ವಿಲಾಸಿ ಜೀವನದ ಆಸೆಪಟ್ಟರೆ ನೆಮ್ಮದಿ ಸಿಗದು

21bdvt1
ಭದ್ರಾವತಿಯ ಸಿದ್ದಾರೂಢ ಆಶ್ರಮದಲ್ಲಿ ಏರ್ಪಡಿಸಿದ್ದ ಶ್ರಾವಣಮಾಸ ಕಾರ್ಯಕ್ರಮವನ್ನು ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸಿದರು. ಶ್ರೀ ಶಿವಲಿಂಗಾನಂದ ಸ್ವಾಮೀಜಿ, ಶ್ರೀ ಸಿದ್ದಲಿಂಗ ಸ್ವಾಮೀಜಿ, ಶ್ರೀ ಬಸವಭೃಂಗೇಶ್ವರ ಸ್ವಾಮೀಜಿ, ಡಾ. ಧನಂಜಯ ಸರ್ಜಿ, ಬಲ್ಕಿಷ್ ಬಾನು, ಕೆ.ಎಸ್.ವಿಜಯಕುಮಾರ್ ಇತರರಿದ್ದರು.
Published on

ಭದ್ರಾವತಿ: ವೈಜ್ಞಾನಿಕ, ಆರ್ಥಿಕವಾಗಿ ಎಲ್ಲ ಕ್ಷೇತ್ರಗಳಲ್ಲಿ ದೇಶ ಮುಂದುವರೆಯಲು ಮೂಲವಾಗಿ ಧರ್ಮ, ಜ್ಞಾನ, ಸಂಸ್ಕಾರ, ಸಂಪ್ರದಾಯ ಅಗತ್ಯ. ಅವು ಉಳಿಯದಿದ್ದರೆ ದೇಶ ಪ್ರಗತಿ ಹೊಂದಲು ಸಾಧ್ಯವಿಲ್ಲ ಎಂದು ಗೋಣಿಬೀಡು ಶೀಲಸಂಪಾದನಾ ಮಠದ ಪೀಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು.

ಸಿದ್ದಾರೂಢ ನಗರದಲ್ಲಿರುವ ಸಿದ್ದಾರೂಢ ಆಶ್ರಮದಲ್ಲಿ ಏರ್ಪಡಿಸಿದ್ದ 35ನೇ ವರ್ಷದ ಶ್ರಾವಣ ಮಾಸದ ಜಗದ್ಗುರು ಶ್ರೀ ಸಿದ್ದಾರೂಢ ಕಥಾಮೃತಾ ಪಾರಾಯಣ ಹಾಗೂ ಪವಿತ್ರ ಶ್ರಾವಣ ಮಾಸದ ಪೌರ್ಣಿಮಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ನಾವೆಲ್ಲರೂ ವೈಭೋಗ, ವಿಲಾಸಿ ಜೀವನ ಬಯಸಿ ಹಣ, ಅಧಿಕಾರದ ಹಿಂದೆ ಹೋಗುತ್ತಿದ್ದೇವೆ. ಧಾರ್ಮಿಕ ಅಚರಣೆಗಳು ಹಾಗೂ ಸತ್ಸಂಗಗಳಿಂದ ಶಾಂತಿ ನೆಮ್ಮದಿ ದೊರೆಯುತ್ತದೆ ಎಂಬ ವಾಸ್ತವ ಸತ್ಯವನ್ನು ಅರಿಯದೆ ಜೀವನ ಅಧೋಗತಿಯತ್ತ ಸಾಗುತ್ತಿದೆ ಎಂದರು.
ಚಿತ್ರದುರ್ಗದ ಶ್ರೀ ಸದ್ಗುರು ಶ್ರೀ ಕಬೀರಾನಂದಾಶ್ರಮದ ಪೀಠಾಧ್ಯಕ್ಷ ಶ್ರೀ ಶಿವಲಿಂಗಾನಂದ ಸ್ವಾಮೀಜಿ ಮಾತನಾಡಿ, ಲೋಕದ ಹಿತ ಬಯಸುವವನು ನಿಜವಾದ ಜನಪ್ರತಿನಿಧಿಯಾಗಲು ಸಾಧ್ಯ. ಅಂಥವರಿಂದ ಸಮಾಜ ಏಳಿಗೆ, ಶ್ರೇಯಸ್ಸು ಕಾಣುತ್ತದೆ ಎಂದರು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ಪ್ರಕೃತಿ ಮುನಿದರೆ, ಮಾನವ ರಾಕ್ಷಸಿ ಪ್ರವೃತ್ತಿ ಹೊಂದಿದರೆ ದೇಶದಲ್ಲಿ ಸಾಕಷ್ಟು ಅನಾಹುತಗಳು ಸಂಭವಿಸುತ್ತವೆ. ಇನ್ನಾದರೂ ಮಾನವ ರಾಕ್ಷಸಿ ಪ್ರವೃತ್ತಿ ತೊರೆದು ಪ್ರಕೃತಿಯನ್ನು ಪೂಜಿಸಿ ಮನುಷ್ಯನಾಗಿ ಬದುಕುವುದನ್ನು ಕಲಿಯಬೇಕು. ಇಲ್ಲದಿದ್ದರೆ ಭವಿಷ್ಯದಲ್ಲಿ ಬಹಳಷ್ಟು ಕಷ್ಟ ಅನುಭವಿಸಬೇಕಾಗುತ್ತದೆ ಎಂದು ಹೇಳಿದರು.

ಸನ್ಮಾರ್ಗದಲ್ಲಿ ಬದುಕು ನಡೆಸಲು ಶ್ರಾವಣ ಮಾಸದಲ್ಲಿ ಮಠ ಮಂದಿರಗಳಲ್ಲಿ ನಡೆಯುವ ಧಾರ್ಮಿಕ, ಆಧ್ಯಾತ್ಮಿಕ ಸಂಗತಿಗಳ ಶ್ರವಣ ಮಾಡಬೇಕು. ಗುರುಗಳ ಮಾರ್ಗದರ್ಶನದಲ್ಲಿ ಜೀವನ ಸಾಗಿಸಬೇಕು.ಬಿ.ವೈ.ರಾಘವೇಂದ್ರಸಂಸದ

ಸಂಸದ ಬಿ.ವೈ.ರಾಘವೇಂದ್ರ, ಎಂಎಲ್‌ಸಿಗಳಾದ ಬಲ್ಕೀಶ್ ಬಾನು, ಡಾ. ಧನಂಜಯ ಸರ್ಜಿ ಅವರನ್ನು ಸನ್ಮಾನಿಸಲಾಯಿತು. ತುಮಕೂರು ಶ್ರೀ ಸಿದ್ದಾರೂಢ ಆಶ್ರಮದ ಶ್ರೀ ಬಸವಭೃಂಗೇಶ್ವರ ಸ್ವಾಮೀಜಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಕೆ.ಎಸ್.ವಿಜಯ್‌ಕುಮಾರ್, ಬಿ.ಕೆ.ಜಗನ್ನಾಥ್, ಬಿ.ಜಿ.ಹಿರೇಮಠ್, ಬಿ.ದಿವಾಕರ ಶೆಟ್ಟಿ, ಜಿ.ಧರ್ಮಪ್ರಸಾದ್, ತಿಪ್ಪೇಸ್ವಾಮಿ, ಮಂಜುನಾಥ್, ಎಚ್.ಎಲ್.ಷಡಕ್ಷರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net