ಆರ್​​ಎಸ್​​ಎಸ್​ ಹಾಗೂ ಅದರ ಸಹ ಸಂಘಟನೆಗಳನ್ನು ನಾನು ಸಂಘ ಪರಿವಾರ ಎನ್ನುವುದಿಲ್ಲ: ರಾಹುಲ್ ಗಾಂಧಿ

rahul gandhi
rahul gandhi
Published on

ನವದೆಹಲಿ: 'ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್​ಎಸ್​ಎಸ್​) ಹಾಗೂ ಅದರ ಸಹ ಸಂಘಟನೆಗಳನ್ನು ಸಂಘ ಪರಿವಾರವೆಂದು ಇನ್ಮುಂದೆ ನಾನು ಕರೆಯುವುದಿಲ್ಲ' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಈ ಕುರಿತು ಗುರುವಾರ ಹಿಂದಿಯಲ್ಲಿ ಟ್ವೀಟ್ ಮಾಡಿರುವ ಅವರು, ತಾವೇಕೆ ಸಂಘ ಪರಿವಾರವೆಂದು ಕರೆಯುವುದಿಲ್ಲ ಎಂಬುದಕ್ಕೆ ಕಾರಣಗಳನ್ನು ನೀಡಿದ್ದಾರೆ.

'ಪರಿವಾರ ಎಂದರೆ ಅಲ್ಲೊಂದು ಕುಟುಂಬ ಇರುತ್ತದೆ. ಮಹಿಳೆ ಮಕ್ಕಳು ಹಿರಿಯರು ಇರುತ್ತಾರೆ. ಪ್ರೀತಿ ವಾತ್ಸಲ್ಯವೇ ಪರಿವಾರದ ಜೀವಾಳ. ಆದರೆ ಆರ್​ಎಸ್​​ಎಸ್​ ಹಾಗೂ ಅದರ ಸಹ ಸಂಘಟನೆಗಳಲ್ಲಿ ಇಂತಹ ಯಾವುದೇ ಲಕ್ಷಣಗಳು ಕಂಡು ಬರುವುದಿಲ್ಲ. ಹೀಗಾಗಿ ನಾನು ಅದನ್ನು ಪರಿವಾರ ಎಂದು ಕರೆಯುವುದಿಲ್ಲ' ಎಂದು ಹೇಳಿದ್ಧಾರೆ.

ಕಳೆದ ಮಂಗಳವಾರ ಉತ್ತರ ಪ್ರದೇಶದಲ್ಲಿ ಕ್ರೈಸ್ತ ಸನ್ಯಾಸಿಗಳ ಮೇಲೆ ಎಬಿವಿಪಿ ಹಾಗೂ ಭಜರಂಗ ದಳದ ಕಾರ್ಯಕರ್ತರು ಹಲ್ಲೆ ಮಾಡಿದ್ದರು. ಈ ಘಟನೆಯನ್ನು ಆಧಾರವಾಗಿಟ್ಟುಕೊಂಡು ರಾಹುಲ್ ಈ ರೀತಿ ಹೇಳಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net