ಈ ವಿಚಾರದಲ್ಲಿ ಪವನ್​ ಕಲ್ಯಾಣ್​ಗೆ ಇಷ್ಟವಿಲ್ಲ ಅಂದ್ರೆ ಸುಮ್ಮನೆ ಎದ್ದು ಹೋಗ್ತಾರೆ! ಏನೂ ಹೇಳಲ್ಲ: ನಾಗ ಬಾಬು | Pawan Kalyan

ವಿಜಯವಾಣಿ - 2025-03-08T180347.099
Published on

ಆಂಧ್ರಪ್ರದೇಶ: ತೆಲುಗು ಚಿತ್ರರಂಗದ ಪವರ್​ಸ್ಟಾರ್​, ಆಂಧ್ರ ಡಿಸಿಎಂ ಪವನ್​ ಕಲ್ಯಾಣ್​ (Pawan Kalyan) ಅವರು ಪ್ರಸ್ತುತ ತಮ್ಮ ಸಿನಿಮಾ ಹಾಗೂ ರಾಜಕೀಯ ಕೆಲಸಗಳಲ್ಲಿ ಸಕ್ರಿಯವಾಗಿದ್ದಾರೆ. ಮಹಿಳಾ ದಿನದ ಅಂಗವಾಗಿ ಪವನ್​ ಬಾಲ್ಯದಲ್ಲಿ ತಮ್ಮ ತಾಯಿಯೊಂದಿಗೆ ಕಳೆದ ಕ್ಷಣಗಳನ್ನು ನಟ, ರಾಜಕಾರಣಿ ನಾಗ ಬಾಬು ಮತ್ತು ಮೆಗಾಸ್ಟಾರ್​ ಚಿರಂಜೀವಿ ವಿಡಿಯೋ ಮೂಲಕ ಮೆಲುಕು ಹಾಕಿದ್ದಾರೆ.

ಇಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ವಿಶೇಷ ವಿಡಿಯೋದಲ್ಲಿ ಮಾತನಾಡಿದ ಮೆಗಾಸ್ಟಾರ್ ಚಿರಂಜೀವಿ ಮತ್ತು ನಾಗ ಬಾಬು​, ಬಾಲ್ಯದಲ್ಲಿ ಅಮ್ಮ ಅಡುಗೆ ಮಾಡಿದ ಕ್ಷಣಗಳು, ನಾವೆಲ್ಲರೂ ಅಮ್ಮನೊಂದಿಗೆ ಕಳೆದ ಅಮೂಲ್ಯವಾದ ನೆನಪುಗಳು ಮರೆಯಲಾಗದು ಎಂದು ಸಂತಸ ಹಂಚಿಕೊಂಡಿದ್ದಾರೆ.

ಪವನ್​ ಟೇಬಲ್‌ನಲ್ಲಿ ಕುಳಿತಾಗ ತನಗೆ ಊಟ ರುಚಿಕರವಾಗಿಲ್ಲ ಅಥವಾ ಇಷ್ಟವಾಗದಿದ್ದರೆ ಮೌನದಿಂದಲೇ ಅಲ್ಲಿಂದ ಎದ್ದು ಹೋಗ್ತಾರೆ. ಪವನ್ ಕಲ್ಯಾಣ್ ಆಹಾರದ ಬಗ್ಗೆ ಎಂದಿಗೂ ಗಲಾಟೆ ಮಾಡುತ್ತಿರಲಿಲ್ಲ. ಆದರೆ, ತಿನ್ನುವ ಆಹಾರ ಸಪ್ಪೆಯಾಗಿದ್ದರೆ ಅಥವಾ ರುಚಿಯಿಲ್ಲ ಅನಿಸಿದರೆ ಯಾರಿಗೂ ದೂರದೆ, ಸುಮ್ಮನೆ ಎದ್ದು ಹೋಗುತ್ತಿದ್ದರು ಎಂದು ನಗುತ್ತಲೇ ಹೇಳಿದ್ದಾರೆ.

ಪವನ್ ಕಲ್ಯಾಣ್ ತಮ್ಮ ಬಾಲ್ಯದ ದಿನಗಳಲ್ಲಿ ನಮ್ಮೊಂದಿಗೆ ಹೆಚ್ಚಾಗಿ ಸಮಯ ಕಳೆಯುತ್ತಿದ್ದರು. ನನ್ನ ತಾಯಿ ಯಾವಾಗಲೂ ಅವರಿಗೆ ವಿಶೇಷ ಅಡುಗೆಯನ್ನು ಮಾಡಿಕೊಡುತ್ತಿದ್ದರು. ಪವನ್ ಕಲ್ಯಾಣ್​ ಎಲ್ಲಿದ್ದಾರೆ ಎಂಬ ವಿಷಯ ಯಾರಿಗೆ ತಿಳಿಯುತ್ತಿತ್ತೋ ಇಲ್ಲವೋ ಆದರೆ, ನಮ್ಮ ಅಮ್ಮನಿಗೆ ಮಾತ್ರ ಪವನ್​ ಎಲ್ಲಿದ್ದಾರೆ ಎಂಬುದು ಚೆನ್ನಾಗಿ ಗೊತ್ತಿರುತ್ತಿತ್ತು ಎಂದು ಬಾಬು ಮತ್ತು ಚಿರಂಜೀವಿ ನಗೆಚಟಾಕಿ ಹಾರಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net