ನಾನು ಕೆಲಸದ ಮೇಲೆ ಗಮನಹರಿಸಬೇಕು; ಇನ್‌ಸ್ಟಾದಿಂದ ದೂರವಿರುತ್ತೇನೆಂದ 'ರಾಜ್ ಬಿ ಶೆಟ್ಟಿ' | cinema

raj b shetty
Published on

cinema; ನನಗೆ ಕೆಲಸ ಇರುವುದರಿಂದ ಕೆಲ ದಿನಗಳ ಕಾಲ ಇನ್‌ಸ್ಟಾಗ್ರಾಂನಿಂದ ದೂರ ಇರುತ್ತೇನೆ ಎಂದ ನಟ ಹಾಗೂ ನಿರ್ದೇಶಕರಾದ ರಾಜ್ ಬಿ ಶೆಟ್ಟಿ ಘೋಷಿಸಿದ್ದಾರೆ.

ನಾನು ಕೆಲಸದ ಮೇಲೆ ಗಮನಹರಿಸಬೇಕಾಗಿರುವುದರಿಂದ ನಾನು ನನ್ನ ಇನ್‌ಸ್ಟಾದಿಂದ ದೂರವಿರುತ್ತೇನೆ, ಇನ್ನು ಮುಂದೆ ನನ್ನ ತಂಡ ಅದನ್ನು ನಿರ್ವಹಿಸುತ್ತದೆ ಧನ್ಯವಾದಗಳು ಎಂದು ರಾಜ್​ ಬಿ ಶೆಟ್ಟಿ ಪೋಸ್ಟ್​ ಮೂಲಕ ತಿಳಿಸಿದ್ದಾರೆ. ಬದಲಿಗೆ ಅವರು ತಮ್ಮ ಖಾತೆಯನ್ನು ನಮ್ಮ ತಂಡವೇ ನಿರ್ವಹಿಸುತ್ತದೆ ಎಂದು ಹೇಳಿರುವುದರಿಂದ ಮುಂದಿನ್ ಅಪ್​ಡೇಟ್ಸ್​ಗಳಿಗೆ ಯಾವುದೇ ಅಡ್ಡಿಯಾಗುವುದಿಲ್ಲ.

(ಏಜೆನ್ಸೀಸ್)

ಕ್ವಾಲಿಟಿ ಕಂಟೆಂಟ್​ ಮೂಲಕ ಕನ್ನಡ ಸಿನಿರಸಿಕರ ಎದುರಿಗೆ ಹಾಜರಾಗಿರುವ ನಟ, ನಿರ್ದೇಶಕ ಹಾಗೂ ನಿರ್ಮಾಪಕ ರಾಜ್​ ಬಿ.ಶೆಟ್ಟಿ, ‘ಸು ಫ್ರಮ್​ ಸೋ’ ಎಂಬ ಹಾಸ್ಯ ಕಥಾಹಂದರ ಸಿನಿಮಾವನ್ನು ಜನರ ಮುಂದಿಟ್ಟಿದ್ದಾರೆ. ಬರಹಗಾರ, ನಿರ್ದೇಶಕ ಜೆ.ಪಿ. ತುಮಿನಾಡ್ ಬರೆದು, ನಿರ್ದೇಶಿಸಿರುವ ಈ ಚಿತ್ರವು ಚಿತ್ರಮಂದಿರಕ್ಕೆ ಬಂದ ಸಿನಿಪ್ರೇಕ್ಷಕರನ್ನು ನಗಿಸಿ, ಅವರ ಹೊಟೆಯನ್ನು ಹುಣ್ಣಾಗಿಸಿದೆ ಕಳಿಸುವುದಿಲ್ಲ ಎಂಬುದನ್ನು ವಿಮರ್ಶೆ ಮತ್ತು ವ್ಯಾಪಕ ಪ್ರಶಂಸೆಗಳೇ ಖಚಿತಪಡಿಸಿವೆ. ಈಗಾಗಲೇ ಚಿತ್ರ ತನ್ನ ಗೆಲುವಿನ ದಾಖಲೆಯನ್ನು ಮುರಿದಿದೆ.

ಮತ್ತೊಂದು ಚಿತ್ರದ ತಯಾರಿಯಲ್ಲಿರುವ ರಾಜ್ ಬಿ ಶೆಟ್ಟಿ , ಸ್ಕ್ರಿಪ್ಟ್ ಮಾಡಬೇಕಾದ ಕಾರಣದಿಂದ ಸೋಶಿಯಲ್ ಮೀಡಿಯಾದಿಂದ ದೂರ ಉಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net