ನಿಯಮ ಪಾಲಿಸಿದರೆ ಅಪಘಾತ ಕಡಿಮೆ

sgr road
ಸಾಗರದಲ್ಲಿ ಆಯೋಜಿಸಿದ್ದ ರಸ್ತೆ ಸುರಕ್ಷಾ ಜಾಗೃತಿ ಜಾಥಾಕ್ಕೆ ಪ್ರಾದೇಶಿಕ ಸಾರಿಗೆ ಅಧಿಕಾರಿ ವೀರೇಶ್ ಚಾಲನೆ ನೀಡಿದರು. ಡಾ. ರಾಜನಂದಿನಿ ಕಾಗೋಡು, ಪ್ರಶಾಂತ್, ವಾಸುದೇವ್, ಹುಚ್ಚಪ್ಪ, ಕೆ.ಬಿ.ಉಮೇಶ್, ನಾಗರಾಜ್, ಯಲ್ಲಪ್ಪ ಇತರರಿದ್ದರು.
Published on

ಸಾಗರ: ರಸ್ತೆ ಸುರಕ್ಷಾ ನಿಯಮಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕು. ಸಂಚರಿಸುವಾಗ ವಾಹನ ಚಾಲಕರಷ್ಟೇ ಜವಾಬ್ದಾರಿ ಸಾರ್ವಜನಿಕರ ಮೇಲೂ ಇದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ವೀರೇಶ್ ಹೇಳಿದರು.

ಸಾಗರದ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿ, ಪೇಟೆ ಠಾಣೆ ನೇತೃತ್ವದಲ್ಲಿ ಶನಿವಾರ ಆಯೋಜಿಸಿದ್ದ ರಸ್ತೆ ಸುರಕ್ಷತಾ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಸ್ತೆ ಸುರಕ್ಷಾ ನಿಯಮ ಪಾಲಿಸದಿದ್ದರೆ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚು ಎಂದರು.

ತಮ್ಮ ಕುಟುಂಬದ ಬಗ್ಗೆ ಸದಾ ಕಾಳಜಿ ಇರಿಸಿಕೊಂಡರೆ ವಾಹನ ಸವಾರರು ಸಹಜವಾಗಿ ಸುರಕ್ಷಿತವಾಗಿ ವಾಹನ ಚಲಾಯಿಸುತ್ತಾರೆ. ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಅಪಘಾತದಲ್ಲಿ ಸಾವು-ನೋವುಗಳಾದರೆ ನಿಮ್ಮನ್ನು ಅವಲಂಬಿಸಿರುವ ಕುಟುಂಬ ಸಂಕಷ್ಟಕ್ಕೆ ಸಿಲುಕುತ್ತದೆ. ನೆಮ್ಮದಿ ಹಾಳಾಗುತ್ತದೆ. ಹಾಗಾಗಿ ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದರು.

ಪೇಟೆ ಠಾಣೆ ಸಿಪಿಐ ಪುಲ್ಲಯ್ಯ ಮಾತನಾಡಿ, ವಾಹನ ಸವಾರರು ರಸ್ತೆ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವುದರಿಂದ ಅಪಘಾತ ತಡೆಯಬಹುದು. ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್, ಕಾರು ಚಾಲಕರು ಸೀಟ್ ಬೆಲ್ಟ್ ಧರಿಸಬೇಕು. ಎಲ್ಲೆಲ್ಲಿ ರಸ್ತೆ ನಿಯಮವನ್ನು ಪಾಲನೆ ಮಾಡುವುದಿಲ್ಲವೋ ಅಲ್ಲಿ ಅಪಘಾತಗಳು ಆಗುವುದು ನಿಶ್ಚಿತ. ಮುಂಜಾಗ್ರತೆ ವಹಿಸಿದರೆ ಅಪಘಾತಗಳನ್ನು ತಡೆಯಬಹುದು ಎಂದರು.

ಜಾಥಾದಲ್ಲಿ ಜ್ಞಾನಸಾಗರ ಪಬ್ಲಿಕ್ ಶಾಲೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಡಾ. ರಾಜನಂದಿನಿ ಕಾಗೋಡು, ಪ್ರಶಾಂತ್, ವಾಸುದೇವ್, ಹುಚ್ಚಪ್ಪ, ಕೆ.ಬಿ.ಉಮೇಶ್, ನಾಗರಾಜ್, ಯಲ್ಲಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net