

ನವದೆಹಲಿ: ಅರುಣಾಚಲ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿರುವ ಐಎಎಸ್ ಅಧಿಕಾರಿ ರಿಂಕು ದುಗ್ಗಾ ಅವರನ್ನು ಇದೀಗ ಸರ್ಕಾರ ಕಡ್ಡಾಯವಾಗಿ ನಿವೃತ್ತಿಗೊಳಿಸಿದೆ ಎಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ಕಳೆದ ವರ್ಷ ಐಎಎಸ್ ಅಧಿಕಾರಿ ರಿಂಕು ದುಗ್ಗಾ ಮತ್ತು ಆಕೆಯ ಪತಿ ಸಂಜೀವ್ ಖಿರ್ವಾರ್ ತಮ್ಮ ಶ್ವಾನವನ್ನು ವಾಕಿಂಗ್ ಮಾಡಿಸಲು ದೆಹಲಿಯ ತ್ಯಾಗರಾಜ್ ಸ್ಟೇಡಿಯಂನ ಖಾಲಿ ಮಾಡಿಸಿದ್ದರು. ಈ ಆರೋಪದಡಿ ಅವರನ್ನು ದೆಹಲಿಯಿಂದ ವರ್ಗಾವಣೆ ಮಾಡಲಾಗಿತ್ತು.
ಈ ಹಿನ್ನೆಲೆ ಇದೀಗ ರಿಂಕು ದುಗ್ಗಾ ಅವರಿಗೆ ಕಡ್ಡಾಯ ನಿವೃತ್ತಿ ನೀಡಲಾಗಿದೆ ಎಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದು, ಈ ಸಂಬಂಧ ಅಧಿಸೂಚನೆಯನ್ನೂ ಕೂಡ ಹೊರಡಿಸಲಾಗಿದೆ ಎಂದು ಹೇಳಲಾಗಿದೆ.
ರಿಂಕು ದುಗ್ಗಾ ತಮ್ಮ ಸೇವಾ ದಾಖಲೆಯ ಮೌಲ್ಯಮಾಪನದ ನಂತರ ಮೂಲಭೂತ ನಿಯಮಗಳು (ಎಫ್‌ಆರ್) 56 (ಜೆ), ಕೇಂದ್ರ ನಾಗರಿಕ ಸೇವೆಗಳ (ಸಿಸಿಎಸ್) ಪಿಂಚಣಿ ನಿಯಮಗಳು, 1972ರ ನಿಯಮ 48ರ ಅಡಿಯಲ್ಲಿ ಕಡ್ಡಾಯವಾಗಿ ನಿವೃತ್ತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ,(ಏಜೆನ್ಸೀಸ್).