ಮದ್ರಾಸ್​ ಐಐಟಿಯಲ್ಲಿ 9 ವಿದ್ಯಾರ್ಥಿಗಳಿಗೆ ಕರೊನಾ ದೃಢ

IIT madras
Published on

ಚೆನ್ನೈ: ಮದ್ರಾಸ್​ ಐಐಟಿಯಲ್ಲಿ ಮತ್ತೆ ಕರೊನಾ ಪ್ರಕರಣ ದಾಖಲಾಗಿದೆ. 9 ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು ಇರುವುದು ದೃಢವಾಗಿದೆ.

ಈ ಹಿನ್ನಲೆಯಲ್ಲಿ ಸಿಬ್ಬಂದಿ ಸೇರಿ ಎಲ್ಲಾ ವಿದ್ಯಾರ್ಥಿಗಳು ಪರೀಕ್ಷೆಗೊಳಪಡಿಸಬೇಕೆಂದು ಆಡಳಿತ ಮಂಡಳಿ ಸೂಚಿಸಿದೆ.

ಸದ್ಯ ಸೋಂಕು ದೃಢಪಟ್ಟಿರುವ ವಿದ್ಯಾರ್ಥಿಗಳನ್ನು ಐಸೋಲೇಟೆಡ್​ ವಾರ್ಡ್​ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಮ್ಮು,ನೆಗಡಿ ಹಾಗೂ ಜ್ವರ ಇರುವ ವಿದ್ಯಾರ್ಥಿಗಳನ್ನು ಏಪ್ರಿಲ್​ 19 ರಂದು ಪರೀಕ್ಷೆಗೊಳಪಡಿಸಲಾಗಿತ್ತು. ಬುಧವಾರ 9 ವಿದ್ಯಾರ್ಥಿಗಳಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ.

ಸೋಂಕಿತರ ಸಂಪರ್ಕಕ್ಕೆ ಬಂದ 18 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ. ಪ್ರತಿಯೊಬ್ಬರಿಗೂ ಮಾಸ್ಕ್​ ಕಡ್ಡಾಯ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಸೂಚಿಸಲಾಗಿತ್ತು ಎಂದು ಆಡಳಿತಾಧಿಕಾರಿ ರಾಧಾಕೃಷ್ಣನ್​ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net