ಅಕ್ರಮ ಭೂ ಮಂಜೂರು; ಕಡೂರು ತಹಸೀಲ್ದಾರ್ ಅಮಾನತು|Suspension of Kadur Tehsildar

vidhanasoudha
Published on

ಬೆಂಗಳೂರು: ಅರಣ್ಯ ಜಮೀನನ್ನು ಸರ್ಕಾರದ ಪೂರ್ವಾನುಮತಿ ಪಡೆಯದೇ ಅಕ್ರಮ ಭೂ ಮಂಜೂರಾತಿ(Illegal land allotment) ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆ ಕಡೂರು ತಹಸೀಲ್ದಾರ್ (Suspension of Kadur Tehsildar) ಸಿ.ಎಸ್.ಪೂರ್ಣಿಮ ಅವರನ್ನು ಸರ್ಕಾರ ಅಮಾನತುಗೊಳಿಸಿದೆ.

ಭದ್ರಾವತಿ ವಿಭಾಗದ ಲಕ್ಕವಳ್ಳಿ ವಲಯದಲ್ಲಿ ಅಧಿಸೂಚಿತ ಅರಣ್ಯ ಪ್ರದೇಶದ ರಂಗೇನಹಳ್ಳಿ ಗ್ರಾಮದ ಸರ್ವೇ ನಂ.4ರಲ್ಲಿ ಒಟ್ಟು 8.03ಎಕರೆ ಅರರ್ಣಯ ಜಮೀನನ್ನು ಕೇಂದ್ರ ಸರ್ಕಾರದ ಪೂರ್ವಾನುಮತಿ ಪಡೆಯದೇ ಕಾನೂನು ಬಾಹಿರವಾಗಿ ಅಕ್ರಮ ಭೂ ಮಂಜೂರಾತಿ ಮಾಡಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಅಕ್ರಮ ಭೂ ಮಂಜೂರಾತಿ ವಿಚಾರದ್ಲಿ ಪೂರ್ಣಿಮ ಅವರು ನಾಗರಿಕ ಸೇವಾ ನಡತೆ ನಿಯಮ ಉಲ್ಲಂಸಿ ದುರ್ನಡತೆ/ಕರ್ತವ್ಯ ಲೋಪವೆಸಗಿ ಅಧಿಕಾರ ದುರುಪಯೋಗ ಪಡಿಸಿಕೊಂಡಿರುವುದರಿಂದ ಅವರ ವಿರುದ್ಧ ಇಲಾಖೆ ವಿಚಾರಣೆ ಬಾಕಿಯಿರಿಸಿ ತಕ್ಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಕಂದಾಯ ಇಲಾಖೆ ಸರ್ಕಾರ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net