2023ರ ಜೆಇಇ ಅಡ್ವಾನ್ಸ್ಡ್ ಫಲಿತಾಂಶ ಪ್ರಕಟ: ಈ ಲಿಂಕ್ ಮೂಲಕ ನಿಮ್ಮ ರಿಸಲ್ಟ್ ತಿಳಿದುಕೊಳ್ಳಿ…

results (1)
Published on

ದೆಹಲಿ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಐಐಟಿ) 2023ರ ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯ ಫಲಿತಾಂಶಗಳನ್ನು ಭಾನುವಾರ ಪ್ರಕಟಿಸಿದೆ.

ಇದನ್ನೂ ಓದಿ: ಬಿಸಿಲಿನ ಬೇಗೆಯಿಂದಾಗಿ 24 ಗಂಟೆಗಳಲ್ಲಿ 34 ಜನರು ಆಸ್ಪತ್ರೆಯಲ್ಲೇ ಸಾವು

ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ತಮ್ಮ ಫಲಿತಾಂಶವನ್ನು ಅಧಿಕೃತ ವೆಬ್​ಸೈಟ್​ನಲ್ಲಿ ಪರೀಕ್ಷಿಸಬಹುದಾಗಿದೆ. ಈ ವರ್ಷ ಒಟ್ಟು 1,89,744 ಅಭ್ಯರ್ಥಿಗಳು ಜೆಇಇ ಅಡ್ವಾನ್ಸ್ಡ್ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಈ ಪರೀಕ್ಷೆಯನ್ನು ಜೂನ್ 4ರಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 12ರವರೆಗೆ ಪೇಪರ್ 1 ಹಾಗೂ ಮಧ್ಯಾಹ್ನ 2:30ರಿಂದ ಸಂಜೆ 5:30ರವರೆಗೆ ಪೇಪರ್ 2 ಪರೀಕ್ಷೆಯನ್ನು ನಡೆಸಲಾಗಿತ್ತು. ಹೈದರಾಬಾದಿನ ವಾವಿಲಾಲ ಚಿದ್ವಿಲಾಸ್ ರೆಡ್ಡಿ 341 ಅಂಕಗಳನ್ನು ಪಡೆಯುವ ಮೂಲಕ ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ.


ಫಲಿತಾಂಶವನ್ನು ಹೇಗೆ ಪರಿಶೀಲಿಸುವುದು:
ಜೆಇಇ-ಅಡ್ವಾನ್ಸ್ಡ್ 2023ರ ಫಲಿತಾಂಶ ನೋಡಲು ಅಧಿಕೃತ ವೆಬ್‌ಸೈಟ್‌ jeeadv.ac.inಗೆ ಭೇಟಿ ನೀಡಿ. ಮುಖಪುಟದಲ್ಲಿ 2023ರ ಜೆಇಇ-ಅಡ್ವಾನ್ಸ್ಡ್ ಫಲಿತಾಂಶದ ಲಿಂಕ್​ ಮೇಲೆ ಕ್ಲಿಕ್​ ಮಾಡಿ. ಜನ್ಮ ದಿನಾಂಕ ಮತ್ತು ಪರೀಕ್ಷಾ ನೋಂದಣಿ ಸಂಖ್ಯೆ ಮತ್ತು ಮೊಬೈಲ್​ ಸಂಖ್ಯೆ ನಮೂದಿಸಿ ಲಾಗಿನ್ ಮಾಡಿದರೆ ನಿಮ್ಮ ಫಲಿತಾಂಶ ನೋಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜೆಇಇ-ಅಡ್ವಾನ್ಸ್ಡ್ ವೆಬ್​ಸೈಟ್​​ ಪರೀಕ್ಷಿಸಬಹುದಾಗಿದೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net