ಎಲ್ಲರೂ ಮನೆಗೆ ಹೋಗಿ ಎಂದ ದೀದಿ; ಆರು ಗಂಟೆ ಆಗಲಿ ಎಂದು ಕಾಯತ್ತಿದ್ದಾರೆ ಮಮತಾ ಬೆಂಬಲಿಗರು!

Mamata
Published on

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಈಗಾಗಲೇ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್​ ಭಾರಿ ಮುನ್ನಡೆಯಲಿದ್ದು, ಜನರು ಬೀದಿಗಿಳಿದು ದೀದಿಗೆ ಜೈಕಾರ ಹೇಳಲು ಆರಂಭಿಸಿದ್ದಾರೆ. ಅಲ್ಲದೆ ಕಾರ್ಯಕರ್ತರು ಜಮಾಯಿಸಲಾರಂಭಿಸಿದ್ದು, ಅವರೆಲ್ಲರ ಕುತೂಹಲ ಹೆಚ್ಚಿಸುವ ಕೆಲಸವನ್ನು ಮಮತಾ ಬ್ಯಾನರ್ಜಿ ಮಾಡಿದ್ದಾರೆ.

ಈಗಾಗಲೇ ಟಿಎಂಸಿ ಭಾರಿ ಮುನ್ನಡೆಯಲ್ಲಿ ಇರುವುದರಿಂದ ಎಲ್ಲರಿಗೂ ಧನ್ಯವಾದ ಹೇಳಿರುವ ಮಮತಾ ಬ್ಯಾನರ್ಜಿ, ಯಾರೂ ಮೆರವಣಿಗೆಗಳನ್ನು ಮಾಡುವ ಮೂಲಕ ವಿಜಯೋತ್ಸವ ಆಚರಿಸಬಾರದು, ಎಲ್ಲರೂ ಮನೆಗೆ ಹೋಗಿ ಎಂದು ಕೋರಿಕೊಂಡಿದ್ದಾರೆ. ಮಾತ್ರವಲ್ಲ, ಆರು ಗಂಟೆ ಬಳಿಕ ತಾವೇ ಮಾಧ್ಯಮಗಳ ಮೂಲಕ ತಮ್ಮ ವಿಚಾರ-ಅನಿಸಿಕೆಗಳನ್ನು ಹಂಚಿಕೊಳ್ಳುವುದಾಗಿಯೂ ಹೇಳಿದ್ದಾರೆ. ಟಿಎಂಸಿಯ ಭಾರಿ ಮುನ್ನಡೆಯ ಹಿನ್ನೆಲೆಯಲ್ಲಿ ಮಮತಾ ಬ್ಯಾನರ್ಜಿ ಏನು ಹೇಳಲಿದ್ದಾರೆ ಎಂಬ ಕುತೂಹಲದಲ್ಲಿ ಈಗ ಟಿಎಂಸಿ ಬೆಂಬಲಿಗರು ಕಾಯುತ್ತಿದ್ದಾರೆ. 292 ಸ್ಥಾನಗಳ ಪೈಕಿ ಟಿಎಂಸಿ 215 ಸ್ಥಾನಗಳಿಂದ ಈಗಾಗಲೇ ಭಾರಿ ಮುಂಚೂಣಿಯಲ್ಲಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net