ಚಳಿಗಾಲದಲ್ಲಿ ಬ್ಯಾಟರಿಗಳು ಬೇಗನೆ ಡೆಡ್ ಆಗ್ತವೆ. ವಿಶೇಷವಾಗಿ, ಕೆಲವು ದಿನಗಳವರೆಗೆ ಬೈಕ್ ಸ್ಟಾರ್ಟ್ ಆಗದಿದ್ದರಂತು ಸೆಲ್ಫ್ ಸ್ಟಾರ್ಟ್ ವರ್ಕ್ ಆಗೋದಿಲ್ಲ. ಅಲ್ಲಿಗೆ ಬ್ಯಾಟರಿ ಡೆಡ್ ಆಗಿದೆ ಎಂಬುದು ಸ್ಪಷ್ಟ. ಈ ಸಮಯದಲ್ಲಿ, ಬೈಕ್ನ ಸೆಂಟರ್ ಸ್ಟ್ಯಾಂಡ್‌ನಲ್ಲಿ ನಿಲ್ಲಿಸಿ, ನಾಲ್ಕನೇ ಗೇರ್‌ಗೆ ಹಾಕಿ, ಹಿಂಬದಿ ಚಕ್ರವನ್ನು ಕೈಯಿಂದ ಜೋರಾಗಿ ತಿರುಗಿಸಿ. ಈ ವಿಧಾನವು ಬೈಕ್ ಸ್ಟಾರ್ಟ್ಗೆ ಕಾರಣವಾಗುತ್ತದೆ. ಇದನ್ನು ಸಾಮಾನ್ಯವಾಗಿ ಪುಶ್ ಸ್ಟಾರ್ಟ್ ಎಂದು ಕರೆಯಲಾಗುತ್ತದೆ.