ಕುಡಿಯಲು ನೀರು ಕೇಳಿದರೆ ಹೆಂಡ ಕೊಡುವ ಸರ್ಕಾರ; ಬಿಜೆಪಿ ವಾಗ್ದಾಳಿ

Cauvery crisis' Cong govt failure condemned by BJP
Published on

ಬೆಂಗಳೂರು: ಸಂಭಾವ್ಯ ಕುಡಿಯುವ ನೀರಿನ ಸಂಕಷ್ಟ ತಪ್ಪಿಸಲು ತಮಿಳುನಾಡಿಗೆ ನೀರು ಹರಿಸುವುದು ನಿಲ್ಲಿಸಲು ಸಾಧ್ಯವಿಲ್ಲವೇಕೆ ? ಎಂದು ಕೇಳಿದರೆ, ರಾಜ್ಯ ಸರ್ಕಾರ ಹೆಂಡ ಕೊಡಲು ಮುಂದಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ವಾಗ್ದಾಳಿ ಮಾಡಿದರು.

ಕಾವೇರಿ ನೀರಿನ ಅನ್ಯಾಯ, ರಾಜ್ಯ ಸರ್ಕಾರದ ವೈಫಲ್ಯ ಖಂಡಿಸಿ ವಿವಿಧ ಸಂಘಟನೆಗಳ ಒಕ್ಕೂಟ ಕರೆ ನೀಡಿದ್ದ ಬೆಂಗಳೂರು ಬಂದ್‌ಗೆ ಬೆಂಬಲಿಸಿ, ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿತು.

ಈ ಸಂದರ್ಭದಲ್ಲಿ ಮಾತನಾಡಿದ ಎನ್.ರವಿಕುಮಾರ್, ಕಾವೇರಿ ನೀರಿಗಾಗಿ ತಮಿಳುನಾಡು ಸುಪ್ರೀಂ ಕೋರ್ಟ್ ಕದ ತಟ್ಟಿದ ಬೆನ್ನಲ್ಲೇ ರಾಜ್ಯ ಸರ್ಕಾರ ಮಧ್ಯಂತರ ಅರ್ಜಿ ಸಲ್ಲಿಸಿ, ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಿದ ಅಂಕಿ-ಅಂಶಗಳ ಸಹಿತ ವಸ್ತುಸ್ಥಿತಿ ಮನವರಿಕೆ ಮಾಡಿಕೊಡಬೇಕಿತ್ತು.

ರಾಜ್ಯದ ಕಾವೇರಿ ಜಲಾಯನದ ಪ್ರದೇಶದ ಬೆಳೆಗಳು ನೀರಿಲ್ಲದೆ ಒಣಗಿ ಹೋಗಿವೆ. ಕುಡಿಯಲು ನೀರು ಬೇಕೆಂದು ನಾವು ಕೇಳುತ್ತಿದ್ದೇವೆ. ಆದರೆ ತಮಿಳುನಾಡು ಅಕ್ರಮವಾಗಿ ಬೆಳೆದ ಕುರುವೈ ಬೆಳೆಗೆ ನೀರಿಗಾಗಿ ಮೊಂಡು ವಾದ ಮಾಡುತ್ತಿದೆ ಎಂದು ತಿಳಿಸುವಲ್ಲಿಯೂ ರಾಜ್ಯ ಸರ್ಕಾರ ವಿಲವಾಗಿದೆ ಎಂದು ಟೀಕಿಸಿದರು.

ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸುವ ಬದಲು ಅಫಿಡವಿಟ್ ಸಲ್ಲಿಸಿತು. ಆದೇಶ ಬರುವುದಕ್ಕೆ ಮುನ್ನ ತಮಿಳುನಾಡಿಗೆ ನೀರು ಬಿಟ್ಟಿತು. ಸರ್ವಪಕ್ಷ ಸಭೆಯಲ್ಲಿ ನೀರು ಬಿಡುವುದಿಲ್ಲ ಎಂದು ಹೇಳಿದ್ದಕ್ಕೆ ವಿರುದ್ಧವಾಗಿ ನಡೆದುಕೊಂಡಿತು ಎಂದು ಸರ್ಕಾರದ ಎಡವಟ್ಟುಗಳನ್ನು ಎನ್.ರವಿಕುಮಾರ್ ಪಟ್ಟಿ ಮಾಡಿದರು.

ಪೊಲೀಸ್ ಠಾಣೆ ಮುಂದೆ ಧರಣಿ

ಕಾವೇರಿ ನೀರಿಗಾಗಿ ಬಂದ್ ಚಳವಳಿಯಲ್ಲಿ ಪಾಲ್ಗೊಂಡಿದ್ದ ಜಯನಗರ ಶಾಸಕ ಸಿ.ಕೆ.ರಾಮಮೂರ್ತಿ ವಶ ಖಂಡಿಸಿ, ಜಯನಗರ ಪೊಲೀಸ್ ಠಾಣೆ ಮುಂದೆ ಬಿಜೆಪಿ ಶಾಸಕರು ದಿಢೀರ್ ಧರಣಿ ನಡೆಸಿದರು.

ಅಪರಿಚಿತರು ಹೋಟೆಲ್‌ಗೆ ಕಲ್ಲು ತೂರಾಟ ಮಾಡಿದ್ದನ್ನು ನೆಪ ಮಾಡಿಕೊಂಡು ಅಕ್ರಮವಾಗಿ ವಶಕ್ಕೆ ಪಡೆದು ಕೂಡಿ ಹಾಕಿದ್ದಾರೆ ಎಂದು ಧರಣಿನಿರತ ಎನ್.ರವಿಕುಮಾರ್, ರವಿಸುಬ್ರಮಣ್ಯ ಆಕ್ರೋಶ ವ್ಯಕ್ತಪಡಿಸಿದರು.

ಕಾವೇರಿ ನೀರಿಗಾಗಿ ಹೋರಾಟ ಮಾಡುತ್ತಿದ್ದೇವೆ. ಹೋಟೆಲ್‌ನಲ್ಲಿ ಗಲಾಟೆ ಮಾಡಿದವರ ವಿರುದ್ಧ ಕ್ರಮಕ್ಕೆ ಅಭ್ಯಂತರವಿಲ್ಲ. ಸಿಸಿಟಿವಿ ೂಟೇಜ್ ಗಮನಿಸಿದರೆ ಪೊಲೀಸರಿಗೆ ಸತ್ಯಾಂಶ ತಿಳಿಯಲಿದೆ, ಅನಗತ್ಯವಾಗಿ ಶಾಸಕರಿಗೆ ಕಿರುಕುಳ ನೀಡಿದ್ದು ಸರಿಯಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.

ಪೊಲೀಸರ ವಿರುದ್ಧ ೋಷಣೆ ಮೊಳಗಿಸಿ, ಪೊಲೀಸ್ ಆಯುಕ್ತರು ಸ್ಥಳಕ್ಕೆ ಬರಬೇಕು ಎಂದು ಒತ್ತಾಯಿಸಿದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಡಿಸಿಪಿ ರಾಹುಲ್‌ಕುಮಾರ್ ಶಹಪುರವಾಡ ಸಿಬ್ಬಂದಿಯಿಂದ ಮಾಹಿತಿ ಪಡೆದರು.

ವಶದಲ್ಲಿದ್ದ ಶಾಸಕ ಸಿ.ಕೆ.ರಾಮಮೂರ್ತಿ ಅವರನ್ನು ಬಿಡುಗಡೆ ಮಾಡಿದ ನಂತರ ಬಿಜೆಪಿಯವರು ಧರಣಿ ಹಿಂಪಡೆದರು. ನಿಮ್ ಕಡೆಯವರು ಗಲಾಟೆ ಮಾಡಿದ್ದಾರೆ ಎಂದು ಹೇಳಿ ಪೊಲೀಸರು ಬಲವಂತವಾಗಿ ಕರೆದೊಯ್ದು ಕಿರುಕುಳ ನೀಡಿದರು ಎಂದು ಸಿ.ಕೆ.ರಾಮಮೂರ್ತಿ ಆರೋಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net