ಬಂಗಲೆ ಖಾಲಿ ಮಾಡುವ ಕುರಿತು ಪ್ರಿಯಾಂಕಾ ಗಾಂಧಿ ಗರಂ ಆಗಿದ್ದೇಕೆ?

priyanka
Published on

ನವದೆಹಲಿ: ಇಲ್ಲಿಯ ಲೋಧಿ ಎಸ್ಟೇಟ್‌ನಲ್ಲಿರುವ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡುವ ವಿಷಯದ ಕುರಿತು ದಿಲ್ಲಿಯ ಲೋಧಿ ಎಸ್ಟೇಟ್‌ನಲ್ಲಿರುವ ಸರಕಾರಿ ಬಂಗಲೆಯನ್ನು ಪ್ರಿಯಾಂಕಾ ಗಾಂಧಿ ವಾಧ್ರಾ ಸ್ವಲ್ಪ ಗರಂ ಆಗಿದ್ದಾರೆ.

ಇದಕ್ಕೆ ಕಾರಣ ಬಂಗಲೆ ಖಾಲಿ ಮಾಡುವಂತೆ ನೋಟಿಸ್‌ ಬಂದಿದ್ದಕ್ಕಲ್ಲ, ಬದಲಿಗೆ ಮನೆ ಖಾಲಿ ಮಾಡಿಸದಂತೆ ಪ್ರಿಯಾಂಕಾ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತಿದ್ದಾರೆ ಎಂದು ಹರಡಿರುವ ಸುದ್ದಿಗೆ.

ಈ ಕುರಿತು ಸ್ಪಷ್ಟನೆ ನೀಡಿರುವ ಪ್ರಿಯಾಂಕಾ, ಸರ್ಕಾರದ ನೋಟಿಸ್‍ನಂತೆ ಆಗಸ್ಟ್ 1ರಂದು ನಾನು ಬಂಗಲೆಯನ್ನು ಖಾಲಿ ಮಾಡಲಿದ್ದೇನೆ. ಮನೆ ಖಾಲಿ ಮಾಡಿಸದಂತೆ ನಾನು ಯಾರ ಬಳಿಯೂ ಮನವಿ ಮಾಡಿಲ್ಲ. ಈ ಬಗ್ಗೆ ಸುಖಾಸುಮ್ಮನೆ ಇಲ್ಲಸಲ್ಲದ ವದಂತಿ ಹರಿದಾಡುತ್ತಿದ್ದು, ಇವುಗಳ ಬಗ್ಗೆ ನಂಬಬೇಡಿ ಎಂದಿದ್ದಾರೆ.

ಮನೆ ಖಾಲಿ ಮಾಡುವಂತೆ ನನಗೆ ಜುಲೈ 1ರಂದು ಸರ್ಕಾರ ನೋಟಿಸ್ ನೀಡಿದೆ. ಅದರಂತೆ ನಾನು ಆಗಸ್ಟ್ ಒಂದರಂದು ಮನೆ ಖಾಲಿ ಮಾಡಲಿದ್ದೇನೆ. ಒಂದು ತಿಂಗಳ ನೋಟಿಸ್‌ ಇದ್ದುದರಿಂದ ಆ ಅವಧಿಯಲ್ಲಿಯೇ ಖಾಲಿ ಮಾಡಲಿದ್ದೇನೆ ಎಂದಿದ್ದಾರೆ. ಮನೆ ಖಾಲಿ ಮಾಡಿಸಬೇಡಿ ಎಂದಾಗಲೀ, ಅವಧಿಯನ್ನು ವಿಸ್ತರಣೆ ಮಾಡಿ ಎಂದಾಗಲೀ ಮನವಿ ಮಾಡಿಲ್ಲ ಎಂದಿದ್ದಾರೆ.

ಉತ್ತರ ಪ್ರದೇಶದ ರಾಜಕಾರಣದ ಕುರಿತು ಪ್ರಿಯಾಂಕ ಜೋರು ಧ್ವನಿಯಲ್ಲಿ ಮಾತನಾಡಲಾರಂಭಿಸಿದ ಬೆನ್ನಲ್ಲೆ ದೆಹಲಿಯಲ್ಲಿ ನೀಡಲಾಗಿದ್ದ ಬಂಗಲೆಯನ್ನು ಖಾಲಿ ಮಾಡುವಂತೆ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯ ನೋಟಿಸ್ ನೀಡಿತ್ತು. ಈ ಮೊದಲು ಪ್ರಿಯಾಂಕ ಅವರಿಗೆ ನೀಡಲಾಗಿದ್ದ ಎಸ್‍ಪಿಜಿ ಭದ್ರತೆಯನ್ನು ಸರ್ಕಾರ ಹಿಂಪಡೆದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net