

ತೀರ್ಥಹಳ್ಳಿ: ಆಗುಂಬೆ ಮಳೆಕಾಡು ಸಂಶೋಧನಾ ಕೇಂದ್ರದಲ್ಲಿ ಅರಣ್ಯ ಇಲಾಖೆಯ ಅನುಮತಿ ಇಲ್ಲದೆ ಕಾನೂನು ಉಲ್ಲಂಸಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ. ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಪರಿಸರವಾದಿಗಳು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ದೂರು ಸಲ್ಲಿಸಿದ್ದಾರೆ.
ಪಶ್ಚಿಮಘಟ್ಟ ಅತೀ ಸೂಕ್ಷ್ಮ ಹಾಗೂ ಪರಿಸರ ಸಂವೇದನಾಶೀಲ ವಲಯ. ಜೀವೈವಿಧ್ಯದ ಹೃದಯ ಭಾಗವೆಂದೂ ಯುನೆಸ್ಕೋ ವಿಶ್ವ ಪಾರಂಪರಿಕ ಸ್ಥಳಗಳ ಪಟ್ಟಿಯಲ್ಲಿ ಗುರುತಿಸಲಾಗಿದೆ. ಇಂತಹ ಮಹತ್ವದ ಪ್ರದೇಶದಲ್ಲಿ ಸಂಶೋಧನೆ ಹೆಸರಿನಲ್ಲಿ ವಾಣಿಜ್ಯ ಚಟುವಟಿಕೆಗಳು ನಡೆಯುತ್ತಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿರುವುದಲ್ಲದೇ ಪ್ರವಾಸಿಗರಿಗೆ ಹಾವು ತೋರಿಸುವುದು, ೋಟೋಗ್ರಫಿ, ವಿಡಿಯೋಗ್ರಫಿಗೆ ಅವಕಾಶ ಕಲ್ಪಿಸುವುದು, ವಾಣಿಜ್ಯ ಪ್ರವಾಸ ಮುಂತಾದ ಕಾರ್ಯಾಚರಣೆಗಳ ಮೂಲಕ ನಡೆದಿರುವ ಅಕ್ರಮಗಳು ಕಾನೂನು ಉಲ್ಲಂಘನೆಗೆ ಉದಾಹರಣೆ. ವನ್ಯಜೀವಿ ಅಭಯಾರಣ್ಯದೊಳಗೆ ಯಾವುದೇ ವಾಣಿಜ್ಯ ಚಟುವಟಿಕೆ ಪ್ರಾಣಿಗಳ ಹಿಡಿತ ಮತ್ತು ಪ್ರದರ್ಶನ ಅಥವಾ ಪ್ರವಾಸಿಗರಿಗೆ ವೀಕ್ಷಣೆಗೆ ಅವಕಾಶ ಕಲ್ಪಿಸುವುದು ಕಾನೂನು ಪ್ರಕಾರ ನಿಷಿದ್ಧ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಆಗುಂಬೆ ಮಳೆಕಾಡು ಸಂಶೋಧನಾ ಕೇಂದ್ರ (ಎಆರ್‌ಆರ್‌ಎಸ್)ದೊಂದಿಗೆ ನೇರ ಸಂಪರ್ಕ ಹೊಂದಿರುವ ವ್ಯಕ್ತಿಯೊಬ್ಬರು ಸೋಮೇಶ್ವರ ವನ್ಯಜೀವಿ ಅಭಯಾರಣ್ಯ ವ್ಯಾಪ್ತಿಯೊಳಗೆ ಬರುವ ಸರ್ವೇ ನಂ.11ರಲ್ಲಿ 2.37 ಎಕರೆ ಸೂಕ್ಷ್ಮ ಪ್ರದೇಶವನ್ನು ಖರೀದಿಸಿರುವುದು ಕಾನೂನು ಉಲ್ಲಂಘನೆಗೆ ಸ್ಪಷ್ಟ ಉದಾಹರಣೆ ಎಂದು ದೂರಲಾಗಿದೆ.
ಮುಖ್ಯವಾಗಿ ಈ ಪ್ರದೇಶದಲ್ಲಿ ಮೇರಿಸ್ಟಿಕ್ ಸ್ಟಾಂಪ್ ಮರಗಳಿವೆ. ಈ ಮರಗಳು ಜಲ ಸಂಗ್ರಹಣೆ ಹಾಗೂ ಭೂಗರ್ಭ ಜಲ ಮರುಪೂರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹಾಗಾಗಿ ಈ ಸಂಪತ್ತನ್ನು ಹಾನಿಗೊಳಿಸುವ ಯಾವುದೇ ಚಟುವಟಿಕೆ ಪರಿಸರ ಸಮತೋಲನಕ್ಕೆ ಆಪಾಯ ಉಂಟು ಮಾಡುತ್ತವೆ ಎಂದು ಮನವರಿಕೆ ಮಾಡಿಕೊಡಲಾಗಿದೆ.
ವರದಿ ನೀಡುವಂತೆ ಸಿಸಿಎಫ್‌ಗೆ ಸೂಚನೆ: ಆಗುಂಬೆ ರೈನ್ ಾರೆಸ್ಟ್ ಸಂಶೋಧನಾ ಕೇಂದ್ರದ ಹೆಸರಿನಲ್ಲಿ ಖಾಸಗಿ ವಾಹನ ಕಾಡಿನೊಳಗೆ ಮುಕ್ತವಾಗಿ ಸಂಚರಿಸುವುದು, ಪ್ರವಾಸಿಗರಿಗೆ, ಚಲನಚಿತ್ರ ತಂಡಗಳಿಗೆ ಹಾವುಗಳನ್ನು ತೋರಿಸಲು ವಿಶೇಷ ವ್ಯವಸ್ಥೆ ಮಾಡಿ ಲಾಭ ಮಾಡಿಕೊಳ್ಳಲಾಗುತ್ತಿದೆ. ಸಾಮಾಜಿಕ ಜಾಲತಾಣದ ಮೂಲಕ ಅಂತಾರಾಷ್ಟ್ರೀಯ ವೆಬ್‌ಸೈಟ್‌ಗಳಲ್ಲಿ ಹಾಗೂ ಸಾಕ್ಷೃಚಿತ್ರಗಳಲ್ಲೂ ಪ್ರಕಟಿಸಲಾಗುತ್ತಿದೆ ಎಂದು ಪರಿಸರಾಸಕ್ತರು ದೂರಿದ್ದಾರೆ ಪರಿಸರವಾದಿಗಳು ನೀಡಿರುವ ದೂರಿನ ಆಧಾರದಲ್ಲಿ ಕ್ರಮ ತೆಗೆದುಕೊಳ್ಳಲು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಮುಂದಾಗಿದ್ದು, ನಿರ್ಲಕ್ಷೃ ತೋರಿರುವ ಅಧಿಕಾರಿಗಳು ಮತ್ತು ತಪ್ಪಿತಸ್ಥರ ವಿರುದ್ಧ ಕೈಗೊಳ್ಳಬಹುದಾದ ಕ್ರಮದ ಶಿಾರಸಿನೊಂದಿಗೆ ವರದಿ ನೀಡುವಂತೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸಚಿವರು ಮಂಗಳವಾರ ಆದೇಶ ಮಾಡಿದ್ದಾರೆ.