ಪಕ್ಷಕ್ಕೆ ನನ್ನ ಅಗತ್ಯವಿಲ್ಲದಿದ್ದರೆ ಬೇರೆ ಆಯ್ಕೆಗಳಿವೆ: ಕಾಂಗ್ರೆಸ್​ಗೆ ಎಚ್ಚರಿಕೆ ಕೊಟ್ರಾ ಸಂಸದ Shashi Tharoor ?

dk - 2025-02-23T200852.686
Published on

Shashi Tharoor:ಪ್ರಧಾನಿ ಮೋದಿ ಮತ್ತು ಕೇರಳದ ಪಿರಾಯಿ ವಿಜಯನ್​ ನೇತೃತ್ವದ ಸರ್ಕಾರಗಳನ್ನು ಹೊಗಳುವ ಮೂಲಕ ತಮ್ಮ ಸ್ವ-ಪಕ್ಷದವರಿಂದಲೇ ಟೀಕೆಗೆ ಗುರಿಯಾದ ಬೆನ್ನಲ್ಲೇ, ಕಾಂಗ್ರೆಸ್​ನ ಹಿರಿಯ ಮುಖಂಡ ಸಂಸದ ಶಶಿ ತರೂರ್​ ಮತ್ತೊಂದು ಹೇಳಿಕೆ ನೀಡುವ ಮೂಲಕ ತಮ್ಮ ಪಕ್ಷಕ್ಕೆ(ಕಾಂಗ್ರೆಸ್​) ಎಚ್ಚರಿಕೆ ನೀಡಿದ್ದಾರೆ.

ಖಾಸಗಿ ಸುದ್ದಿವಾಹಿನಿವೊಂದು ಭಾನುವಾರ ನಡೆಸಿದ ಪಾಡ್​ಕ್ಯಾಸ್ಟ್ನಲ್ಲಿ ಮಾತನಾಡಿದ ಸಂಸದ ಶಶಿ ತರೂರ್​, '' ಪಕ್ಷಕ್ಕೆ ನನ್ನ ಸೇವೆಗಳ ಅವಶ್ಯಕತೆ ಇಲ್ಲದಿದ್ದರೆ ಬೇರೆ ಆಯ್ಕೆಗಳಿವೆ ಎಂದು ಕಾಂಗ್ರೆಸ್​ಗೆ ಪರೋಕ್ಷವಾಗಿ ಎಚ್ಚರಿಸಿದ್ದಾರೆ''.

ಮಾತು ಮುಂದುವರೆಸಿದ ಶಶಿ ತರೂರ್​, ಪಕ್ಷ ಬದಲಾಯಿಸುವ ವದಂತಿಗಳನ್ನು ನಿರಾಕರಿಸಿದರು. ಅಭಿಪ್ರಾಯ ಭಿನ್ನಾಭಿಪ್ರಾಯಗಳಿದ್ದರೂ ಕಾಂಗ್ರೆಸ್ ತೊರೆಯುವ ಬಗ್ಗೆ ಯೋಚಿಸುತ್ತಿಲ್ಲ ಎಂದು ಹೇಳಿದರು.

ಈ ಮೊದಲು ಮಾತನಾಡಿದ್ದ ಶಶಿ ತರೂರ್​, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಭೇಟಿಗೆ ಕೇರಳ ಸರ್ಕಾರದ ನೀತಿಗಳನ್ನು ಮತ್ತು ನಂತರ ಪ್ರಧಾನಿ ನರೇಂದ್ರ ಮೋದಿಯವರ ನೀತಿಗಳನ್ನು ಹೊಗಳಿದ್ದರು. ಈ ಹೇಳಿಕೆಗಳು ಕಾಂಗ್ರೆಸ್​ ವಲಯದಲ್ಲಿ ಮುಜುಗರ ತರಿಸಿದ್ದು, ತರೂರ್ ಮೇಲೆ ಸ್ವಪಕ್ಷದವರಿಂದಲೇ ಟೀಕೆಗೆ ಗುರಿಯಾಗಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net