ಸ್ವಾಮೀಜಿಗೆ ಇಬ್ರಾಹಿಂ ಸಲಹೆ

ex min cm ibrahim
Published on

ಬೆಂಗಳೂರು: ಸ್ವಾಮೀಜಿಯವರೇ, ಬಿಜೆಪಿಯವರು ಹೇಳಿದರು ಎಂದು ಏನೇನೋ ಮಾತಾಡಬೇಡಿ. ಬೇಕಾದರೆ ಮಹದಾಯಿಗಾಗಿ ಹೋರಾಟ ಮಾಡಿ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ಎಂ.ಇಬ್ರಾಹಿಂ ಶ್ರೀ ಚಂದ್ರಶೇಖರ ನಾಥ ಸ್ವಾಮೀಜಿಯವರಿಗೆ ಸಲಹೆ ನೀಡಿದ್ದಾರೆ.

ಮುಸ್ಲಿಮರ ಮತದಾನದ ಹಕ್ಕು ವಾಪಾಸ್ ಪಡೆಯಬೇಕೆಂಬ ಹೇಳಿಕೆ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯವರು ಮೂರು ಸಾವಿರ ವಕ್ಫ್ ನೋಟೀಸ್ ಕೊಟ್ಟಾಗ ಚಂದ್ರಶೇಖರ ನಾಥ ಸ್ವಾಮೀಜಿ ಎಲ್ಲಿದ್ದರು? ಯಾವುದೇ ಸ್ವಾಮೀಜಿ ಏನೇ ಹೇಳಿಕೆ ಕೊಟ್ಟರೂ ಪೀಠಕ್ಕೆ ಧಕ್ಕೆ ಬರದಂತೆ ಮಾತಾಡಬೇಕು. ಸ್ವಾಮೀಜಿಯವರೇ ವೋಟಿನ ಹಕ್ಕು ಕಿತ್ಕೊಳ್ಳಿ ಎಂದರೆ ಹೇಗೆ? ನಮಗೆ ವೋಟಿನ ಹಕ್ಕು ಇಟ್ಕೊಂಡು ಏನು ಸಿಕ್ಕಿದೆ ಎಂದು ಕುಟುಕಿದರು.

ನಮ್ಮನ್ನು ತೋರಿಸಿಯೇ ಬಿಜೆಪಿಯವರು ಇಷ್ಟು ದಿನ ವೋಟ್ ತೆಗೆದುಕೊಂಡಿದ್ದು. ನಾವಿಲ್ಲ ಎಂದರೆ ಬಿಜೆಪಿಯೇ ಇರುವುದಿಲ್ಲ. ನಾವಿರುವುದರಿಂದಲೇ ನಿಮಗ ಗೌರವ. ನಾವಿಲ್ಲದಿದ್ದರೆ ಮೂರುಕಾಸಿನ ಗೌರವ ನಿಮಗೆ ಇರುವುದಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net