ಶಿವಪ್ರಸಾದವನ್ನು ಕೊಂಬಲ್ಲಿ...

Basavanna
Published on

ಶಿವಪ್ರಸಾದವನ್ನು ಕೊಂಬುವ ಕ್ರಮವನ್ನು ಬಸವಣ್ಣನವರು ತಮ್ಮ ವಚನದಲ್ಲಿ ಬಹು ಮಾರ್ವಿುಕವಾಗಿ ತಿಳಿಸಿದ್ದಾರೆ: ಮೌನದಿಂದು ಬುವದ ಆಚಾರವಲ್ಲವಯ್ಯ/ ಲಿಂಗಾರ್ಪಿತವಾದ ಬಳಿಕ ತುತ್ತಿಗೊಮ್ಮೆ /ಶಿವಶರಣರನ್ನು ನೆನೆಯುತ್ತ ಉಂಡರೆ/ಕರುಣ ವೃತ್ತಿಗಳು ಅಡಗು ವವು/ನಮ್ಮ ಕೂಡಲಸಂಗಮದೇವನ ನೆನೆಯುತ್ತ ಉಂಡರೆ...

ಪ್ರಸಾದವನ್ನು ಸ್ವೀಕರಿಸುತ್ತಿರುವಾಗ ಯಾವುದಾದರೂ ಒಂದು ವಿಚಾರ ಮಾಡುತ್ತ ಉಂಡರೆ ಅದೇ ಗುಣ ನಮ್ಮಲ್ಲಿ ಅಳವಡುತ್ತದೆ. ಅದಕ್ಕೆ ತುತ್ತಿಗೊಮ್ಮೆ ಶರಣರನ್ನು ನೆನೆಯುತ್ತ ಉಂಡರೆ ಕರುಣ ವೃತ್ತಿಗಳು ಅಡುಗುವವು, ಕೂಡಲಸಂಗಮ ದೇವರ ನೆನೆಯುತ್ತ ಉಂಡರೆ ಎಂದಿರುವರು.. ಇದನ್ನರಿತು ಪ್ರಸಾದ ಸ್ವೀಕರಿಸಬೇಕು.. ಷಣ್ಮುಖ ಶಿವಯೋಗಿಗಳು ಕೂಡ, ಶಿವಪ್ರಸಾದ ಕೊಂಬಲ್ಲಿ ಇಂದ್ರಿಯಗಳು ಬೇರೆ ವಿಚಾರವನ್ನು ಮಾಡದಿರಬೇಕು. ಮನಸ್ಸು ಅತ್ತಿತ್ತ ಹರಿಯದಿರಬೇಕು. ಶಿವಧ್ಯಾನ ಪರಾಯಣನಾಗಿ ಪ್ರಸಾದ ಸ್ವೀಕರಿಸಬೇಕು. ಪ್ರಸಾದವೆ ಪರಬ್ರಹ್ಮನೆಂಬ ಭಾವಬಲಿತಿರಬೇಕು. ಇದಕ್ಕೆ ಸರ್ವಜ್ಞ ಕವಿ... ಅನ್ನದೇವರ ಮುಂದೆ ಇನ್ನು ದೇವರಿಲ್ಲ/ ಅನ್ನವಿರುವತನಕ ಪ್ರಾಣವೇ ಜಗದೊಳಗೆ/ ಅನ್ನವೇ ದೈವ ಸರ್ವಜ್ಞ... ಶಿವಪ್ರಸಾದವೆಂದರೆ ದೇವರು, ಈ ದೇವರ ಮುಂದೆ ಯಾವ ದೇವರೂ ಇಲ್ಲ.

ಅನ್ನವಿರುವ ತನಕ ಪ್ರಾಣ. ಅದಕ್ಕೆ ಅನ್ನವೇ ಪರಬ್ರಹ್ಮ ಸ್ವರೂಪವು. ಬಸವಣ್ಣನವರು ಹೇಳಿದಂತೆ ಶಿವಮಂತ್ರವನ್ನು ಉಚ್ಚರಿಸುತ್ತಿರಬೇಕು, ಶಿವಪ್ರಸಾದದ ಘನವಕಂಡು ಮನವು ಹಿಗ್ಗಿ ಪರಮ ಪರಿಣಾಮದೊಳಗೋಲಾಡಬೇಕು. ಇದರ ಬೇಧವನರಿಯ ಬಲ್ಲಾತನೆ ಅಚ್ಛಪ್ರಸಾದಿಯಂದರು ಜೇವರ್ಗಿಯ ಷಣ್ಮುಖ ಶಿವಯೋಗಿ ಗಳು. ಇದೇ ವಿಚಾರವಾಗಿ ಮೊಗ್ಗೆಯ ಮಾಯಾದೇವರು ತಮ್ಮ ಶತಕತ್ರಯದಲ್ಲಿ ಸುಂದರವಾಗಿ ತಿಳಿಸುತ್ತಾರೆ. ಈ ಪ್ರಸಾದಿ ಸ್ಥಳ ಸಿದ್ಧಿಯಾಗಬೇಕಾ ದರೆ, ಲಿಂಗಮುಖಾರ್ಪಣೀಯ ಪ್ರಸಾದವನ್ನು ಮನಸು ಕರಣಂಗಳು ಮತ್ತು ಕಾಯ, ವಾಚಾ, ಮಾನಸಿಕ, ಕ್ರಿಯಾ ಸಂಗತವಾಗಿ ಸಾವಧಾನ ಮತ್ತು ಸುವಿವೇಕದಿ ಅರ್ಪಿಸಿ ತತ್ಪ್ರಸಾದವನ್ನು ಭೋಗಿಸಿದಲ್ಲಿ ಬಳಿ ಕಾಸ್ಥಲ ಸಿದ್ಧಿಯಾಗಿಪ್ಪುದು. ಅದಕ್ಕೆ ಎಲ್ಲ ಇಂದ್ರಿಯಂಗಳನ್ನು ತನ್ನ ಹತೋಟಿಯಲ್ಲಿರಿಸಿಕೊಂಡು ಪ್ರಸಾದವನ್ನು ಸ್ವೀಕರಿಸುವಲ್ಲಿ ಶಿವಧ್ಯಾನ ಶಿವಶರಣ ರನ್ನು ನೆನೆಯತ್ತಿರಬೇಕು. ಅಂದಾಗ ಪ್ರಸಾದ ಸಿದ್ಧಿಯಾಗುವುದು. ಸಮಸ್ತರೂ ಪ್ರಸಾದದ ಬಗ್ಗೆ ಭಕ್ತಿ, ಶ್ರದ್ಧೆಯಿಂದ ನಡೆದು ಪ್ರಸಾದವನ್ನು ತೆಗೆದುಕೊಳ್ಳಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net