ಲೈಂಗಿಕ ಅಲ್ಪಸಂಖ್ಯಾತರ ಹೃದಯ ಗೆದ್ದ ನ್ಯಾಯಮೂರ್ತಿ

Anand Venkat
Published on

ಚೆನ್ನೈ: ಸಲಿಂಗಿ, ತೃತೀಯ ಲಿಂಗಿಗಳು ಸೇರಿ ಲೈಂಗಿಕ ಅಲ್ಪಸಂಖ್ಯಾತರನ್ನು ಸಮಾಜ ಹಾಗೂ ಪೊಲೀಸ್​ ಕಿರುಕುಳದಿಂದ ರಸುವ ನಿಟ್ಟಿನಲ್ಲಿ ಮದ್ರಾಸ್​ ಹೈಕೋರ್ಟ್​ನ ನ್ಯಾಯಮೂರ್ತಿ ಆನಂದ್​ ವೆಂಕಟೇಶ್​ ನೀಡಿರುವ ತೀರ್ಪು ಹಾಗೂ ತೀರ್ಪಿಗೆ ಮುನ್ನ ಈ ಸಮುದಾಯದ ಸಮಸ್ಯೆ ಅರ್ಥಮಾಡಿಕೊಳ್ಳಲು ಶಿಣ ಪಡೆದುಕೊಂಡ ಬಗೆಗೆ ಮೆಚ್ಚುಗೆಗೆ ಪಾತ್ರವಾಗಿದೆ.

ಸಲಿಂಗ ಸಂಗಾತಿಗಳು ತಮಗೆ ಹೆತ್ತವರು ಹಾಗೂ ಪೊಲೀಸರಿಂದ ರಣೆ ಬೇಕೆಂದು ಸಲ್ಲಿಸಿದ್ದ ಅರ್ಜಿ ಸಂಬಂಧ ಆದೇಶ ನೀಡುವ ಮುನ್ನ ನ್ಯಾ.ವೆಂಕಟೇಶ್​, ಸಮುದಾಯದ ಬಗ್ಗೆ ಏನನ್ನೂ ತಿಳಿದುಕೊಳ್ಳದೆ ತೀರ್ಪು ಬರೆಯುವುದು ತಪ್ಪು ಎಂದು ಹೇಳಿದ್ದರು.

ಮನಶ್ಶಾಸರೂ, ತೃತೀಯ ಲಿಂಗಿಯೂ ಆಗಿರುವ ವಿದ್ಯಾ ದಿನಕರನ್​ ಜತೆಗೆ ಸಮಾಲೋಚನಾ ಸಭೆಯನ್ನು ನ್ಯಾ. ವೆಂಕಟೇಶ್​ ನಡೆಸಿದ್ದರು ಸಾಮಾಜಿಕ ಪರಿವರ್ತನೆಯು ರಾತ್ರಿ ಬೆಳಗಾಗುವುದರೊಳಗೆ ನಡೆಯುವುದಲ್ಲ. ಇದಕ್ಕೆ ಸಾಂವಿಧಾನಿಕ ಸಂಸ್ಥೆಗಳ ಯತ್ನ ಮತ್ತು ನ್ಯಾಯಾಂಗದ ಪಾತ್ರ ಬಹುಮುಖ್ಯವಾಗಿದೆ ಎಂದು ತೀರ್ಪಿನಲ್ಲಿ ಹೇಳಿದ್ದಾರೆ.

ಲೈಂಗಿಕ ಅಲ್ಪಸಂಖ್ಯಾತರ ಬಗ್ಗೆ ಅರಿವು ಮೂಡಿಸಲು ಶಾಲೆ ಮತ್ತು ವಿವಿ ಪಠ್ಯಕ್ರಮಗಳಲ್ಲಿ ಬದಲಾವಣೆ ಮಾಡಬೇಕು. ವ್ಯಕ್ತಿ ಯೊಬ್ಬನ ಲೈಂಗಿಕ ಮನಸ್ಥಿತಿ ಬದಲಿಸುವ ಯಾವ ವೈದ್ಯಕಿಯ ಯತ್ನವನ್ನೂ ಸಹಿಸಲಾಗದು. ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು | ಆನಂದ್​ ವೆಂಕಟೇಶ್​ ಮದ್ರಾಸ್​ ಹೈಕೋರ್ಟ್​ ನ್ಯಾಯಮೂರ್ತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net