

Kharge: ಮಲ್ಲಿಕಾರ್ಜುನ್ ಖರ್ಗೆ ಅವರೇ ಕಾಂಗ್ರೆಸ್ನಲ್ಲಿ ನೀವು ಹೈಕಮಾಂಡ್ ಅಲ್ಲದಿದ್ದರೆ, ಮತ್ಯಾರು..? ಸೋನಿಯಾ.. ರಾಹುಲ್ ಅಥವಾ ಪ್ರಿಯಾಂಕಗಾಂಧಿಯೇ ಎಂದು ವಿಪಕ್ಷ ನಾಯಕ ಆರ್.ಅಶೋಕ ಪ್ರಶ್ನಿಸಿದ್ದಾರೆ.
ಕರ್ನಾಟಕ ಸಿಎಂ ಬದಲಾವಣೆ ಬಗ್ಗೆ ಸುದ್ದಿಗಾರರ ಜತೆ ಮಾತನಾಡಿರುವ ಮಲ್ಲಿಕಾರ್ಜುನ್ ಖರ್ಗೆ, ''ಸಿಎಂ ಬದಲಾವಣೆ ಹೈಕಮಾಂಡ್ಗೆ ಬಿಟ್ಟಿದ್ದು'' ಎಂದು ಹೇಳಿದ್ದಾರೆ. ಹಾಗಾದ್ರೆ ನೀವು ಹೈಕಮಾಂಡ್ ಅಲ್ಲದಿದ್ದರೆ, ಮತ್ಯಾರು? ಎಂದು ಅಶೋಕ ಕಿಡಿಕಾರಿದ್ದಾರೆ.
ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡರುವ ಅಶೋಕ,'' ಕಾಂಗ್ರೆಸ್ ನಮಗೆ ಮತ್ತೊಬ್ಬ 'ಆಕಸ್ಮಿಕ' ನಾಯಕನನ್ನು ಉಡುಗೊರೆಯಾಗಿ ನೀಡಿದೆ ಎಂದು ತೋರುತ್ತದೆ. ಈ ಮೊದಲು ಪ್ರಧಾನಿಯಾಗಿದ್ದ ಡಾ. ಮನಮೋಹನ್ ಸಿಂಗ್ ಅವರಿಗೆ ಅಧಿಕಾರವಿತ್ತು. ಆದರೆ, ಅವರಿಗೆ ಅಧಿಕಾರವಿರಲಿಲ್ಲ, ಇದೀಗ "ಹೈಕಮಾಂಡ್" ಏನು ಯೋಚಿಸುತ್ತಿದೆ ಎಂದು ತನಗೆ ತಿಳಿದಿಲ್ಲ ಎಂದು ಎಐಸಿಸಿ ಆಕಸ್ಮಿಕ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಹೆಮ್ಮೆಯಿಂದ ಒಪ್ಪಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಹೈಕಮಾಂಡ್ ಅನ್ನೋದು ಯಾರು? ಅದು ಒಂದೇ ಹೆಸರಿನ ಅದೃಶ್ಯ ಸಮಿತಿಯೇ? ಎಂದಿರುವ ಅಶೋಕ, ಅದೇ ಸ್ಕ್ರಿಪ್ಟ್, ಹೊಸ ನಟ. ಇನ್ನೂ ಗಾಂಧಿ ಕುಟುಂಬದಿಂದ ನಿರ್ದೇಶಿಸಲ್ಪಟ್ಟಿದೆ ಎಂದು ಕಿಡಿ ಕಾರಿದ್ದಾರೆ.