

John Abraham: ನಾನು ಎಂದಿಗೂ ಛಾವಾ, ದಿ ಕಾಶ್ಮೀರ್ ಫೈಲ್ಸ್ ನಂತಹ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದು ಬಾಲಿವುಡ್ ಸ್ಟಾರ್ ನಟ ಜಾನ್ ಅಬ್ರಹಾಂ ತಿಳಿಸಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಜಾನ್, ಛಾವಾ ಮತ್ತು ದಿ ಕಾಶ್ಮೀರ್ ಫೈಲ್ಸ್‌ನಂತಹ ರಾಜಕೀಯವಾಗಿ ಪ್ರಭಾವಿತವಾದ ಚಿತ್ರಗಳ ಹೆಚ್ಚುತ್ತಿರುವ ಜನಪ್ರಿಯತೆಯ ಬಗ್ಗೆ ಮಾತನಾಡಿದ್ದು, ಇವೆರಡೂ ಬಾಕ್ಸ್ ಆಫೀಸ್‌ನಲ್ಲಿ ಭಾರಿ ಯಶಸ್ಸನ್ನು ಗಳಿಸಿವೆ ಆದರೆ ಈ ಸಿನಿಮಾಗಳು ರಾಜಕೀಯ ವಿಚಾರಕ್ಕಾಗಿ ತೀವ್ರ ಟೀಕೆಗಳನ್ನು ಎದುರಿಸಿದವು ಎಂದು ಹೇಳಿದ್ದಾರೆ.
ನಾನು ನನ್ನ ಚಲನಚಿತ್ರಗಳನ್ನು ನಿರ್ಮಿಸಿದ ರೀತಿಗೆ ನಾನು ಜವಾಬ್ದಾರನಾಗಿರುತ್ತೇನೆ. ಆದರೆ, ನಾನು ಬಲಪಂಥೀಯ ಅಥವಾ ಎಡಪಂಥೀಯನಲ್ಲ. ನಾನು ರಾಜಕೀಯೇತರ. ಬಲಪಂಥೀಯ ಚಲನಚಿತ್ರಗಳು ಹೆಚ್ಚಿನ ಪ್ರೇಕ್ಷಕರನ್ನು ಕಂಡುಕೊಳ್ಳುತ್ತವೆ ಎಂಬುದು ನನಗೆ ಚಿಂತೆ ಮಾಡುವಂತೆ ಮಾಡಿದೆ. ನೀವು ನನ್ನನ್ನು ಯಾವ ಮಾರ್ಗ ಆನುಸರಿಸುತ್ತಿರಾ ಎಂದು ಕೇಳಿದರೆ, ನಾನು ವಾಣಿಜ್ಯ ಮಾರ್ಗವನ್ನು ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.
ಅಲ್ಲದೆ, ಮುಂದೂವರೆದು ಮಾತನಾಡಿದ ಜಾನ್, ನಾನು ಛಾವಾ ನೋಡಿಲ್ಲ, ಆದರೆ ಜನರು ಅದನ್ನು ಇಷ್ಟಪಟ್ಟಿದ್ದಾರೆಂದು ನನಗೆ ತಿಳಿದಿದೆ. ದಿ ಕಾಶ್ಮೀರ್ ಫೈಲ್ಸ್ ಚಿತ್ರವನ್ನು ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ. ಆದರೆ, ರಾಜಕೀಯ ವಾತಾವರಣದಲ್ಲಿ ಜನರನ್ನು ಓಲೈಸುವ ಉದ್ದೇಶದಿಂದ ಚಲನಚಿತ್ರಗಳನ್ನು ನಿರ್ಮಿಸಿದಾಗ ಮತ್ತು ಇಂತಹ ಚಲನಚಿತ್ರಗಳು ಪ್ರೇಕ್ಷಕರನ್ನು ಸೆಳೆಯುತ್ತವೆ. ಈ ವಿಷಯ ನನಗೆ ಭಯಾನಕವಾಗಿ ಕಾಡುತ್ತದೆ ಎಂದು ಹೇಳಿದ್ದಾರೆ.
ಅಲ್ಲದೆ, ನಾನು ಎಂದಿಗೂ ಆಮಿಷಕ್ಕೆ ಒಳಗಾಗಿಲ್ಲ, ಮತ್ತು ನಾನು ಈ ರೀತಿಯ ಚಲನಚಿತ್ರಗಳನ್ನು ಎಂದಿಗೂ ಮಾಡುವುದಿಲ್ಲ ಎಂದು ಈ ಸಂದರ್ಭದಲ್ಲಿ ತಮ್ಮ ಆಭಿಪ್ರಾಯವನ್ನು ತಿಳಿಸಿದ್ದಾರೆ.(ಏಜೆನ್ಸೀಸ್)
ವಿಕ್ಕಿ ಕೌಶಲ್ ನಟಿಸಿದ ಛಾವಾ ಚಿತ್ರವು ಮೊಘಲ್ ಸಾಮ್ರಾಜ್ಯದ ವಿರುದ್ಧ ಹೋರಾಡಿದ ಮರಾಠಾ ದೊರೆ ಸಂಭಾಜಿ ಮಹಾರಾಜ್ ಅವರ ಕಥೆಯನ್ನು ಹೇಳುತ್ತದೆ. ಈ ಛಾವಾ ಚಿತ್ರವು ರಾಜಕೀಯವಾಗಿ ಹಲವಾರು ವಿವಾದಗಳನ್ನು ಸೃಷ್ಟಿಸಿತ್ತು. ಕಾಶ್ಮೀರಿ ಪಂಡಿತರನ್ನು ಯಾವ ರೀತಿಯಾಗಿ ಓಡಿಸಲಾಯಿತು ಎಂದು ತಿಳಿಸುತ್ತದೆ. ದಿ ಕಾಶ್ಮೀರ್ ಫೈಲ್ಸ್ ಚಿತ್ರವು ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಆದರೆ, ವ್ಯಾಪಕ ರಾಜಕೀಯ ಚರ್ಚೆಯನ್ನು ಹುಟ್ಟುಹಾಕಿತು.(ಏಜೆನ್ಸೀಸ್)