

ಹೈದರಾಬಾದ್: ಇನ್ನು ಮುಂದೆ ರಾಜಕೀಯ ಪ್ರೇರಿತ ಕಥಾಹಂದರವಿರುವ ಸಿನಿಮಾಗಳನ್ನು ಮಾಡುವುದಿಲ್ಲ ಎಂದು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಹೇಳಿದ್ದಾರೆ.
ಈ ಹಿಂದೆ ಆಂಧ್ರಪ್ರದೇಶದ ರಾಜಕೀಯದ ಸುತ್ತ ಹೆಣೆದುಕೊಂಡಿರುವ ವಿವಾದಾತ್ಮಕ ವಿಷಯಗಳನ್ನು ಹೊಂದಿರುವ ಹಲವು ಸಿನಿಮಾಗಳನ್ನು ಮಾಡಿ ವರ್ಮಾ ಸುದ್ದಿಯಾಗಿದ್ದರು. ಈಗ ಎಪಿಯಲ್ಲಿ ಹೊಸ ಸರ್ಕಾರ ರಚನೆ ಹಿನ್ನೆಲೆಯಲ್ಲಿ ಅವರ ಬಾಲ ಮುದುಡಿಕೊಂಡಂತಿದೆ. ತಮ್ಮ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ಪತ್ರಕರ್ತರೊಂದಿಗೆ ಮಾತನಾಡಿದರು. ನಾನು ರಾಜಕೀಯದ ಮೇಲೆ ಸಿನಿಮಾ ಮಾಡುವುದನ್ನು ಕೈಬಿಟ್ಟಿದ್ದೇನೆ. ಇನ್ನು ಮುಂದೆ ದೇವರ ಮೇಲೆ ಸಿನಿಮಾ ಮಾಡುತ್ತೇನೆ ಎಂದರು.