಗೆ ಗಾಯಕ ಅವಧೂತ್​ ಗುಪ್ತೆ ಅವರ ಜನಪ್ರಿಯ ಹಾಡುಗಳು ಹಾಗೂ ದೇಶ ಭಕ್ತಿ ಗೀತೆಗಳು ಈ ಆಚರಣೆಯಲ್ಲಿ ಕಂಡುಬಂದವು.

ಅಂತರಾಷ್ಟ್ರೀಯ ಮಟ್ಟದಲ್ಲಿ ಮೋದಿಯವರಿಗೆ ಗೌರವ ಸಲ್ಲಿಸುವಲ್ಲಿ ಅನೇಕ ರಾಷ್ಟ್ರಗಳು ಜೊತೆಯಾಗಿದ್ದು, ಲಂಡನ್​ನ ಪಿಕ್ಕಡಿಲಿ ಸರ್ಕಸ್​ ಹಾಗೂ ನ್ಯೂಯಾರ್ಕ್​ನಲ್ಲಿ ಟೈಮ್ಸ್ ಸ್ಕ್ವೇರ್‌ನಲ್ಲಿ ಪ್ರಧಾನಿ ಭಾವಚಿತ್ರವನ್ನು ಆಕರ್ಷಕವಾಗಿ ಪ್ರದರ್ಶಿಸಿರು. ಹೀಗೆ ಹಲವಾರು ಕಡೆಯಲ್ಲಿ ಮೋದಿಯವರಿಗೆ ಗೌರವ ಸಲ್ಲಿಸುವ ಸಲುವಾಗಿ ಅಭಿಮಾನಿಗಳು ಎಲ್ಲೆಡೆ ವಿಜೃಂಭಣೆಯಿಂದ ಅವರ ಜನ್ಮ ದಿನಾಚರಣೆ ಮಾಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net