ಈ ವಿಸಿಟಿಂಗ್​ ಕಾರ್ಡ್​ ನೆಟ್ಟರೆ ತುಳಸಿ ಗಿಡ ಬೆಳೆಯುತ್ತೆ...! ಐಎಫ್​ಎಸ್​ ಅಧಿಕಾರಿಯ ಪರಿಸರ ಪ್ರೇಮ....!

IFS visiting card
Published on

ನವದೆಹಲಿ: ಐಎಫ್​ಎಸ್​ ಅಧಿಕಾರಿಯೊಬ್ಬರ ಪರಿಸರ ಪ್ರೇಮ ಈಗ ನೆಟ್ಟಿಗರ ಮನಸೂರೆಗೊಂಡಿದೆ....!

ಇನ್ನು ಮುಂದೆ ನನ್ನ ಕಚೇರಿಗೆ ಭೇಟಿ ನೀಡುವ ವ್ಯಕ್ತಿಗಳಿಗೆ ಈ ಕಾರ್ಡ್​ ಸಿಗಲಿದೆ ಎಂದು ಟ್ವೀಟರ್​ನಲ್ಲಿ ವಿಸಿಟಿಂಗ್​ ಕಾರ್ಡ್​ನ ಫೋಟೋವೊಂದನ್ನು ಶೇರ್​ ಮಾಡಿದ್ದಾರೆ ಐಎಫ್​ಎಸ್​ ಅಧಿಕಾರಿ ಪರ್​ವೀನ್​ ಕೇಸ್ವಾನ್​.

ಸಂಪರ್ಕ ವಿವರಗಳನ್ನು ನೀಡುವುದಷ್ಟೇ ಇದರ ಈ ಕಾರ್ಡ್​ ಉದ್ದೇಶವಲ್ಲ, ಬದಲಿಗೆ ಇದು ಪರಿಸರ ಪ್ರೇಮವನ್ನು ಮೂಡಿಸುತ್ತದೆ. ಇದನ್ನು ನೆಟ್ಟರೆ ತುಳಸಿ ಗಿಡ ಬೆಳೆಯುತ್ತದೆ ಎಂದು ಕಾರ್ಡ್​ ಮೇಲೆ ಮುದ್ರಿಸಲಾಗಿದೆ. ಹೀಗಾಗಿಇದು ಅನೇಕರಿಗೆ ಸ್ಪೂರ್ತಿಯಾಗಿ ಪರಿಣಮಿಸಿದೆ.

ವಿಸಿಟಿಂಗ್​ ಕಾರ್ಡ್​ ಮಾತ್ರವಲ್ಲದೇ, ವಿವಿಧ ಆಮಂತ್ರಣ ಪತ್ರಿಕೆಗಳು, ಮದುವೆ ಕಾರ್ಡ್​ಗಳು, ಬಟ್ಟೆ ಹಾಗೂ ಇತರ ವಸ್ತುಗಳ ಮೇಲೆ ಕಟ್ಟಲಾಗುವ ಬೆಲೆ ಚೀಟಿಗಳನ್ನು ಇದೇ ಮಾದರಿಯಲ್ಲಿ ಪರಿಸರಸ್ನೇಹಿಯಾಗಿಸಬಹುದು ಎಂದು ಅವರು ವಿವರ ನೀಡಿದ್ದಾರೆ.

ತುಳಸಿ ಮಾತ್ರವಲ್ಲದೇ, ವಿವಿಧ ಸಸ್ಯ, ಹೂಗಿಡಗಳ ಬೀಜಗಳನ್ನು ಇಂಥ ಕಾರ್ಡಗಳಲ್ಲಿ ಬಳಸಬಹುದು ಎಂದು ಸಲಹೆ ನೀಡಿದ್ದಾರೆ. ಈ ಐಡಿಯಾಗೆ ಅನೇಕರು ಮಾರು ಹೋಗಿ ತಾವು ಫಾಲೋ ಮಾಡೋದಾಗಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net