ನೆಮ್ಮದಿಯಿದ್ದರೆ ಮಾನಸಿಕ ಆರೋಗ್ಯ

hos mental health
ಹೊಸನಗರದಲ್ಲಿ ಆಯೋಜಿಸಿದ್ದ ಹಿರಿಯ ನಾಗರಿಕರ ದಿನಾಚರಣೆಯಲ್ಲಿ ನ್ಯಾಯಾಧೀಶ ಮಾರುತಿ ಶಿಂಧೆ, ಡಾ. ಸುರೇಶ್, ಡಾ. ಜಿ.ಬಿ.ಲಿಂಗರಾಜ್ ಇತರರಿದ್ದರು.
Published on

ಹೊಸನಗರ: ಉತ್ತಮ ಜೀವನಕ್ಕೆ ದೈಹಿಕ ಸದೃಢತೆ ಜತೆಗೆ ಮಾನಸಿಕ ಆರೋಗ್ಯವೂ ಅಷ್ಟೇ ಮುಖ್ಯ. ಪರಸ್ಪರ ಪ್ರೀತಿಸುವ ಗುಣ ಹಾಗೂ ಇನ್ನೊಬ್ಬರ ಕಷ್ಟ-ಸುಖಗಳಿಗೆ ಮಿಡಿಯುವ ಹೃದಯವಂತಿಕೆ ನಮ್ಮ ಆರೋಗ್ಯವನ್ನು ಕಾಪಾಡುತ್ತದೆ ಎಂದು ಜೆಎಂಎಫ್‌ಸಿ ನ್ಯಾಯಾಲಯದ ಪ್ರಧಾನ ವ್ಯವಹಾರ ನ್ಯಾಯಾಧೀಶ ಮಾರುತಿ ಶಿಂಧೆ ಹೇಳಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವ ಮಾನಸಿಕ ಆರೋಗ್ಯ ಹಾಗೂ ಹಿರಿಯ ನಾಗರಿಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮನೋವ್ಯಾಧಿಯಿಂದ ಬಳಲುತ್ತಿರುವವರ ಮಾನಸಿಕ ಒತ್ತಡ ಕಡಿಮೆ ಮಾಡಿ ಆತ್ಮಸ್ಥೈರ್ಯ ತುಂಬಬೇಕು. ಮಾನಸಿಕ ಆರೋಗ್ಯವೇ ನಿಜವಾದ ಅರ್ಥಪೂರ್ಣ ಬದುಕು ಎಂದರು.

ಶಾರೀರಿಕ ಚಿಕಿತ್ಸೆ ಜತೆಗೆ ಮಾನಸಿಕ ಚಿಕಿತ್ಸೆಯ ಸೂಕ್ಷ್ಮ ಮತ್ತು ಆರೋಗ್ಯದ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸಲು ಮತ್ತು ಮಾನಸಿಕ ಆರೋಗ್ಯಕ್ಕೆ ಬೆಂಬಲ ನೀಡಲು ಈ ದಿನ ಮೀಸಲಾಗಿರುತ್ತದೆ ಎಂದು ತಿಳಿಸಿದರು.

ತಾಲೂಕು ಆರೋಗ್ಯ ಅಧಿಕಾರಿ ಡಾ. ಸುರೇಶ್, ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಜಿ.ಬಿ.ಲಿಂಗರಾಜ್ ಮಕ್ಕಳ ತಜ್ಞ ಡಾ. ಶಾಂತರಾಜ್, ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಚ್.ಚಂದ್ರಪ್ಪ, ಸದಸ್ಯ ಟಿ.ವೈ.ರಾಮಪ್ಪ, ತಾಪಂ ಕಚೇರಿ ಸಹಾಯಕ ನಿರ್ದೇಶಕ ಪವನ್‌ಕುಮಾರ್, ಆರೋಗ್ಯ ಶಿಕ್ಷಣಾಧಿಕಾರಿ ಕರಿಬಸಮ್ಮ, ರಾಜೇಶ್ವರಿ, ಶ್ರೀನಿವಾಸ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net