ನನಗೆ ಪುರುಷರು ಬೇಕು, ನಾನು ಗರ್ಭಿಣಿ ಆಗಬೇಕು! ಈಕೆಯ ವಂಚನೆಗೆ ಬಿದ್ದು 11 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ..

Bbau - 2025-11-01T145731.545
Published on

ಪುಣೆ: ಇತ್ತೀಚಿನ ದಿನಗಳಲ್ಲಿ ಸೈಬರ್​ ವಂಚನೆ ಸೇರಿದಂತೆ ಆನ್​ಲೈನ್ ಮೋಸದ ಜಾಲಗಳಲ್ಲಿ ಬೀಳುವವರ ಸಂಖ್ಯೆ ಹೆಚ್ಚಾಗಿದೆ. ಅದೆಷ್ಟೇ ಏಚ್ಚರ ವಹಿಸಿದರು ವಂಚನೆ ಮಾಡಿದ ಬಳಿಕಷ್ಟೇ ಮೋಸ ಜಾಲ ತಿಳಿಯುತ್ತದೆ. ಆದಾಗ್ಯೂ ಇಲ್ಲೊಬ್ಬ ಲೇಡಿ ಮೋಹದ ಬಲೆ ಬಿದ್ದ ವ್ಯಕ್ತಿ ಬರೋಬ್ಬರಿ 11 ಲಕ್ಷ ರೂ. ಕಳೆದುಕೊಂಡ ಘಟನೆ ಬೆಳಕಿಗೆ ಬಂದಿದೆ.

ಮಹಾರಾಷ್ಟ್ರದ ಪುಣೆಯಲ್ಲಿ ವಾಸಿಸುವ 44 ವರ್ಷದ ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಜಾಹಿರಾತುವೊಂದನ್ನು ಗಮನಿಸಿದ್ದಾರೆ. ಜಾಹೀರಾತುವಿನಲ್ಲಿ 'ನನಗೆ ತಾಯಿ ಆಗುವ ಸಂತೋಷ ನೀಡಬಲ್ಲ ಪರುಷ ಬೇಕಾಗಿದ್ದಾರೆ' ಎಂಬ ಪೋಸ್ಟ್​ ವೊಂದನ್ನು ನೋಡಿದ್ದಾರೆ.

ಆ ಜಾಹೀರಾತಿನಲ್ಲಿ ಆಕೆ ತನ್ನನ್ನು ಗರ್ಭಧರಿಸಬಲ್ಲ ಪುರುಷನನ್ನು ಹುಡುಕುತ್ತಿದ್ದಾಳೆ ಮತ್ತು ಪ್ರತಿಯಾಗಿ ಆಕೆ ಪುರುಷನಿಗೆ 25 ಲಕ್ಷ ರೂಪಾಯಿಗಳನ್ನು ನೀಡುತ್ತಾಳೆ ಎಂದು ಹೇಳಲಾಗಿತ್ತು. ಈ ಆಕರ್ಷಕ ಜಾಹೀರಾತನ್ನು ನಂಬಿದ ಆ ವ್ಯಕ್ತಿ ವಂಚಕರ ಬಲೆಗೆ ಬಿದ್ದನು. ವಂಚಕರು ವಿವಿಧ ನೆಪಗಳ ಅಡಿಯಲ್ಲಿ ಆತನಿಂದ 11 ಲಕ್ಷ ರೂಪಾಯಿಗಳನ್ನು ಸುಲಿಗೆ ಮಾಡಿದ್ದಾರೆ. ಇದೀಗ ಮಹಿಳೆ ವಿರುದ್ಧ ಪ್ರಕರಣ ದಾಖಲಾಗಿತ್ತು. ಆಕೆ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ವಂಚಕರ ಬಲೆಗೆ ಬಿದ್ದಿದ್ದೇಗೆ?

ಸಾಮಾಜಿಕ ಮಾಧ್ಯಮದಲ್ಲಿ ಸ್ಕ್ರೋಲ್​ ಮಾಡುವಾಗ ಮಹಿಳೆಯ ವಿಡಿಯೋದಲ್ಲಿ '' ನನಗೆ ತಾಯಿಯಾಗುವ ಮತ್ತು ತಾಯ್ತನದ ಸಂತೋಷವನ್ನು ನೀಡುವ ಪುರುಷ ಬೇಕು. ನಾನು ಅವನಿಗೆ 25 ಲಕ್ಷ ರೂಪಾಯಿಗಳನ್ನು ನೀಡುತ್ತೇನೆ. ಅವನು ಯಾವುದೇ ಜಾತಿಯವನಾಗಿದ್ದರೂ, ಅನಕ್ಷರಸ್ಥನಾಗಿರಬಹುದು" ಎಂದು ಹೇಳಿದ್ದಾಳೆ. ಅಲ್ಲದೆ, ಈ ಕೆಲಸದಲ್ಲಿ ಆಸಕ್ತಿ ಹೊಂದಿರುವವರು ಸಂಪರ್ಕಿಸಲು ವೀಡಿಯೊದೊಂದಿಗೆ ಫೋನ್ ಸಂಖ್ಯೆಯನ್ನು ಸಹ ನೀಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದೆ.

ಸ್ಕ್ರೀನ್​ ಮೇಲೆ ನೋಡಿದ ನಂಬರ್​​ಗೆ ಕರೆ ಮಾಡಿದ್ದಾರೆ. ಪೋನ್​ಗೆ ಕರೆಗೆ ಉತ್ತರಿಸಿದ ವಂಚಕ ಆ ಮಹಿಳೆಯ ಸಹಾಯಕ ಎಂದು ಪರಿಚಯ ಮಾಡಿಕೊಂಡಿದ್ದಾನೆ. ಅಲ್ಲಿಂದ ಕೆಲವೇ ದಿನಗಳಲ್ಲಿ ವಿವಿಧ ಶುಲ್ಕ ಹೆಸರುಗಳ ನೆಪದಲ್ಲಿ ಹಂತ-ಹಂತವಾಗಿ ಆತನಿಂದ ವಂಚಕರು ಯುಪಿಐ ಮೂಲಕ 11 ಲಕ್ಷ ರೂ. ಹಾಕಿಸಿಕೊಂಡಿದ್ದಾರೆ. ಇದು ಯಾವಾಗ ವಂಚನೆ ಎಂದು ತಿಳಿಯಿತೋ ಅಂದನಿಂದ ವಂಚಕರು ಪೋನ್​ ಸ್ವೀಚ್​ ಆಫ್​ ಮಾಡಿಕೊಂಡಿದ್ದಾರೆ. ಬಳಿಕ ಇತ ಪೊಲೀಸರಿಗೆ ದೂರು ನೀಡಿದ್ದಾನೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net