ಅಕ್ರಮ ಬೆಟ್ಟಿಂಗ್ ಆ್ಯಪ್ ಪ್ರಕರಣ; ನಟಿ 'ಊರ್ವಶಿ ರೌಟೇಲಾ'ಗೆ ಇಡಿ ಸಮನ್ಸ್ ಜಾರಿ| urvashi rautela

urvashi rautela
Published on

ನವದೆಹಲಿ: 1xBet ಹೆಸರಿನ ಆನ್‌ಲೈನ್ ಬೆಟ್ಟಿಂಗ್ ಪ್ಲಾಟ್‌ಫಾರ್ಮ್ ಅಪ್ಲಿಕೇಶನ್ ವಿರುದ್ಧ ನಡೆಯುತ್ತಿರುವ ತನಿಖೆಗೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಊರ್ವಶಿ ರೌಟೇಲಾ ಅವರಿಗೆ ಜಾರಿ ನಿರ್ದೇಶನಾಲಯ (ED) ಸಮನ್ಸ್ ಜಾರಿ ಮಾಡಿದೆ. ಅವರು ಸೆಪ್ಟೆಂಬರ್ 16 ರಂದು ದೆಹಲಿಯಲ್ಲಿರುವ ಇಡಿ ಪ್ರಧಾನ ಕಚೇರಿಗೆ ಹಾಜರಾಗುವಂತೆ ಸೂಚಿಸಲಾಗಿದೆ.

ಇದಕ್ಕೂ ಮೊದಲು, ಇದೇ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್‌ನ ಮಾಜಿ ಸಂಸದೆ ಮಿಮಿ ಚಕ್ರವರ್ತಿ ಅವರಿಗೂ ಸೆಪ್ಟೆಂಬರ್ 15 ರಂದು ವಿಚಾರಣೆಗೆ ಹಾಜರಾಗಲು ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿತ್ತು. 1xBet ಆ್ಯಪ್ ಪ್ರಕರಣದಲ್ಲಿ ಇಬ್ಬರೂ ED ಕಚೇರಿಯಲ್ಲಿ ಹಾಜರಾಗುವಂತೆ ಕೇಳಿಕೊಳ್ಳಲಾಗಿದೆ ಎಂದು ED ಮೂಲಗಳು ದೃಢಪಡಿಸಿವೆ. ತನಿಖೆಯಲ್ಲಿ ಈಗಾಗಲೇ ಮಾಜಿ ಕ್ರಿಕೆಟಿಗರಾದ ಸುರೇಶ್ ರೈನಾ ಮತ್ತು ಶಿಖರ್ ಧವನ್ ಸೇರಿದಂತೆ ಹಲವಾರು ಉನ್ನತ ವ್ಯಕ್ತಿಗಳನ್ನು ಸಹ ವಿಚಾರಣೆ ನಡೆಸಲಾಗಿದೆ.

(ಏಜೆನ್ಸೀಸ್)

ಆಕ್ರಮ ಬೆಟ್ಟಿಂಗ್​ ಆಪ್ಲಿಕೇಶನ್​ಗಳು ಕೋಟ್ಯಾಂತರ ರೂ. ಮೌಲ್ಯದ ಹಲವಾರು ಜನರನ್ನು ಮತ್ತು ಹೂಡಿಕೆದಾರರನ್ನು ವಂಚಿಸಿದೆ ಅಥವಾ ಭಾರೀ ಪ್ರಮಾಣದ ತೆರಿಗೆ ವಂಚಿಸಿದೆ ಎಂದು ಹೇಳಲಾದ ಇಂತಹ ಹಲವಾರು ಪ್ರಕರಣಗಳಲ್ಲಿ ಸಂಸ್ಥೆ ತನಿಖೆ ನಡೆಸುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net