ನಿವೃತ್ತಿ ಬಳಿಕ ನಾನು ಯಾವುದೇ ಸರ್ಕಾರಿ ಹುದ್ದೆ ಸ್ವೀಕರಿಸಲ್ಲ: ಸಿಜೆಐ ಗವಾಯಿ| B R Gavai

BR Gavai
Published on

B R Gavai: ನಿವೃತ್ತಿ ನಂತರ ನಾನು ಯಾವುದೇ ಸರ್ಕಾರಿ ಹುದ್ದೆಯನ್ನ ಸ್ವೀಕರಿಸಲ್ಲ, ಆದರೆ ಸಮಾಲೋಚನೆ ಮತ್ತು ಮಧ್ಯಸ್ಥಿಕೆದಾರನಾಗಿ ಕೆಲಸ ಮಾಡುವುದಾಗಿ ಶನಿವಾರ (ಜು. 26) ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಹೇಳಿದ್ದಾರೆ

ಮಹಾರಾಷ್ಟ್ರದ ಅಮರಾವತಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ದಿವಂಗತ ಟಿ.ಆರ್. ಗಿಲ್ಡಾ ಸ್ಮಾರಕ ಇ-ಗ್ರಂಥಾಲಯ ಉದ್ಘಾಟಿಸಿ ಮಾತನಾಡಿದ ಸಿಜೆಐ "ನವೆಂಬರ್ 24ರ ನಂತರ ನಾನು ಯಾವುದೇ ಸರ್ಕಾರಿ ಹುದ್ದೆಯನ್ನು ಸ್ವೀಕರಿಸುವುದಿಲ್ಲ. ಈ  ಹಿಂದೆ ಹಲವಾರು ಸಂದರ್ಭಗಳಲ್ಲಿ ಹೇಳಿದ್ದೇನೆ" ಎಂದಿದ್ದಾರೆ.

ತಮ್ಮ ಹುಟ್ಟುರಾದ ಅಮರಾವತಿ ಬಳಿಯ ದಾದಾಪುರಕ್ಕೆ ಭೇಟಿ ನೀಡಿ, ಕೇರಳ ಮತ್ತು ಬಿಹಾರದ ರಾಜ್ಯಪಾಲರಾಗಿದ್ದ ತಂದೆ ಆರ್.ಎಸ್​.ಗವಾಯಿ ಸ್ಮಾರಕಕ್ಕೆ ತೆರಳಿ ಗೌರವ ನಮನ ಸಲ್ಲಿಸಿದರು.

ದಾದಾ ಸಾಹೇಬ್ ಎಂದೇ ಕರೆಯಲಾಗುತ್ತಿದ್ದ ಆರ್.ಎಸ್.ಗವಾಯಿ ಅವರ ಹೆಸರನ್ನು ದಾರಾಪುರದ ಗ್ರಾಮದ ಭವ್ಯ ದ್ವಾರಕ್ಕೆ ಇಡಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net