ಷೇರುದಾರರು ಹೆಚ್ಚಳವಾದಲ್ಲಿ ಸಂಘ ಬೆಳವಣಿಗೆ

gangamatha
ಶಿವಮೊಗ್ಗದ ಗಂಗಾಪರಮೇಶ್ವರಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ಎ.ಹಾಲೇಶಪ್ಪ, ಆರ್.ಅವಿನ್, ಡಿ.ಬಿ.ಕೆಂಚಪ್ಪ, ಎಸ್.ಬಿ.ಅಶೋಕ್‌ಕುಮಾರ್ ಇತರರಿದ್ದರು.
Published on

ಶಿವಮೊಗ್ಗ: ಸಮುದಾಯದ ಜನಸಂಖ್ಯೆ ಹೆಚ್ಚಿದ್ದರೂ ಸಂಘಟನೆ ಕೊರತೆಯಿದೆ. ಸಹಕಾರ ಸಂಘಗಳ ಬೆಳವಣಿಗೆಗೆ ಷೇರುದಾರರ ಸಂಖ್ಯೆ ಹೆಚ್ಚಳವಾಗುವುದು ಅವಶ್ಯ ಎಂದು ಅಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಆರ್.ಅವಿನ್ ಹೇಳಿದರು.

ಗಂಗಾಪರಮೇಶ್ವರಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿ, ಸಹಕಾರ ಸಂಘದಲ್ಲಿ ಪಡೆದ ಸಾಲವನ್ನು ತಪ್ಪದೆ ಮರುಪಾವತಿ ಮಾಡಬೇಕು. ಉತ್ತಮ ಆರ್ಥಿಕ ಪ್ರಗತಿ ಸಾಧಿಸಿದರೆ ಸಹಕಾರ ಸಂಘ ಬ್ಯಾಂಕ್ ಆಗಿ ಪರಿವರ್ತನೆಯಾಗಲಿದೆ ಎಂದು ತಿಳಿಸಿದರು.

ಕೆಎಸ್‌ಆರ್‌ಟಿಸಿ ಡಿಪೋ ಮ್ಯಾನೇಜರ್ ಎಂ.ರಾಮಚಂದ್ರಪ್ಪ ಮಾತನಾಡಿ, ಸಮಾಜವು ಶೈಕ್ಷಣಿಕ, ಆರ್ಥಿಕವಾಗಿ ಸಾಧನೆ ಮಾಡಲು ಎಲ್ಲರ ಸಹಕಾರ ಅವಶ್ಯ. ಎಲ್ಲರೂ ಸಂಘಟಿತರಾಗಬೇಕು. ಸಮಾಜದ ಕಟ್ಟ ಕಡೆ ವ್ಯಕ್ತಿಗೂ ಸಹಕಾರ ಸಂಘದ ಪ್ರಯೋಜನ ದೊರೆಯಬೇಕು ಎಂದರು.

ವಿವಿಧ ಕ್ಷೇತ್ರದ ಸಾಧಕರಾದ ಆರುಂಡಿ ಶ್ರೀನಿವಾಸ್, ಎಸ್.ಸಿ.ವಿಶ್ವನಾಥ, ಜೆ.ವಿಶ್ವನಾಥ್ ಅವರನ್ನು ಸನ್ಮಾನಿಸಲಾಯಿತು. ಸಹಕಾರ ಸಂಘದ ಅಧ್ಯಕ್ಷ ಎ.ಹಾಲೇಶಪ್ಪ, ಚಿಕ್ಕಮಗಳೂರು ನಗರಸಭೆ ಇಂಜಿನಿಯರ್ ಎಂ.ವಿ.ಲೋಕೇಶ್, ಗಂಗಾಮತ ಸಮಾಜದ ಜಿಲ್ಲಾಧ್ಯಕ್ಷ ಡಿ.ಬಿ.ಕೆಂಚಪ್ಪ, ಉಪಾಧ್ಯಕ್ಷ ಎಸ್.ಬಿ.ಅಶೋಕ್‌ಕುಮಾರ್, ಮಹಿಳಾ ಸಂಘದ ಅಧ್ಯಕ್ಷೆ ರೂಪಾ ಹೇಮಂತರಾಜು, ನಿರ್ದೇಶಕರಾದ ಪಿ.ನಾಗೇಶ್, ಟಿ.ಎಸ್.ಮಂಜುನಾಥ್, ಲೆಕ್ಕ ಪರಿಶೋಧಕ ಆರ್.ಜನಾರ್ಧನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net