ಇದು ಬಂಪರ್ ಆಫರ್​..!; ಮೊಬೈಲ್ ಖರೀದಿಸಿದರೆ ಎರಡು ಕೆಜಿ ಟೊಮ್ಯಾಟೊ ಉಚಿತ..

mobile tometo
Published on

ಮಧ್ಯಪ್ರದೇಶ​​: ದೇಶಾದ್ಯಂತ ಟೊಮ್ಯಾಟೊ ಬೆಲೆ ದಿನದಿಂದ ದಿನಕ್ಕೆ ಏರುತ್ತಿದೆ. ಟೊಮ್ಯಾಟೊ ಕೆಜಿಗೆ 150 ರೂ. ದಾಟಿದೆ. ಆದರೆ ಇಲ್ಲೊಂದು ಮೊಬೈಲ್ ಅಂಗಡಿಯ ಮಾಲೀಕರು ಸ್ಟಾರ್ಮ್ ಫೋನ್ ಖರೀದಿಸಿದರೆ ಎರಡು ಕಿಲೋ ಟೊಮ್ಯಾಟೊವನ್ನು ಉಚಿತವಾಗಿ ನೀಡುತ್ತಿದ್ದಾರೆ.

ಮಧ್ಯಪ್ರದೇಶ ರಾಜ್ಯದ ಅಶೋಕ್ ನಗರದ ಮೊಬೈಲ್ ಅಂಗಡಿ ಮಾಲೀಕರೊಬ್ಬರು ಟ್ರೆಂಡಿಂಗ್ ಆಗಿರುವ ಟೊಮ್ಯಾಟೊವನ್ನು ತಮ್ಮ ವ್ಯಾಪಾರದ ಪರವಾಗಿ ತಿರುಗಿಸಿದ್ದಾರೆ. ಮೊಬೈಲ್ ಅಂಗಡಿಯೊಂದರ ಮ್ಯಾನೇಜರ್ ಅಶೋಕ್ ಅಗರ್ವಾಲ್ ತಮ್ಮ ಅಂಗಡಿಯಿಂದ ಸ್ಮಾರ್ಟ್ ಫೋನ್ ಖರೀದಿಸಿದರೆ ಎರಡು ಕಿಲೋ ಟೊಮ್ಯಾಟೊ ಉಚಿತವಾಗಿ ನೀಡುವುದಾಗಿ ಘೋಷಿಸಿದ್ದಾರೆ. ಈ ಆಫರ್​​ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಜ್ಯ ಮಾತ್ರವಲ್ಲದೆ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ.

ಅಶೋಕ್ ಅಗರ್ವಾಲ್ ಘೋಷಿಸಿದ ಆಫರ್ ಗಮನಾರ್ಹ ಪ್ರತಿಕ್ರಿಯೆಯನ್ನು ಪಪಡೆಯುತ್ತಿವೆ. ಹಲವರು ಮೊಬೈಲ್ ಖರೀದಿಸಿ ಎರಡು ಕಿಲೋ ಟೊಮೆಟೊವನ್ನು ಉಚಿತವಾಗಿ ತೆಗೆದುಕೊಂಡು ಹೋದರು.

Tomato Crop

ಈ ಕುರಿತು ಅಂಗಡಿ ಮಾಲೀಕರು ಮಾತನಾಡಿ, ಈ ಕೊಡುಗೆಯಿಂದ ಮೊಬೈಲ್ ಮಾರಾಟ ಹೆಚ್ಚಾಗಿದೆ. ಮೊಬೈಲ್ ಮಾರಾಟ ಎಷ್ಟೇ ಹೆಚ್ಚಾದರೂ ಅಶೋಕ್ ಅಗರ್ವಾಲ್ ದೇಶಾದ್ಯಂತ ಮನ್ನಣೆ ಗಳಿಸಿದ್ದಾರೆ. ಅಶೋಕ್ ಅವರ ಆಫರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತಮಾಷೆಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net