

ತೆಲಂಗಾಣ: ಲಘು ವಿಮಾನವೊಂದು ಪತನಗೊಂಡು ಓರ್ವ ಸಾವನ್ನಪ್ಪಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಮೆದಕ್ನ ತೂಪ್ರಾನ್ ಬಳಿ ವಿಮಾನ ಪತನಗೊಂಡಿದೆ, ತರಬೇತಿ ನಿರತ ವಿಮಾನ ಎನ್ನುವ ಕುರಿತು ಮಾಹಿತಿ ಲಭ್ಯವಾಗಿದೆ. ವಿಮಾನ ಪತನದ ವೇಳೆ ಓರ್ವ ಮೃತಪಟ್ಟಿರುವ ಮಾಹಿತಿ ಲಭ್ಯವಾಗಿದೆ. ದುಂಡಿಗಲ್ ಏರ್ಪೋರ್ಟ್ಗೆ ಸೇರಿದ ತರಬೇತಿ ನಿರತ ವಿಮಾನ ಇದಾಗಿದೆ.
ಬೆಳಗ್ಗೆ 8 ಗಂಟೆ ಸುಮಾರಿಗೆ ಘಟನೆ ನಡೆದಿದೆ, ವಿಮಾನ ಪತನಗೊಂಡಾಗ ಭಾರಿ ಬೆಂಕಿ ಕಾಣಿಸಿಕೊಂಡಿದೆ.
ವಿಮಾನದಲ್ಲಿ ಎಷ್ಟು ಮಂದಿ ಇದ್ದರು ಎಂಬುದು ಸ್ಥಳೀಯರಿಗೆ ಖಚಿತವಾಗಿಲ್ಲ. ಕೆಲವೇ ನಿಮಿಷಗಳಲ್ಲಿ ವಿಮಾನವು ಬೂದಿಯಾಯಿತು. ಸ್ಥಳೀಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಐಎಎಫ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಪೈಲಟ್ ವಿಮಾನದಿಂದ ಹೊರಬಿದ್ದಿದ್ದಾನೆಯೇ ಎಂಬುದು ಪೊಲೀಸರಿಗೆ ಖಚಿತವಾಗಿಲ್ಲ.