ಸೇನಾ ಕ್ಯಾಂಟಿನ್ ಮದ್ಯ ಅಕ್ರಮ ಸಾಗಾಟ : ಮೈಸೂರಿನಲ್ಲಿ ಮೂವರ ಬಂಧನ

liquor
Published on

ಮೈಸೂರು: ನಗರದ ಹೊರ ವಲಯದಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 5.7 ಲಕ್ಷ ರೂ.ಮೌಲ್ಯದ ಮದ್ಯವನ್ನು ಭಾನುವಾರ ಅಬಕಾರಿ ಪೊಲೀಸರು ವಶಪಡಿಸಿಕೊಂಡು, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಗದ್ದಿಗೆ ರಸ್ತೆಯಲ್ಲಿ ಅಕ್ರಮವಾಗಿ ಕಾರಿನಲ್ಲಿ ಮದ್ಯ ಸಾಗಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಅಬಕಾರಿ ಪೊಲೀಸರು ದಾಳಿ ನಡೆಸಿದರು. ಆರೋಪಿಗಳು ಬೆಂಗಳೂರಿನ ಸೇನಾ ಕ್ಯಾಂಟಿನ್‌ನಿಂದ ದೊರೆಯುವ ಮದ್ಯ ತಂದು ಮೈಸೂರಿನಲ್ಲಿ ಮಾರಾಟ ಮಾಡುತ್ತಿರುವುದು ವಿಚಾರಣೆಯಿಂದ ತಿಳಿದು ಬಂದಿದೆ. ಕಾರ್ಯಾಚರಣೆಯಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳಾದ ಸಂತೋಷ್ ಕುಮಾರ್, ಅಜಯ್, ಪ್ರತಾಪ್, ಚಾಲಕ ಮಂಜು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net