ಅದೊಂದು ಬಿಗ್​ ಮಿಸ್ಟೇಕ್​ ಮಾಡಬಾರದಿತ್ತು ನಾನು! ಶಾಕಿಂಗ್ ಹೇಳಿಕೆ ನೀಡಿದ ಸೌತ್ ಬ್ಯೂಟಿ ನಯನತಾರ​

ನಟಿ ನಯನತಾರ
ನಟಿ ನಯನತಾರ
Published on

ಪ್ರಮುಖ ಮುಖ್ಯಾಂಶಗಳು

  • ಸಿನಿ ಬದುಕಿನಲ್ಲಿ ಅದೊಂದು ತಪ್ಪು ಮಾಡಬಾರದಿತ್ತು
  • ಆ ಸಿನಿಮಾ ಒಪ್ಪಿಕೊಂಡಿದ್ದೇ ಮಿಸ್ಟೇಕ್​
  • ಅಚ್ಚರಿ ಸಂಗತಿ ಬಿಚ್ಚಿಟ್ಟ ಸೌತ್ ಬ್ಯೂಟಿ
ತಮಿಳುನಾಡು: ಲೇಡಿ ಸೂಪರ್​ ಸ್ಟಾರ್​ ಎಂದೇ ಖ್ಯಾತಿಯಾಗಿರುವ ನಯನತಾರಾ ಆರಂಭದಲ್ಲಿ ಆ್ಯಂಕರ್ ಆಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದವರು. ಸೌತ್​​ ಇಂಡಸ್ಟ್ರಿಯಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿ, ಇದೀಗ ಬಾಲಿವುಡ್ ಇಂಡಸ್ಟ್ರಿಯಲ್ಲೂ ಯಶಸ್ಸು ಗಳಿಸಿದ್ದಾರೆ. ಮದುವೆಯಾಗಿ ಇಬ್ಬರು ಮಕ್ಕಳಿದ್ದರು ನಯನತಾರಾ ಕ್ರೇಜ್​ ಮಾತ್ರ ಇಂದಿಗೂ ತಮಿಳು ಚಿತ್ರರಂಗದಲ್ಲಿ ಕಮ್ಮಿ ಆಗಿಲ್ಲ. 
ಈಗಲೂ ಅವರ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಈಗಾಗಲೇ 75ಕ್ಕೂ ಅಧಿಕ ಚಿತ್ರಗಳನ್ನು ಮುಗಿಸಿರುವ ಈ ಲೇಡಿ ಸೂಪರ್ ಸ್ಟಾರ್ ಇತ್ತೀಚಿನ ದಿನಗಳಲ್ಲಿ ನಾಯಕಿ ಪ್ರಧಾನ ಚಿತ್ರಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಎಷ್ಟೇ ಬಿಜಿಯಿದ್ದರೂ ಮಕ್ಕಳು, ಪತಿಯೊಂದಿಗೆ ಕಾಲ ಕಳೆಯುತ್ತಾರೆ. ಪ್ರತಿ ಸಿನಿಮಾಗಳಲ್ಲಿ ನಯನತಾರಾ ಅವರ ನಟನೆಯನ್ನು ನೋಡಿದ ಅಭಿಮಾನಿಗಳು ಪ್ರೀತಿಯಿಂದ ಲೇಡಿ ಸೂಪರ್ ಸ್ಟಾರ್ ಎಂದು ಕರೆಯುವುದು ವಿಶೇಷ. ತಮ್ಮ ಸಿನಿಪಯಣಕ್ಕೆ ಸಂಬಂಧಿಸಿದಂತೆ ಕೆಲವು ಕುತೂಹಲಕಾರಿ ವಿಚಾರಗಳನ್ನು ಹಂಚಿಕೊಂಡಿರುವ ನಯನತಾರಾ, ಪ್ರತ್ಯೇಕವಾಗಿ ಅದೊಂದು ಚಿತ್ರದ ಬಗ್ಗೆ ಮಾತನಾಡಿದ್ದಾರೆ. 
"ನನ್ನ ಸಿನಿ ಕರಿಯರ್​ನ ಆರಂಭದಲ್ಲಿ 'ಗಜನಿ' ಚಿತ್ರದಲ್ಲಿ ನಟಿಸುವುದಾಗಿ ಒಪ್ಪಿಕೊಂಡಿದ್ದೇ ನಾನು ಮಾಡಿದ ತಪ್ಪು" ಎಂದಿದ್ದಾರೆ. ಅಸಲಿಗೆ ತಮಿಳು ಸ್ಟಾರ್ ಸೂರ್ಯ ಅವರ ಬ್ಲಾಕ್‌ಬಸ್ಟರ್ ಸಿನಿಮಾ ಗಜನಿ. ವಿಭಿನ್ನ ಕಥಾಹಂದರವನ್ನು ಹೊಂದಿರುವ ಈ ಚಿತ್ರವನ್ನು ಎ.ಆರ್. ಮುರುಗದಾಸ್ ನಿರ್ದೇಶಿಸಿದ್ದು, ನಯನತಾರಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಯಶಸ್ಸಿನಲ್ಲಿ ಅವರು ಪ್ರಮುಖ ಪಾತ್ರ ವಹಿಸಿರುವುದು ಸಿನಿಪ್ರಿಯರಿಗೆ ತಿಳಿದ ಸಂಗತಿಯೇ. ಆದರೆ, ಒಂದಷ್ಟು ವರ್ಷಗಳ ಬಳಿಕ ಇತ್ತೀಚಿನ ಸಂದರ್ಶನವೊಂದರಲ್ಲಿ ಅವರು ನೀಡಿರುವ ಹೇಳಿಕೆಗಳು ಅಚ್ಚರಿ ಮೂಡಿಸಿವೆ. 
"ನನ್ನ ವೃತ್ತಿಜೀವನದಲ್ಲಿ ನಾನು ಮಾಡಿದ ದೊಡ್ಡ ತಪ್ಪು ಎಂದರೆ ಅದು 'ಗಜನಿ' ಒಪ್ಪಿಕೊಂಡಿದ್ದು. ಈ ಚಿತ್ರದಲ್ಲಿ ನನ್ನನ್ನು ಎರಡನೇ ನಾಯಕಿಯಾಗಿ ಮಾಡುವ ತಪ್ಪು ನಾನು ಮಾಡಿಕೊಂಡೆ. ಕಥೆ ಹೇಳಿದಾಗ ನನಗೆ ಹೆಚ್ಚು ಇಷ್ಟವಾದ ಪಾತ್ರವು ಅಂತಿಮ ಔಟ್‌ಪುಟ್‌ನಲ್ಲಿ ಅಂತೆಯೇ ಇರಲಿಲ್ಲ. ಅನೇಕ ದೃಶ್ಯಗಳನ್ನು ಕಟ್​ ಮಾಡಲಾಯಿತು. ನನ್ನನ್ನು ಗ್ಲಾಮರ್ ಗೊಂಬೆಯಾಗಿ ಮಾತ್ರ ತೋರಿಸಲಾಯಿತು" ಎಂದು ನಯನತಾರಾ ಹೇಳಿದ್ದಾರೆ,(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net